ಬೆಂಗಳೂರು: ‘ಈ ಹೊತ್ತಿಗೆ’ ಟ್ರಸ್ಟ್ 2026ನೇ ಸಾಲಿನ ‘ಈ ಹೊತ್ತಿಗೆ ಪ್ರಶಸ್ತಿ’ಗೆ ಕನ್ನಡದ ಅಪ್ರಕಟಿತ ಕಥಾ ಸಂಕಲನ ಮತ್ತು ಕವನ ಸಂಕಲನಗಳನ್ನು ಆಹ್ವಾನಿಸಿದೆ. ಈ ಪ್ರಶಸ್ತಿಯು ತಲಾ ರೂಪಾಯಿ 10 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿದೆ. ಕಥಾ ಸಂಕಲನವು 8ರಿಂದ 10 ಕಥೆಗಳನ್ನು ಹಾಗೂ ಕವನ ಸಂಕಲನವು 35ರಿಂದ 40 ಕವನಗಳನ್ನು ಒಳಗೊಂಡಿರಬೇಕು.
ಪ್ರಶಸ್ತಿ ಘೋಷಣೆಯಾದ 30 ದಿನಗಳಲ್ಲಿ ಆಯ್ಕೆಯಾದ ಕೃತಿಯು ಮುದ್ರಣಗೊಳ್ಳಬೇಕು. ಆಗ ಮಾತ್ರ ಘೋಷಿತ ಬಹುಮಾನದ ಮೊತ್ತ ಹಾಗೂ ಪ್ರಶಸ್ತಿ ಫಲಕವನ್ನು ಈ ಹೊತ್ತಿಗೆಯ ‘ಹೊನಲು’ ಸಮಾರಂಭದಲ್ಲಿ ನೀಡಲಾಗುತ್ತದೆ.
ಪ್ರಶಸ್ತಿ ಪಡೆದ ಕೃತಿಯನ್ನು ಮುದ್ರಿಸುವಾಗ ಮುಖಪುಟ ಹಾಗೂ ಒಳಪುಟದಲ್ಲಿ ಈ ಹೊತ್ತಿಗೆ (ಕಥೆ/ಕಾವ್ಯ) ಪ್ರಶಸ್ತಿ ವಿಜೇತ ಕೃತಿ ಎಂದು ಮುದ್ರಿಸಬೇಕು ಎಂದು ಟ್ರಸ್ಟ್‌ನ ಅಧ್ಯಕ್ಷೆ ಜಯಲಕ್ಷ್ಮಿ ಪಾಟೀಲ ತಿಳಿಸಿದ್ದಾರೆ.
ಅಪ್ರಕಟಿತ ಸಂಕಲನಗಳನ್ನು ದಿನಾಂಕ 20 ಅಕ್ಟೋಬರ್ 2025ರ ಒಳಗೆ ‘ಈ ಹೊತ್ತಿಗೆ’, #65, ಮುಗುಳ್ನಗೆ, 3ನೇ ಅಡ್ಡ ರಸ್ತೆ, ಪಿ. ಎನ್. ಬಿ. ನಗರ, ಕೋಣನಕುಂಟೆ, ಬೆಂಗಳೂರು-560062 ಈ ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ 9611782621 ಈ ಸಂಖ್ಯೆಯನ್ನು ಸಂಪರ್ಕಿಸಬಹುದು.
Subscribe to Updates
Get the latest creative news from FooBar about art, design and business.
Previous Articleಕೋಟದಲ್ಲಿ ಲೋಕಾರ್ಪಣೆಗೊಂಡ ‘ಹೆಂಡತಿ’ ಕಾದಂಬರಿ