ಮಂಗಳೂರು : ಜಿಲ್ಲಾ ರಾಜೋತ್ಸವ ಪ್ರಶಸ್ತಿ ವಿಜೇತ ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ.) ಇವರ ಸಹಕಾರದೊಂದಿಗೆ ಲೇಖಕಿ ಶಶಿಲೇಖಾ ಬಿ. ಇವರ ಮೂರು ಕೃತಿಗಳ ಲೋಕಾರ್ಪಣೆ ಸಮಾರಂಭವು ದಿನಾಂಕ 22 ಮಾರ್ಚ್ 2025ರ ಶನಿವಾರ ಅಪರಾಹ್ನ 2.30ರಿಂದ ಮಂಗಳೂರಿನ ಉರ್ವಸ್ಟೋರ್ ನಲ್ಲಿರುವ ಅಶೋಕನಗರ ಅಂಚೆ ಕಚೇರಿ ಬಳಿಯ ‘ಸಾಹಿತ್ಯ ಸದನ’ದಲ್ಲಿ ನಡೆಯಲಿದೆ.
ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ.) ಇದರ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ಟಿ. ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸರಾದ ಡಾ. ಗಣೇಶ ಅಮೀನ್ ಸಂಕಮಾರ್ ಕೃತಿಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ‘ಬೆಳಕಿನ ಬೆನ್ನು ಹತ್ತಿ’ ಕೃತಿಯ ಕುರಿತು ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಡಾ. ಆರ್. ನರಸಿಂಹಮೂರ್ತಿ, ‘ಜೀವ ಭಾವದ ಹರಿವು’ ಕೃತಿಯ ಕುರಿತು ಮೂಡುಬಿದಿರೆ ಆಳ್ವಾಸ್ ಕಾಲೇಜು ಇಲ್ಲಿನ ಉಪನ್ಯಾಸಕಿಯಾದ ಡಾ. ಸುಧಾರಾಣಿ ಹಾಗೂ ‘ಮುಂಜಾವದ ಮಾತು’ ಕೃತಿಯ ಕುರಿತು ವಿಮರ್ಶಕರು, ಸಾಹಿತಿ ಹಾಗೂ ವಿಶ್ರಾಂತ ಆಕಾಶವಾಣಿ ಪ್ರಸಾರಕರಾದ ಶ್ರೀ ಮುದ್ದು ಮೂಡುಬೆಳ್ಳೆ ಮಾತನಾದಲಿದ್ದಾರೆ. ಲೇಖಕರು ಮತ್ತು ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ಶಶಿಲೇಖಾ ಬಿ. ಪ್ರಾಸ್ತಾವಿಕವಾಗಿ ಹಾಗೂ ಪ್ರಕಾಶಕರರಾದ ಮಂಗಳೂರಿನ ಆಕೃತಿ ಆಶಯ ಪಬ್ಲಿಕೇಶನ್ಸ್ ಇದರ ಶ್ರೀ ಕಲ್ಲೂರು ನಾಗೇಶ ಮಾತನಾಡಲಿದ್ದಾರೆ.