ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ‘ಬೆನ್ನಿದ ಪನಿ ದೊಂಪ’ ವಿವೇಕ ರೈ ಇವರ ಪುಸ್ತಕ ಬಿಡುಗಡೆ ಹಾಗೂ ವಿಚಾರ ಕೂಟ ಕಾರ್ಯಕ್ರಮವನ್ನು ದಿನಾಂಕ 22 ಆಗಸ್ಟ್ 2026ರಂದು ಮಧ್ಯಾಹ್ನ 2-30 ಗಂಟೆಗೆ ಮಂಗಳೂರಿನ ತುಳು ಭವನದಲ್ಲಿ ಆಯೋಜಿಸಲಾಗಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಇವರ ಅಧ್ಯಕ್ಷತೆ ಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಪಿ.ಎಲ್. ಧರ್ಮ ಇವರು ಉದ್ಘಾಟನೆ ಮಾಡಲಿದ್ದಾರೆ. ವಿಚಾರ ಕೂಟದಲ್ಲಿ ಗೋಷ್ಠಿ 1ರಲ್ಲಿ ನಿವೃತ್ತ ಪ್ರಾಂಶುಪಾಲರಾದ ಗುಣಪಾಲ ಕಡಂಬ ಇವರು ‘ತುಳು ಅಕಾಡೆಮಿದ ಅಧ್ಯಕ್ಷೆರಾದ್ ವಿವೇಕ ರೈಕುಲು’ ಮತ್ತು ಗೋಷ್ಠಿ 2ರಲ್ಲಿ ಪ್ರಾಂಶುಪಾಲರಾದ ಡಾ. ನಿಕೇತನ ಇವರು ‘ವಿವೇಕ ರೈಕುಲೆನ ತುಳು ಸಾಹಿತ್ಯ ಸಂಶೋಧನೆ’ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ. ಗೋಷ್ಠಿ 3ರಲ್ಲಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಂಸ್ಥಾಪಕರಾದ ಡಾ. ತುಕಾರಾಮ ಪೂಜಾರಿ ಮತ್ತು ಪತ್ರಕರ್ತ ಕೋಡಿಬೆಟ್ಟು ರಾಜಲಕ್ಷ್ಮೀ ಇವರು ವಿವೇಕ ರೈ ಇವರೊಡನೆ ಮಾತುಕತೆ ನಡೆಸಲಿದ್ದಾರೆ.

