ಬೆಂಗಳೂರು : ಕಾವ್ಯ ಸಂಜೆ ಮತ್ತು ಲಡಾಯಿ ಪ್ರಕಾಶನ ಇವುಗಳ ಸಹಯೋಗದಲ್ಲಿ ಡಾ. ಎಚ್.ಎಸ್. ಅನುಪಮಾ ಇವರ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 27 ಸೆಪ್ಟೆಂಬರ್ 2025ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಕುಮಾರ ಕೃಪ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಹಮ್ಮಿಕೊಳ್ಳಲಾಗಿದೆ.
ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಲಕ್ಷ್ಮಿ ಚಂದ್ರಶೇಖರ್ ಇವರು ಪುಸ್ತಕ ಬಿಡುಗಡೆ ಮಾಡಲಿದ್ದು, ಡಾ. ಮಮತಾ ಸಾಗರ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಬಿಡುಗಡೆಗೊಳ್ಳಲಿರುವ ಪುಸ್ತಕಗಳಾದ ‘ಎರಡಳಿದು’ ಮತ್ತು ‘ಅಮ್ಮಮ್ಮನ ಕವಿತೆಗಳು’ ಕುರಿತು ಕವಿಗಳಾದ ಎಚ್.ಎನ್. ಆರತಿ ಮತ್ತು ಯುವ ಬರಹಗಾರರಾದ ದಾದಾಪೀಠ್ ಜೈಮನ್ ಇವರು ಮಾತನಾಡಲಿದ್ದಾರೆ.