ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ವತಿಯಿಂದ ಮನೆಯೇ ಗ್ರಂಥಾಲಯ ಅಭಿಯಾನದ ಅಂಗವಾಗಿ ಹಿರಿಯ ನಾಗರಿಕ ವೇದಿಕೆ ಕಚೇರಿಯಲ್ಲಿ ಗ್ರಂಥಾಲಯದ ಅನುಷ್ಠಾನವು ದಿನಾಂಕ 22 ಏಪ್ರಿಲ್ 2025ರ ಮಂಗಳವಾರದಂದು ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷರಾದ ಪಿ. ನಾಗರಾಜರಾವ್ “ಪುಸ್ತಕ ನಮ್ಮ ಅತ್ಯುತ್ತಮ ಮಿತ್ರ. ಪುಸ್ತಕಗಳನ್ನು ಓದುವುದರಿಂದ ನಮ್ಮ ಸಮಯವನ್ನು ಕ್ರಿಯಾಶೀಲವಾಗಿ ಕಳೆಯಬಹುದಾಗಿದೆ. ಅಲ್ಲದೆ , ಸಾಕಷ್ಟು ಜ್ಞಾನ ಸಂಪಾದನೆ ಮಾಡಬಹುದು. ಈ ನಿಟ್ಟಿನಲ್ಲಿ ಕ. ಸಾ. ಪ. ಉಡುಪಿ ತಾಲೂಕಿನ ಕಾಯ೯ ಅಭಿನಂದನೀಯ” ಎಂದರು. ಕ. ಸಾ. ಪ. ಉಡುಪಿ ತಾಲೂಕು ಅಧ್ಯಕ್ಷರಾದ ರವಿರಾಜ್ ಎಚ್.ಪಿ ಪ್ರಸ್ತಾವನೆಗೈದರು.
ಈ ಸಂದರ್ಭದಲ್ಲಿ ಕ. ಸಾ. ಪ. ಉಡುಪಿ ತಾಲೂಕು ಗೌರವ ಕಾರ್ಯದರ್ಶಿ ಜನಾದ೯ನ್ ಕೊಡವೂರು, ಅಭಿಯಾನದ ಸಂಚಾಲಕ ರಾಘವೇಂದ್ರ ಪ್ರಭು ಕವಾ೯ಲು , ಹಿರಿಯ ನಾಗರಿಕ ವೇದಿಕೆಯ ಗೌರವಾಧ್ಯಕ್ಷರಾದ ಕೆ. ಸದಾನಂದ ಹೆಗ್ಡೆ, ಉಪಾಧ್ಯಕ್ಷರಾದ ಕೆ. ಮುರಳೀಧರ, ಕಾರ್ಯದರ್ಶಿ ನಂದಕುಮಾರ್, ಕೋಶಾಧಿಕಾರಿ ಉಮೇಶ್ ರಾವ್, ಉಡುಪಿ ಜಿಲ್ಲಾ ಹಿರಿಯ ನಾಗರಿಕರ ಒಕ್ಕೂಟದ ಅಧ್ಯಕ್ಷ ಹೆಚ್.ವಿಶ್ವನಾಥ್ ಹೆಗ್ಡೆ. ಹಿರಿಯ ಸದಸ್ಯ ಸಿ. ಯಸ್. ರಾವ್. ಮತ್ತು ಆಡಳಿತ ಸಮಿತಿಯ ಸದಸ್ಯರು ಹಾಜರಿದ್ದರು.
Subscribe to Updates
Get the latest creative news from FooBar about art, design and business.
Previous Articleನುಲ್ಲಿಪಾಡಿಯಲ್ಲಿ ದಿ. ಬೇಕಲ ರಾಮ ನಾಯಕ ಸ್ಮರಣಾಂಜಲಿ | ಏಪ್ರಿಲ್ 27
Next Article ‘ಕಾಸರಗೋಡು ಜಿಲ್ಲಾ ಚುಟುಕು ಕಾವ್ಯ ಪ್ರಶಸ್ತಿ – 2025’ ಪ್ರಕಟ