ಮಂಗಳೂರು : ಕುಮಾರಿ ರಿಶಲ್ ಬ್ರಿಟ್ನಿ ಫೆರ್ನಾಂಡಿಸ್ ಅವರ ಲೇಖನಗಳ ಸಂಗ್ರಹದ ಕೃತಿಯನ್ನು ದಿನಾಂಕ 06-05-2024ರಂದು ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆ ಮಾಡಲಾಯಿತು. ರೊನಾಲ್ಡ್ ಫೆರ್ನಾಂಡಿಸ್ ಮತ್ತು ನ್ಯಾನ್ಸಿ ಫೆರ್ನಾಂಡಿಸ್ ಅವರ ಪುತ್ರಿ ರಿಚೆಲ್ ಈಗ ಎಸ್‌ಡಿಎಂ ಕಾನೂನು ಕಾಲೇಜಿನ ಮೊದಲ ವರ್ಷದ ಎಲ್.ಎಲ್.ಬಿ. ವಿದ್ಯಾರ್ಥಿನಿ. 132 ಪುಟಗಳ ಪುಸ್ತಕವನ್ನು ನವದೆಹಲಿಯ ತನಿಶಾ ಪಬ್ಲಿಕೇಷನ್ ಪ್ರಕಟ ಮಾಡಿದೆ.
ಕೃತಿ ಬಿಡುಗಡೆ ಮಾಡಿದ ಸುರತ್ಕಲ್ ಗೋವಿಂದದಾಸ್ ಕಾಲೇಜಿನ ಪ್ರಾಂಶುಪಾಲ ಕೃಷ್ಣಮೂರ್ತಿ ಮಾತನಾಡಿ “ಶಾಲಾ ದಿನಗಳಲ್ಲೇ ಅನೇಕ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ರಿಚೆಲ್ ಅವರ ಲೇಖನಗಳು ಹಲವು ವಾರಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ” ಎಂದರು. ಮಂಗಳೂರು ಕ್ಯಾಥಲಿಕ್ ಸಭಾದ ಮಾಜಿ ಸದಸ್ಯ ರಾಲ್ಫಿ ಡಿ’ಕೋಸ್ತಾ, ಗೋಕರ್ಣನಾಥ ಕಾಲೇಜಿನ ಪ್ರಾಂಶುಪಾಲ ರಘುರಾಜ್, ಹಳೆಯಂಗಡಿ ಸರ್ಕಾರಿ ಪಿ.ಯು. ಕಾಲೇಜಿನ ಅಧ್ಯಾಪಕಿ ಅನ್ನಪೂರ್ಣ ಮತ್ತು ಲೇಡಿಹಿಲ್ ವಿಕ್ಟೋರಿಯಾ ಪಿ.ಯು. ಕಾಲೇಜಿನ ಪ್ಲೇವಿ ಬ್ಯಾಪ್ಟಿಸ್ಟ್ ಉಪಸ್ಥಿತರಿದ್ದರು.
ಕುಮಾರಿ ರಿಶಲ್ ಬ್ರಿಟ್ನಿ ಫೆರ್ನಾಂಡಿಸ್ ಯುವ ವಾಗ್ಮಿ ಹಾಗೂ ಬರಹಗಾರ್ತಿಯಾಗಿ ಭಾಷಣ, ಆಶು ಭಾಷಣ ಪ್ರಬಂಧ ಇಂತಹ ಹಲವಾರು ಚಟುವಟಿಕೆಗಳಲ್ಲಿ ಇದ್ದು ಅಂತರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಹಾಗೂ ಇತರ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಅನೇಕ ಸಂಸ್ಥೆಗಳಿಂದ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದ ಇವರು ಶೈಕ್ಷಣಿಕ ಸಾಧನೆ ಕೂಡ ಮಾಡಿದ್ದಾರೆ. ಸಾಹಿತಿಕ ಚಟುವಟಿಕೆಯಲ್ಲಿ ಸಾಧನೆ ಮಾಡಿದ ಇವರು ತಮ್ಮ 21ನೇ ವಯಸ್ಸಿನಲ್ಲಿ ‘Essays on Collective Topics’ ಎಂಬ ಕೃತಿಯಲ್ಲಿ 16 ವಿಷಯಗಳು ಇರುವಂತಹ ಪ್ರಬಂಧಗಳ ಸಂಕಲನ ಬರೆದು ಯುವ ಲೇಖಕಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ.