ಬೆಂಗಳೂರು : ಭಾರತದ ಅತಿ ದೊಡ್ಡ ಪುಸ್ತಕ ಭಂಡಾರ ಸಪ್ನ ಬುಕ್ ಹೌಸ್ ಇದರ ವತಿಯಿಂದ ಕೋಡಿಬೆಟ್ಟು ರಾಜಲಕ್ಷ್ಮಿ ಇವರ ಅಹರ್ನಿಶಿ ಪ್ರಕಾಶನದ ಪ್ರಕಟಣೆ ‘ಲಲಿತ ಮಂಟಪ’ ಕೃತಿ ಬಿಡುಗಡೆ ಹಾಗೂ ಅದರ ವಿನೂತನ ರಂಗಪ್ರಯೋಗವನ್ನು ದಿನಾಂಕ 25 ಮಾರ್ಚ್ 2026ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ಹಂಪನಕಟ್ಟೆಯಲ್ಲಿರುವ ‘ಸಪ್ನ ಬುಕ್ ಹೌಸ್’ನಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಡಾ. ಕೆ. ಚಿನ್ನಪ್ಪ ಗೌಡ, ಶಕುಂತಳಾ ಶೆಟ್ಟಿ, ಪಿ.ಬಿ. ಹರೀಶ್ ರೈ, ರಾಜಲಕ್ಷ್ಮಿ ಕೋಡಿಬೆಟ್ಟು ಇವರುಗಳು ಭಾಗವಹಿಸಲಿದ್ದಾರೆ. ಕೃತಿ ಆಧರಿಸಿದ ವಿನೂತನ ರಂಗಪ್ರಯೋಗ ‘ಗೆಜ್ಜೆ ಬರೆದ ಅಕ್ಷರ’ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಇವರಿಂದ ನಡೆಯಲಿದೆ.

