ಬಹುತೇಕ ಕಲೆಗಳಿಗೆ ತನ್ನದೇ ರೂಢಿಗತ ಮಾದರಿಗಳಿದ್ದ ಹಾಗೆ ಬರವಣಿಗೆಗೆ ಯಾವುದೇ ನಿರ್ದಿಷ್ಟ ಮಾದರಿಗಳು ಅಂದರೆ ಕಲಿಕಾ ಮಾದರಿಗಳು ಇರಲಾರವು, ಬರವಣಿಗೆಗೆ ಬೇಕಾಗಿರುವ ಬಹುದೊಡ್ಡ ಪೂರ್ವ ತಾಲೀಮು ‘ಅನುಭವ’ದ ಮಾಗುವಿಕೆ ; ಧ್ಯಾನಸ್ಥ ಸ್ಥಿತಿ. ಜೀವನಕ್ರಮದಲ್ಲಿ ಇವೆರಡೂ ಪ್ರಧಾನ ಸಂಕರಗಳೂ ಹೌದು. ಒಬ್ಬ ಬರಹಗಾರ ಈ ಎರಡನ್ನೂ ತನ್ನದಾಗಿಸಿಕೊಳ್ಳುವ ವಿಧಾನದಲ್ಲೇ ಬೇರೆ ಬರಹಗಾರರಿಗಿಂತ ಭಿನ್ನವಾಗಬಲ್ಲ. ಯಾವುದೇ ಲೇಖಕನಿಗೆ ಪೂರ್ವ ತಾಲೀಮು ಕೇವಲ ಬದುಕಿನ ಅನುಭವಗಳಿಂದ ಲಭ್ಯವಾದರೆ ಸಾಲದು. ಬರಹಕ್ಕೆ ಚಾಲಕಶಕ್ತಿ, ಅಭಿವ್ಯಕ್ತಿಯ ಸೇತುವೆಯಾದ ‘ಭಾಷಿಕ ವಿನ್ಯಾಸ’ಗಳೂ ಕೈ ಹಿಡಿಯಬೇಕು. ಈ ನೆಲೆಯಲ್ಲಿ ಪ್ರತಿ ಬರಹಗಾರನೂ ತಾಲೀಮು ನಡೆಸಿರುತ್ತಾನೆ. ಕನ್ನಡದ ಸಂವೇದನಾಶೀಲ ಬರಹಗಾರರು ತಮ್ಮ ಬರವಣಿಗೆಯ ತಾಲೀಮಿನ ಕುರಿತು ಇಲ್ಲಿ ಬರೆದಿದ್ದಾರೆ.
ಈ ‘ಬರವಣಿಗೆಯ ತಾಲೀಮು’ ಸ್ವಾರಸ್ಯಕರವಾಗಿದೆ. ನೀವು ಹೇಗೆ ಬರೆಯುತ್ತೀರಿ? ಹೇಗೆ ಬರವಣಿಗೆಯ ತಾಲೀಮು ನಡೆಸುತ್ತೀರಿ? ಎಂದು ಕೇಳಿದರೆ ಹೇಳುವುದು ಕಷ್ಟ. ಅದು ಗೊತ್ತಿದ್ದೂ ಲೇಖಕರ ಜೊತೆ ಸೃಜನಶೀಲ ‘ಆಟ’ವಾಡಿ ಮೋಜು ನೋಡಬೇಕೆನಿಸಿತು. ‘ಆಟ’ ಸಾರ್ಥಕಗೊಳ್ಳುವಂತೆ ಎಲ್ಲ ಬರಹಗಾರರು ಭಿನ್ನವಾಗಿ ಬರೆದುಕೊಟ್ಟಿದ್ದಾರೆ.
-ಟಿ.ಎಸ್. ಗೊರವರ
(ಸಂಪಾದಕರ ಮಾತುಗಳಿಂದ ಆಯ್ದುಕೊಂಡದ್ದು)
ಕೃತಿ : ‘ಬರವಣಿಗೆಯ ತಾಲೀಮು’
(ಬರಹಗಾರರ ಸೃಷ್ಟಿಶೀಲತೆಯ ಸೋಜಿಗಗಳು)
ಸಂ: ಟಿ.ಎಸ್. ಗೊರವರ
ಪ್ರಕಾಶನ: ಸಂಗಾತ ಪುಸ್ತಕ
ಬೆಲೆ: ₹120
ಸಂಪರ್ಕ: 9341757653