ಬೆಂಗಳೂರು: ಕನ್ನಡ ಸಂಘರ್ಷ ಸಮಿತಿಯು ನೀಡುವ ಕುವೆಂಪು ಚಿರಂತನ ಪ್ರಶಸ್ತಿಗಾಗಿ 2024ನೇ ಸಾಲಿನ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. 2024ನೇ ಇಸವಿಯಲ್ಲಿ ಪ್ರಕಟಗೊಂಡ ವೈಚಾರಿಕತೆಗೆ ಒತ್ತುಕೊಟ್ಟು ರಚಿತಗೊಂಡ ಕಥೆ, ಕಾದಂಬರಿ, ನಾಟಕ ಮುಂತಾದ ಕೃತಿಗಳನ್ನು ಪ್ರಶಸ್ತಿ ಆಯ್ಕೆಗಾಗಿ ಕಳುಹಿಸಿಸಬಹುದಾಗಿದೆ. ಕೃತಿಯ ಎರಡು ಪ್ರತಿಗಳನ್ನು ಎ. ಎಸ್. ನಾಗರಾಜಸ್ವಾಮಿ, ಅಧ್ಯಕ್ಷ, ಕನ್ನಡ ಸಂಘರ್ಷ ಸಮಿತಿ, ನಂ.3, 1ನೇ ತಿರುವು, 1ನೇ ಮುಖ್ಯ ರಸ್ತೆ, ಅನ್ನಪೂರ್ಣೇಶ್ವರಿ ಬಡಾವಣೆ, ಉಲ್ಲಾಳ ಮುಖ್ಯ ರಸ್ತೆ, -560 056. ಈ ವಿಳಾಸಕ್ಕೆ ದಿನಾಂಕ 01 ಜನವರಿ 2025ರೊಳಗೆ ಕಳುಹಿಸಿಕೊಡಬಹುದು. ಪ್ರಶಸ್ತಿಯು ಐದು ಸಾವಿರ ನಗದು, ಫಲಕ ಹಾಗೂ ಅಭಿನಂದನಾ ಪತ್ರವನ್ನು ಒಳಗೊಂಡಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ – 9739001410