ಮಂಗಳೂರು : ಆಕೃತಿ ಆಶಯ ಪಬ್ಲಿಕೇಶನ್ಸ್ ಮಂಗಳೂರು ಇವರ ವತಿಯಿಂದ ಬೆಂಗಳೂರಿನ ರಾಜಾಜಿನಗರ ಪೇರೆಂಟ್ಸ್ ಅಸೋಶಿಯೇಶನ್ ಕಾಲೇಜು, ಪರಿಸರ ಸಂಗಮ ಮತ್ತು ಭೂಮಿ ಬುಕ್ಸ್ ಇವರ ಸಹಯೋಗದೊಂದಿಗೆ ಪ್ರೊ. ಮಾಧವ ಗಾಡ್ಗೀಳರ ಆತ್ಮಕಥೆ ‘A Walk up the Hill’ನ ಕನ್ನಡ ಆವೃತ್ತಿ ‘ಏರುಘಟ್ಟದ ನಡಿಗೆ’ ಅನುವಾದ ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ದಿನಾಂಕ 13 ಫೆಬ್ರವರಿ 2025ರಂದು ಬೆಳ್ಳಿಗೆ 10-00 ಗಂಟೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಶಿಕ್ಷಣ ತಜ್ಞರು ಮತ್ತು ಚಿಂತಕರಾದ ಪ್ರೊ. ಕೆ.ಈ. ರಾಧಾಕೃಷ್ಣ ಇವರ ಅಧ್ಯಕ್ಷತೆ ನಡೆಯುವ ಈ ಕಾರ್ಯಕ್ರಮದಲ್ಲಿ ಸನ್ಮಾನ್ಯ ಈಶ್ವರ ಖಂಡ್ರೆ ಇವರು ಆತ್ಮಕಥೆ ಕೃತಿಯನ್ನು ಲೋಕಾರ್ಪಣೆ ಮಾಡಲಿರುವರು. ಕೃಷಿಕರಾದ ಡಾ. ನರೇಂದ್ರ ರೈ ದೇರ್ಲ ಇವರು ಕೃತಿ ಅವಲೋಕನಗೈಯಲಿದ್ದು, ಮಾಜಿ ಸೈನಿಕ ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಇವರು ಗಾಡ್ಗೀಳರ ಪರಿಸರ ಕಾಣ್ಕೆಗಳ ಬಗ್ಗೆ ಮಾತನಾಡಲಿದ್ದಾರೆ.