ಮಂಗಳೂರು : ಆಕೃತಿ ಆಶಯ ಪಬ್ಲಿಕೇಶನ್ಸ್ ಇದರ ವತಿಯಿಂದ ಪ್ರೊ. ಬಿ.ಎ. ವಿವೇಕ ರೈ ಇವರ ಕೃತಿ ಬಿಡುಗಡೆ ಸರಣಿ -1 ಕಾರ್ಯಕ್ರಮವನ್ನು ದಿನಾಂಕ 11 ಫೆಬ್ರವರಿ 2026ರಂದು ಪೂರ್ವಾಹ್ನ 11-30 ಗಂಟೆಗೆ ಮಂಗಳೂರು ಸುಲ್ತಾನ್ ಬತ್ತೇರಿ ರಸ್ತೆಯಲ್ಲಿರುವ ಪ್ರೆಸ್ ಕ್ಲಬ್ ನಲ್ಲಿ ಹಮ್ಮಿಕೊಳ್ಳಲಾಗಿದೆ.
‘ಪಡುವಣ ತೀರದ ಕನ್ನಡ ನಾಡಿನ’ ಕೃತಿ ಲೋಕಾರ್ಪಣೆ ಗೊಳ್ಳಲಿದ್ದು, ಚಂದ್ರಕಲಾ ನಂದಾವರ, ಡಾ. ಕೆ. ಚಿನ್ನಪ್ಪ ಗೌಡ, ಡಾ. ನಾ. ದಾಮೋದರ ಶೆಟ್ಟಿ, ಪ್ರೊ. ಬಿ.ಎ. ವಿವೇಕ ರೈ, ಮಂಗಳೂರಿನ ಮಾಧ್ಯಮ ಮಿತ್ರರು ಭಾಗವಹಿಸಲಿದ್ದಾರೆ.

