ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಮಹತ್ವದ ಪ್ರಶಸ್ತಿಗಳಲ್ಲೊಂದಾದ ಡಾ. ಎಚ್. ವಿಶ್ವನಾಥ್ ಮತ್ತು ಇಂದಿರಾ ದತ್ತಿ ಪ್ರಶಸ್ತಿಗಾಗಿ ಅರ್ಹ ಬರಹಗಾರರಿಂದ ಕೃತಿಗಳನ್ನು ಆಹ್ವಾನಿಸಲಾಗಿದೆ. ಈ ದತ್ತಿಯು ವಿಶೇಷ ದೃಷ್ಟಿಚೇತನ ಬರಹಗಾರರಿಗೆ ಮೀಸಲಾಗಿದ್ದು, ಈ ಮಾದರಿಯ ಪುರಸ್ಕಾರ ಇದೊಂದೆ ಎಂಬ ಹೆಗ್ಗಳಿಕೆಯನ್ನು ಪಡೆದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.
ಡಾ. ಎಚ್. ವಿಶ್ವನಾಥ್ ಮತ್ತು ಇಂದಿರಾ ದತ್ತಿ ಪ್ರಶಸ್ತಿಯು ರಾಜ್ಯಮಟ್ಟದ ಪ್ರಶಸ್ತಿಯಾಗಿದ್ದು, ರಾಜ್ಯದ ಯಾವುದೇ ಭಾಗದ, ಹೊರನಾಡಿನ, ಹೊರದೇಶದ ಅರ್ಹ ಅಭ್ಯರ್ಥಿಗಳೂ ಕೂಡ ತಮ್ಮ ಕೃತಿಗಳನ್ನು ಕಳುಹಿಸಬಹುದು. ಕೃತಿಗಳನ್ನು 31 ಮಾರ್ಚ್ 2025ರ ಒಳಗಾಗಿ ಕೃತಿ ಮತ್ತು ಸ್ವ ಪರಿಚಯವನ್ನು ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಬೆಂಗಳೂರು-5600018 ಇಲ್ಲಿಗೆ ಕಳುಹಿಸಿ ಕೊಡಬೇಕೆಂದು ಕೋರಲಾಗಿದೆ.