Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕನ್ನಡ ಸಿರಿ ಸ್ನೇಹ ಬಳಗದಿಂದ ಕೃತಿ ಬಿಡುಗಡೆ ಕಾರ್ಯಕ್ರಮ  
    Book Release

    ಕನ್ನಡ ಸಿರಿ ಸ್ನೇಹ ಬಳಗದಿಂದ ಕೃತಿ ಬಿಡುಗಡೆ ಕಾರ್ಯಕ್ರಮ  

    July 10, 2024No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಮಡಿಕೇರಿ : ಕನ್ನಡ ಸಿರಿ ಸ್ನೇಹ ಬಳಗ ಹಾಗೂ ಮಡಿಕೇರಿ ಸರಕಾರಿ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮಾಚರಣೆ ಅಂಗವಾಗಿ ಸಾಹಿತಿ ದಿ. ಜಿ. ಟಿ. ನಾರಾಯಣ ರಾವ್ ಅವರ ಬದುಕು ಬರಹ ಕುರಿತ ಉಪನ್ಯಾಸ  ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮವು ದಿನಾಂಕ 06-07-2024ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
    ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕೊಡಗು ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷರಾದ  ಬಿ. ಜಿ. ಅನಂತಶಯನ ಮಾತನಾಡಿ  “ವಿದ್ಯಾರ್ಥಿಗಳು ಪ್ರಶ್ನಿಸುವ ಹಾಗೂ ಉತ್ತರಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು,ಸಾಹಿತ್ಯದ ಕಡೆಗೆ ಒಲವು ತೋರಬೇಕು. ಬರಹದಲ್ಲಿ ಕಲಾತ್ಮಕತೆ, ಸೃಜನಶೀಲತೆ ಇರಬೇಕು. ಸುಪ್ತ ಮನಸ್ಸು ಇದ್ದಲ್ಲಿ ಎಲ್ಲವೂ ಇರುತ್ತದೆ. ನಿಮ್ಮಲ್ಲಿಯೂ ಸುಪ್ತ ಮನಸ್ಸು ಇದೆ, ನೀವೂ ಕೂಡ ಸಾಹಿತಿಗಳಾಗಬಹುದು. ನಿರಂತರ ಕಲಿಕೆ, ಪ್ರಯತ್ನದಿಂದ ಎಲ್ಲವೂ ಸಾಧ್ಯವಾಗುತ್ತದೆ. ಕಣ್ಣು, ಕಿವಿ ತೆರೆದಿರಬೇಕು, ಆಗ ಸುಪ್ತ ಮನಸ್ಸು ಜಾಗೃತಗೊಳ್ಳುತ್ತದೆ.” ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
    ಕಾರ್ಯಕ್ರಮವನ್ನು ಉದ್ಘಾಟಿಸಿದ ಮಡಿಕೇರಿ ನಗರಸಭಾ ಸದಸ್ಯ ಕೆ. ಎಸ್. ರಮೇಶ್ ಮಾತನಾಡಿ “ನಾರಾಯಣ ರಾವ್ ಜಿ. ಟಿ. ಎನ್. ಎಂದೇ ಪ್ರಸಿದ್ಧರಾಗಿದ್ದರು. ಬೋಧಕರಾಗಿ ಹಲವಾರು ವಿದ್ಯಾರ್ಥಿ, ಸಾಹಿತಿಗಳ ಬಳಗವನ್ನು ಹೊಂದಿದ್ದರು. ಅನೇಕ ಪುಸ್ತಕಗಳನ್ನು ಬರೆದಿರುವ ಇವರಿಗೆ ಗಣಿತ ಹಾಗೂ ವಿಜ್ಞಾನ ಆಸಕ್ತಿಯ ಕ್ಷೇತ್ರ. ವಿಜ್ಞಾನದ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಇಂತಹ ಸಾಧಕರ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಎನಾದರೂ ಸಾಧನೆ ಮಾಡಿದರೆ ಅವರ ಹೆಸರು ಶಾಶ್ವತವಾಗಿ ಉಳಿಯುತ್ತದೆ. ವಿದ್ಯಾರ್ಥಿಗಳು ಕೂಡ ಸಾಧನೆ ಮಾಡಬಹುದು. ಈಗಿನಿಂದಲೇ ಸಣ್ಣ ಪುಟ್ಟ ಕವನಗಳನ್ನು ಬರೆಯುತ್ತಾ ಮುಂದೊಂದು ದಿನ ಅದನ್ನು ಪುಸ್ತಕವಾಗಿ ಪ್ರಕಟ ಮಾಡಬಹುದು. ‘ಕನ್ನಡ ಸಿರಿ ಸ್ನೇಹ ಬಳಗ’ ಸಾಹಿತ್ಯ ಪರಿಷತ್ತು ಮಾಡುವ ಚಟುವಟಿಕೆಗಳಿಗಿಂತಲೂ ಹೆಚ್ಚಿನ ಕಾರ್ಯಕ್ರಮಗಳನ್ನು ಮಾಡುತ್ತಿದೆ.” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
    ನಾರಾಯಣ ರಾವ್ ಅವರ ಬದುಕು ಬರಹದ ಬಗ್ಗೆ ಉಪನ್ಯಾಸ ನೀಡಿದ ಜಯಲಕ್ಷ್ಮೀ ಶೇಖರ್ “ನಾರಾಯಣ ರಾವ್ ಅವರು ಅನೇಕ ಕೃತಿಗಳನ್ನು ರಚನೆ ಮಾಡಿದ್ದು, ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡವರು. ಅವರ ಬದುಕು ಹಾಗೂ ಕೃತಿಗಳನ್ನು ಗಮನಿಸಿದರೆ ಜೀವನದ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಬಹುದಾಗಿದೆ. ನೊಬೆಲ್ ಪ್ರಶಸ್ತಿ ವಿಜೇತರನ್ನು ಸಂದರ್ಶನ ಮಾಡಿದ ಮೊದಲ ಭಾರತೀಯ ಎಂಬ ಖ್ಯಾತಿಗೆ ಒಳಗಾದವರು ನಾರಾಯಣ ರಾವ್. ಇತರರಿಗೆ ಸಹಾಯ ಮಾಡುವ ಹಾಗೂ ಸಮಾಜಕ್ಕಾಗಿ ಅರ್ಪಣೆ ಮಾಡುವ ಮನೋಭಾವ ಹೊಂದಿದ್ದ ರಾಯರು ಇಂದಿಗೂ ಎಂದೆಂದಿಗೂ ಆದರ್ಶಪ್ರಾಯರು.” ಎಂದು ಅಭಿಪ್ರಾಯಪಟ್ಟರು.
    ಮುಖ್ಯ ಅತಿಥಿಗಳಾಗಿದ್ದ ‘ಶಕ್ತಿ’ ಪತ್ರಿಕೆಯ ಉಪ ಸಂಪಾದಕ ಕುಡೆಕಲ್ ಸಂತೋಷ್ ಮಾತನಾಡಿ “ವಿದ್ಯಾರ್ಥಿಗಳು ಓದಿನೊಂದಿಗೆ ಇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು. ಕ್ರೀಡೆ, ಕಲೆ, ಸಂಗೀತ ಹೀಗೆ ಹಲವಾರು ಕ್ಷೇತ್ರಗಳಿದ್ದು, ಯಾವುದರಲ್ಲಾದರೂ ತೊಡಗಿಸಿಕೊಂಡರೆ ಬುದ್ಧಿಶಕ್ತಿಯೊಂದಿಗೆ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಸಾಹಿತ್ಯದಲ್ಲಿ ತೊಡಗಿಸಿಕೊಂಡರೆ ಜ್ಞಾನಾರ್ಜನೆಯೊಂದಿಗೆ ವಿಷಯದ ಗ್ರಹಿಕೆಯಾಗುತ್ತದೆ. ಸರಕಾರಿ ಶಾಲೆ ಎಂಬ ಕೀಳರಿಮೆ ಬೇಡ, ಸರಕಾರಿ ಶಾಲೆಯ ಬೋಧಕರು ತಿಳಿದವರು ಹಾಗೂ ಅಪಾರ  ಜ್ಞಾನವುಳ್ಳವರಾಗಿರುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು.” ಎಂದು ಹೇಳಿದರು.
    ಅತಿಥಿಯಾಗಿದ್ದ ಸಾಹಿತಿ ಕಿಗ್ಗಾಲು ಗಿರೀಶ್ ಮಾತನಾಡಿ “ಕೊಡಗಿನಲ್ಲಿ ಸಾಹಿತ್ಯದ ಅಭಿರುಚಿಯಿಲ್ಲ ಎಂಬ ಮಾತು ಇತ್ತು, ಆದರೆ ಅದು ಸುಳ್ಳು ಎಂಬದಕ್ಕೆ ಇತ್ತೀಚಿನ ದಿನಗಳಲ್ಲಿ ತಿಂಗಳಿಗೆ ಎರಡು, ಮೂರು ಕೃತಿಗಳು ರಚನೆಯಾಗುತ್ತಿರುವದೇ ಸಾಕ್ಷಿ. ಸಾಹಿತ್ಯ ರಚನೆ ಕಬ್ಬಿಣದ ಕಡಲೆ ಏನಲ್ಲ, ಏಕಾಗ್ರತೆ, ಹಾಗೂ ಮನಸು ಇದ್ದರೆ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವುದರೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳಬೇಕು.” ಎಂದು ಕರೆನೀಡಿದರು.
    ಪ್ರಾಸ್ತಾವಿಕವಾಗಿ ಮಾತನಾಡಿದ ಸ್ನೇಹ ಸಿರಿ ಬಳಗದ ಅಧ್ಯಕ್ಷ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ  ಬಿ. ಎಸ್. ಲೋಕೇಶ್ ಸಾಗರ್ ಮಾತನಾಡಿ “ಕರ್ನಾಟಕದ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಸಾಧನೆ ಮಾಡಿದ ಹಾಗೂ  ಶ್ರಮಿಸಿದವರಿಗೆ ಗೌರವ ನೀಡುವದು ಮತ್ತು  ಅವರನ್ನು ನೆನಪಿಸಿಕೊಳ್ಳುವುದರೊಂದಿಗೆ ಅವರುಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದೊಂದಿಗೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಬಳಗದ ಮೂಲಕ ಒಂದು ವರ್ಷದಲ್ಲಿ ಐವತ್ತು ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶ ಹೊಂದಿದ್ದು, ಇದು ಹತ್ತೊಂಬತ್ತನೇ ಕಾರ್ಯಕ್ರಮವಾಗಿದೆ. ಜಿಲ್ಲೆಯಾದ್ಯಂತ ಹಮ್ಮಿಕೊಳ್ಳುವ ಈ ಕಾರ್ಯಕ್ರಮಕ್ಕೆ ಎಲ್ಲರೂ ಸಹಕಾರ ನಿಡಬೇಕು.” ಎಂದು ಮನವಿ ಮಾಡಿಕೊಂಡರು.
    ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪಿ. ಆರ್. ವಿಜಯ್ ಮಾತನಾಡಿ “ಇಂತಹ ಕಾರ್ಯಕ್ರಮಗಳನ್ನು ಕಾಲೇಜಿನಲ್ಲಿ ನಡೆಸುವುದರಿಂದ ಮಹನೀಯರ ಪರಿಚಯವಾಗುವುದರೊಂದಿಗೆ ಮಕ್ಕಳಲ್ಲಿ ಸಾಹಿತ್ಯದ ಅರಿವು ಮೂಡುತ್ತದೆ. ಕಾರ್ಯಕ್ರಮಕ್ಕೆ ಬರುವ ಅತಿಥಿಗಳ ಪರಿಚಯವೂ ಆಗುತ್ತದೆ. ಮಕ್ಕಳಿಗೆ ಇದೊಂದು ಸೌಭಾಗ್ಯ. ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಯಬೇಕು. ಶಕ್ತಿ ಪತ್ರಿಕೆ ಓದಿದರೆ ಬಹಳಷ್ಟು ಮಾಹಿತಿ ಸಿಗುತ್ತದೆ. ಕೊಡಗಿನ ಸಾಹಿತಿಗಳ ಪರಿಚಯವಾಗುತ್ತದೆ. ಕೊಡಗಿನಲ್ಲಿ ಪ್ರವಾಸಿ ತಾಣಗಳು, ಬಾರ್, ಪಾರ್ಲರ್‌ಗಳು ಮಾತ್ರವಲ್ಲ, ಸಾಹಿತಿಗಳೂ ಇದ್ದಾರೆ. ಈ ಬಗ್ಗೆ ತಿಳಿದುಕೊಳ್ಳಬೇಕು. ಯಾವ ಸಿದ್ಧಾಂತವೂ ಜೀವನಕ್ಕೆ ಸಹಕಾರಿಯಾಗುವದಿಲ್ಲ, ಶ್ರಮವೇ ಸಿದ್ಧಾಂತವಾಗಬೇಕು. ಮನಸಿನಲ್ಲಿ ಚಿಂತನೆಗಳು ಮೂಡಬೇಕು. ಮಹನೀಯರ ಪುಸ್ತಕಗಳನ್ನು ಓದಬೇಕು.” ಎಂದು ಕಿವಿಮಾತು ಹೇಳಿದರು.
    ಇದೇ ಸಂದರ್ಭದಲ್ಲಿ ಕಿಗ್ಗಾಲು ಗಿರಿಶ್ ಅವರು ಬರೆದ ‘ಕಳೆದುಕೊಂಡವನು ಮತ್ತು ಇತರ ಕತೆಗಳು’ ಕೃತಿಯನ್ನು ಬಿ. ಜಿ. ಅನಂತಶಯನ ಅವರು ಲೋಕಾರ್ಪಣೆಗೊಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ವಿಜಯ ಇವರನ್ನು ಬಳಗದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
    ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿ, ಉಪನ್ಯಾಸಕ ಚಿದಾನಂದ ಸ್ವಾಗತಿಸಿ, ಉಪನ್ಯಾಸಕಿ ಪೂರ್ಣಿಮಾ ನಿರೂಪಿಸಿ, ಕವಿ ಪಿ.ಎಸ್.ವೈಲೇಶ್ ವಂದಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಪುತ್ತೂರಿನ ಪದ್ಮಿನೀ ಸಭಾಭವನದಲ್ಲಿ ಕೃತಿ ಲೋಕಾರ್ಪಣಾ ಸಮಾರಂಭ | ಜುಲೈ 21
    Next Article ರೂಪಕಲಾ ಆಳ್ವ ಅವರ ‘ಪಮ್ಮಕ್ಕೆನ ಪೊರುಂಬಾಟ’ ಕೃತಿಗೆ ಉಡುಪಿ ತುಳುಕೂಟದ ಪಣಿಯಾಡಿ ಪ್ರಶಸ್ತಿ-2024 
    roovari

    Add Comment Cancel Reply


    Related Posts

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಖ್ಯಾತ ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ನಿಧನ

    May 8, 2025

    ಆಳ್ವಾಸ್‌ನ ಶಿವರಾಮ ಕಾರಂತ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ

    May 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.