ಬೆಂಗಳೂರು: ಶೂದ್ರ ಶ್ರೀನಿವಾಸ ನೆಲದ ಮಾತು ಪ್ರತಿಷ್ಠಾನ ಬೆಂಗಳೂರು ವತಿಯಿಂದ ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪ ಪ್ರಶಸ್ತಿಗಾಗಿ 2023 ರಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾಗಿರುವ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ.
ಪ್ರಶಸ್ತಿಯು ಹದಿನೈದು ಸಾವಿರ ರೂಪಾಯಿಗಳ ನಗದು ಬಹುಮಾನದ ಜೊತೆಗೆ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ. ಆಸಕ್ತರು ಕವನ ಸಂಕಲನದ ಎರಡು ಪ್ರತಿಗಳನ್ನು ‘ಮಾನಸ ವಿದ್ಯಾಕೇಂದ್ರ’, ಅಣ್ಣಯ್ಯರೆಡ್ಡಿ ಬಡಾವಣೆ, ಜೆ. ಪಿ. ನಗರ ಆರನೇ ಹಂತ, ಬೆಂಗಳೂರು 560078 ಇಲ್ಲಿಗೆ 10 ಡಿಸೆಂಬರ್ 2024 ರ ಒಳಗಾಗಿ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ 7899896744, 9481485109ಕ್ಕೆ ಕರೆ ಮಾಡಿ ವಿಚಾರಿಸಬಹುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಎಚ್ ದಂಡಪ್ಪ ಅವರು ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Previous Articleಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಯುವ ಲೇಖಕರಿಗೆ ತರಬೇತಿ ಕಾರ್ಯಾಗಾರ