ಕೊಪ್ಪಳ : ಮೇಘನಾ ಪ್ರಕಾಶನ ಕೊಪ್ಪಳ ಹಾಗೂ ಕೊಪಣನಾಡು ಸಂಶೋಧನಾ ಸಂಸ್ಥೆ ಗಂಗಾವತಿ ಇವರ ಸಹಯೋಗದಲ್ಲಿ ಡಾ. ಶರಣಬಸಪ್ಪ ಕೋಲ್ಕಾರ ಇವರ ‘ಕೃಷ್ಣದೇವರಾಯನ ಸಮಾಧಿ ಹಾಗೂ ಕೆಂಪೇಗೌಡ ಬಂಧನದಲ್ಲಿದ್ದ ಸೆರೆಮನೆ’ ಕಿರು ಪುಸ್ತಕ ಲೋಕಾರ್ಪಣೆ ಸಮಾರಂಭವು ದಿನಾಂಕ 03 ಆಗಸ್ಟ್ 2025ರಂದು ಬೆಳಗ್ಗೆ 11-00 ಗಂಟೆಗೆ ಕೊಪ್ಪಳ ಕುಷ್ಟಗಿ ರಸ್ತೆಯಲ್ಲಿರುವ ‘ಸಪ್ತಗಿರಿ ಸಹ್ಯಾದ್ರಿ’ಯಲ್ಲಿ ನಡೆಯಲಿದೆ.
ಈ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ. ಮಹಾಂತೇಶ ಮಲ್ಲನಗೌಡರ್ ಇವರು ವಹಿಸಲಿದ್ದು, ಸಾಹಿತಿ ಡಾ. ಬಸವರಾಜ ಪೂಜಾರ ಇವರು ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಉಪನ್ಯಾಸಕರಾದ ಪ್ರೊ. ಶರಣಬಸಪ್ಪ ಬಿಳಿಯಲಿ ಇವರು ಕೃತಿ ಕುರಿತು ಮಾತನಾಡಲಿದ್ದು, ಉಪನ್ಯಾಸಕರಾದ ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್ ಮತ್ತು ಡಾ. ಶರಣಬಸಪ್ಪ ಕೋಲ್ಕಾರ ಇವರುಗಳು ಭಾಗವಹಿಸಲಿದ್ದಾರೆ.