ಮಡಿಕೇರಿ : ಲೇಖಕಿ ಪ್ರತಿಮಾ ಹರೀಶ್ ರೈ ಬರೆದಿರುವ ‘ಅಂತರಗಂಗೆ’ ಕೃತಿ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 09-06-2024ರಂದು ಬೆಳಗ್ಗೆ 10-30 ಗಂಟೆಗೆ ನಗರದ ರೆಡ್ ಬ್ರಿಕ್ಸ್ ಇನ್‌ನ ಸತ್ಕಾರ್ ಸಭಾಂಗಣದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಕ.ಸಾ.ಪ.ದ ಮಾಜಿ ಅಧ್ಯಕ್ಷರಾದ ಶ್ರೀ ಟಿ.ಪಿ. ರಮೇಶ್ ಉದ್ಘಾಟಿಸಲಿದ್ದು, ಸಾಹಿತಿ ಶ.ಗ. ನಯನ ತಾರಾ ‘ಅಂತರಗಂಗೆ’ ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಮಡಿಕೇರಿ ಆಕಾಶವಾಣಿ ಉದ್ಘೋಷಕರಾದ ಶ್ರೀ ಸುಬ್ರಾಯ ಸಂಪಾಜೆ ಅಧ್ಯಕ್ಷತೆ ವಹಿಸಲಿರುವ ಕಾರ್ಯಕ್ರಮದಲ್ಲಿ ಕೊಡಗು ವಿ.ವಿ.ಕನ್ನಡ ಉಪನ್ಯಾಸಕ ಡಾ.ಜಮೀರ್ ಅಹಮದ್ ಕೃತಿಯ ಕುರಿತಂತೆ ಮಾತನಾಡಲಿದ್ದು, ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಶ್ರೀ ಜಿ. ರಾಜೇಂದ್ರ, ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಶ್ರೀ ಅನಿಲ್ ಹೆಚ್.ಟಿ., ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಡಿ. ಜಗದೀಶ್ ರೈ ಇವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.