ಉಚ್ಛಿಲ : ವಿದ್ವಾನ್ ರಾಮಚಂದ್ರ ಉಚ್ಚಿಲ್ (ಚ.ರಾ.) ಜನ್ಮಶತಮಾನೋತ್ಸವ ಸಮಿತಿ ಮಂಗಳೂರು, ಗುರುಶಿಷ್ಯ ಒಕ್ಕೂಟ, ಚ.ರಾ. ಪ್ರಕಾಶನ ಮುಂಬಯಿ ಆಯೋಜಿಸುವ ಕೃತಿಸಂಚಯ ಲೋಕಾರ್ಪಣೆ ಮತ್ತು ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ದಿನಾಂಕ 20 ಏಪ್ರಿಲ್ 2025ರ ಅಪರಾಹ್ನ ಘಂಟೆ 2.30 ರಿಂದ ಉಚ್ಚಿಲದ ಬೋವಿ ಹಿರಿಯ ಪ್ರಾಥಮಿಕ ಶಾಲೆಯ ವಜ್ರಮಹೋತ್ಸವ ಸ್ಮಾರಕ ಕಟ್ಟಡದ ಸಭಾಗೃಹದಲ್ಲಿ ನಡೆಯಲಿದೆ.
ಸಂಶೋಧಕರು ಮತ್ತು ಮುಂಬಯಿ ವಿ.ವಿ.ಯ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ತಾಳ್ತಜೆ ವಸಂತ ಕುಮಾರ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಪ್ರಸಿದ್ಧ ವೈದ್ಯರು ಮತ್ತು ಯಕ್ಷಗಾನ ಅರ್ಥದಾರಿಗಳಾದ ಡಾ. ರಮಾನಂದ ಬನಾರಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಇವರು ಚ.ರಾ. ಸಂಸ್ಮರಣೆ ಗೈಯ್ಯಲಿದ್ದು, ಪ್ರಧಾನ ಸಂಪಾದಕಿಯಾದ ಡಾ. ವಾಣಿ ಎನ್. ಉಚ್ಚಿಲ್‌ಕರ್ ಕೃತಿ ಪರಿಚಯ ಮಾಡಿಕೊಡಲಿದ್ದಾರೆ.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಯಕ್ಷಗಾನ ವಿದ್ವಾಂಸರಾದ ಡಾ. ಎಂ. ಪ್ರಭಾಕರ ಜೋಶಿ, ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಮುದ್ದಣ ಪ್ರತಿಷ್ಠಾನದ ಸ್ಥಾಪಕರಾದ ಶ್ರೀ ನಂದಳಿಕೆ ಬಾಲಚಂದ್ರ ರಾವ್, ಉಡುಪಿ ಯಕ್ಷರಂಗದ ಕಾರ್ಯದರ್ಶಿಗಳಾದ ಶ್ರೀ ಮುರಳಿ ಕಡೆಕಾರ್, ಮಂಗಳೂರಿನ ಆಕೃತಿ ಆಶಯ ಪಬ್ಲಿಕೇಶನ್ಸ್ ಇದರ ಶ್ರೀ ಕಲ್ಲೂರು ನಾಗೇಶ ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ‘ಕರ್ಣಪರ್ವ’ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು, ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ರಾಜಾರಾಮ ಹೊಳ್ಳ ಕೈರಂಗಳ, ಚೆಂಡೆ ಹಾಗೂ ಮದ್ದಳೆಯಲ್ಲಿ ಶ್ರೀ ಮಯೂರ ನಾಯ್ಗ ಮಾಡೂರುಗುತ್ತು ಮತ್ತು ಶ್ರೀ ಸ್ಕಂದಪ್ರಸಾದ ಮಯ್ಯ ವರ್ಕಾಡಿ, ಅರ್ಥದಾರಿಗಳಾಗಿ ಡಾ. ಎಂ. ಪ್ರಭಾಕರ ಜೋಶಿ, ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಡಾ. ಪುರುಷೋತ್ತಮ ಬಿಳಿಮಲೆ ಹಾಗೂ ಶ್ರೀ ಸದಾಶಿವ ಆಳ್ವ ತಲಪಾಡಿ ಭಾಗವಹಿಸಲಿದ್ದಾರೆ.

