ಬೆಂಗಳೂರು : ವರ್ಷನಿಧಿ ಪ್ರಕಾಶನ ಇದರ ವತಿಯಿಂದ ಕೃತಿಗಳ ಲೋಕಾರ್ಪಣೆ ಸಮಾರಂಭವನ್ನು ದಿನಾಂಕ 22 ನವೆಂಬರ್ 2025ರಂದು ಸಂಜೆ 5-00 ಗಂಟೆಗೆ ಬೆಂಗಳೂರು ಜಯನಗರದ 4ನೇ ಬ್ಲಾಕ್ ನಲ್ಲಿರುವ ಭಾರತ್ ಎಜುಕೇಷನ್ ಸೊಸೈಟಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಡಾ. ನಟರಾಜ್ ತಲಘಟ್ಟಪುರ ಇವರ ‘ಬಯಲರೂಪ’ ಐತಿಹಾಸಿಕ ನಾಟಕ, ‘ಬೊಗಸೆ ತುಂಬ ಮಣ್ಣು’ ನಾಟಕ, ‘ಮಿಡಿನಾಗರಗಳ ನಡುವೆ’ ಕಥಾ ಸಂಕಲನ, ‘ಬಣ್ಣ ಮೆಚ್ಚಿದವರು’ ನಾಟಕದ ಇಂಗ್ಲೀಷ್ ಅನುವಾದ, ಡಾ ರೇಖಾ ಕೌಶಿಕ್ ಪಿ.ಆರ್. ಇವರ ‘ಅಡ್ಮೈರರ್ಸ್ ಆಫ್ ಕಲರ್’ ಹಿಂದಿ ಅನುವಾದ ಹಾಗೂ ಪ್ರೊ. ಷಾಕಿರಾ ಖಾನಂ ಇವರ ‘ರಂಗೋ ಕೆ ಉಪಾಸಕ್’ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಡೋಜ ಚಂದ್ರಶೇಖರ ಕಂಬಾರ ಇವರು ಈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಚಿತ್ರಕಲಾ ಪರಿಷತ್ತು ಇದರ ಅಧ್ಯಕ್ಷರಾದ ಡಾ. ಬಿ.ಎಲ್. ಶಂಕರ್ ಇವರು ಕೃತಿಗಳ ಲೋಕಾರ್ಪಣೆ ಮಾಡಲಿದ್ದಾರೆ.

