ಹಾಸನ : ಮಾಣಿಕ್ಯ ಪ್ರಕಾಶನ (ರಿ.) ಹಾಸನ ವತಿಯಿಂದ ದಿನಾಂಕ 02 ನವೆಂಬರ್ 2025 ಭಾನುವಾರ ಹಾಸನದ ಸಂಸ್ಕೃತ ಭವನದಲ್ಲಿ ಹಮ್ಮಿಕೊಳ್ಳುವ ದಶಮಾನೋತ್ಸವ ಕಾರ್ಯಕ್ರಮದಲ್ಲಿ ನಾಲ್ಕು ಕೃತಿಗಳ ಲೋಕಾರ್ಪಣೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಾಶಕಿ ದೀಪಾ ಉಪ್ಪಾರ್ ತಿಳಿಸಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಬಾ.ನಂ. ಲೋಕೇಶ್ ವಹಿಸಲಿದ್ದು, ಜಿಲ್ಲಾ ಲೇಖಕಿಯರ ಬಳಗದ ಅಧ್ಯಕ್ಷೆ ರಾಜೇಶ್ವರಿ ಹುಲ್ಲೇನಹಳ್ಳಿ ಆಶಯ ನುಡಿಗಳನ್ನಾಡಲಿದ್ದಾರೆ. ಹಿರಿಯ ಸಾಹಿತಿ ಗೊರೂರು ಅನಂತರಾಜುರವರು ಸಾಹಿತಿ ಎಚ್.ಎಸ್. ಬಸವರಾಜುರವರ ಬಿಡಿ ಲೇಖನಗಳ ‘ಗುಚ್ಛ’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಲಿದ್ದಾರೆ. ಸಾಹಿತಿ ಬಿ.ಎಂ. ಭಾರತಿ ಹಾದಿಗೆಯವರು ಯುವ ಸಾಹಿತಿ ವಾಸು ಸಮುದ್ರವಳ್ಳಿಯವರ ವಿಮರ್ಶಾ ಲೇಖನಗಳ ‘ಒಳಗಣ್ಣು’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಲಿದ್ದಾರೆ. ಕವಯಿತ್ರಿ ವಾಣಿ ಮಹೇಶ್‌ರವರು ಸಾಹಿತಿ ಹೊ.ರಾ. ಪರಮೇಶ್‌ರವರ ‘ಸಜ್ಜನ ಕನ್ನಡ ಕವಿಗಳು’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಲಿದ್ದಾರೆ. ಕವಯಿತ್ರಿ ಕೆ.ಸಿ. ಗೀತಾರವರು ಚಿಕ್ಕಮಗಳೂರಿನ ಸಾಹಿತಿ ದೀಪಕ್ ನಿಡಘಟ್ಟರವರ ಪತ್ತೆದಾರಿ ಕಾದಂಬರಿ ‘ಮಾಯಾಗಿರಿಯ ನೆರಳು’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಲಿದ್ದಾರೆ.
ನಂತರ ನಡೆಯುವ ಅಂತರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ರುಮಾನ ಜಬೀರ್, ಎಚ್.ಬಿ. ಚೂಡಾಮಣಿ, ಚಂದನ ಚನ್ನರಾಯಪಟ್ಟಣ, ಪರಮಾನಂದ ದಳಪತಿ ಮುಂಬಯಿ, ವೆಂಕಮ್ಮ ಡಿ. ಗಾಂವ್ಕರ್ ದಾಂಡೇಲಿ, ಚಂದ್ರಕಲಾ ಎಂ. ಆಲೂರು, ಲಲಿತ ಎಸ್. ಸಕಲೇಶಪುರ, ರೂಪೇಶ್ ಸಾಗರ ಶಿವಮೊಗ್ಗ, ಮಲ್ಲೇಶ್ ಜಿ. ಹಾಸನ, ಚಂದ್ರು ಪಿ. ಗೌಡ ಆಲೂರು, ಯು.ಎಸ್. ಅಯ್ಯಪ್ಪ ಮಂತ್ರಾಲಯ, ತಾಸೀನಾ ರಝಾಕ್ ಬೇಲೂರು, ಲತಾ ಎ. ಆರ್. ಬಾಳೆಹೊನ್ನೂರು, ವೀರೇಶ್ ಎಸ್. ಕುಬಸದ್ ಅಣ್ಣಿಗೇರಿ, ಮಂಜುನಾಥ್ ಎಚ್. ಚಿರಕನಹಳ್ಳಿ, ಗೀತಾ ವಿ. ಹಸ್ಮಕಲ್ ತರೀಕೆರೆ, ನವ್ಯ ಯಶವಂತ ಚಿಕ್ಕೋಟೆ, ಜಯಶಂಕರ್ ಬೆಳಗುಂಬ, ಸಿಲ್ವೆಸ್ಟರ್ ಕ್ರಾಸ್ತ ಬಿಳಗವಳ್ಳಿ, ರಾಣಿ ರವೀಂದ್ರ ಕೊಡಗು, ಪೂಜಾ ಬಿ. ಕೊಂಡಿಕೊಪ್ಪ ಧಾರವಾಡ, ಭಾರತಿ ಎಚ್.ಎನ್. ಹಾಸನ, ಪಾತರಾಜು ಎಸ್.ಡಿ. ಹಾಸನ, ಡಾ. ರಕ್ಷಾ ಸೇರಿದಂತೆ ಹಲವು ಕವಿಗಳು ವಿವಿಧ ರಾಜ್ಯಗಳಿಂದ ಆಗಮಿಸುತ್ತಿದ್ದಾರೆ.