Subscribe to Updates

    Get the latest creative news from FooBar about art, design and business.

    What's Hot

    ವಿದ್ಯಾರ್ಥಿಗಳಿಗಾಗಿ ‘ಮಸುಮ’ ಸಣ್ಣ ಕಥಾ ಸ್ಪರ್ಧೆ | ಕೊನೆಯ ದಿನಾಂಕ ಸೆಪ್ಟೆಂಬರ್ 20

    September 7, 2026

    ಕವಿಗೋಷ್ಠಿ, ಗೀತಗಾಯನ ಮತ್ತು ಕೃತಿ ಲೋಕಾರ್ಪಣೆ ಕಾರ್ಯಕ್ರಮ | ಸೆಪ್ಟೆಂಬರ್ 20

    September 7, 2026

    ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವದಲ್ಲಿ ‘ದಸರಾ ಕವಿಗೋಷ್ಠಿ’ | ಅಕ್ಟೋಬರ್ 18

    September 7, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಮಂಗಳೂರು ಬಂಟ್ಸ್ ಹಾಸ್ಟೆಲ್ ನಲ್ಲಿ ‘ಬಂಟ ಕಲಾ ಸಂಭ್ರಮ’ ಸ್ಪರ್ಧಾ ಕಾರ್ಯಕ್ರಮ | ಸೆಪ್ಟೆಂಬರ್ 3ರಂದು   
    Competition

    ಮಂಗಳೂರು ಬಂಟ್ಸ್ ಹಾಸ್ಟೆಲ್ ನಲ್ಲಿ ‘ಬಂಟ ಕಲಾ ಸಂಭ್ರಮ’ ಸ್ಪರ್ಧಾ ಕಾರ್ಯಕ್ರಮ | ಸೆಪ್ಟೆಂಬರ್ 3ರಂದು   

    September 2, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಓಂಕಾರ ನಗರದಲ್ಲಿರುವ ಬಂಟರ ಯಾನೆ ನಾಡವರ ಮಾತೃ ಸಂಘ (ರಿ.) ಇದರ ಆಶ್ರಯದಲ್ಲಿ ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾನ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಎಲ್ಲಾ ಬಂಟರ ಸಂಘಗಳ ಸಹಭಾಗಿತ್ವದಲ್ಲಿ ‘ಬಂಟ ಕಲಾ ಸಂಭ್ರಮ’ ಸ್ಪರ್ಧಾ ಕಾರ್ಯಕ್ರಮವು ದಿನಾಂಕ 03-09-2023ರಂದು ನಡೆಯಲಿದೆ.

    ಸ್ಪರ್ಧೆಯಲ್ಲಿ ಭಾರತದ ಪರಂಪರೆ, ಪುರಾಣ, ಇತಿಹಾಸ, ಸಾಮಾಜಿಕ, ಜನಪದ, ಸಂಸ್ಕೃತಿಯ ದೃಶ್ಯ ವಿಚಾರಗಳನ್ನು ರೂಪಕದ ಮೂಲಕ ಸಂಯೋಜನೆ ಮಾಡಬಹುದು. ನಿಗದಿತ ಸಮಯದಲ್ಲಿ ಯಾವುದೇ ವಿಷಯಗಳ ಕುರಿತು ನೃತ್ಯ, ಸಂಗೀತ, ರೂಪಕ, ನವ್ಯ ವೈಭವೀಕರಣದ ಜೊತೆಗೆ ಮೌಲ್ಯಯುತ ಸಂದೇಶ ಸಾರುವ ಅಪೂರ್ವ ಕಲಾ ಸಂಗಮವೇ ಭಾರತ ದರ್ಶನವಾಗಿರುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

    ಸ್ಪರ್ಧೆಯ ನಿಯಮಗಳು : ನಿಗದಿತ 20 ನಿಮಿಷಗಳ ಕಾಲಾವಕಾಶದಲ್ಲಿ ಪ್ರಹಸನ, ಸಮೂಹ ನೃತ್ಯ, ಉತ್ತಮ ಸಂದೇಶ ಒಳಗೊಂಡಂತ ಇತರ ಸಾಂಸ್ಕೃತಿಕ ವೈವಿಧ್ಯವನ್ನು ಪ್ರದರ್ಶಿಸಬೇಕು. ತಂಡಕ್ಕೆ 20+5 ನಿಮಿಷಗಳ ಅವಕಾಶ (ರಂಗಸಜ್ಜಿಕೆ ಒಳಪಡಿಸಿ). ಒಂದು ತಂಡದಲ್ಲಿ ಕನಿಷ್ಠ 25 ಜನ ಸ್ಪರ್ಧಾಳುಗಳು ಇರಬೇಕು. ವಯೋಮಿತಿಯ ನಿರ್ಬಂಧವಿಲ್ಲ, ಆದರೆ ಪ್ರತಿ ತಂಡದಲ್ಲಿ ಮಹಿಳೆಯ ಭಾಗವಹಿಸುವಿಕೆ ಕಡ್ಡಾಯ. ಯಾವುದೇ ಜಾತಿ, ಧರ್ಮ ಹಾಗೂ ದೈವ ದೇವರನ್ನು ನಿಂದಿಸುವ ವಿಚಾರಗಳು ಇರಬಾರದು. ಒಬ್ಬ ಸ್ಪರ್ಧಾಳುವಿಗೆ ಒಂದೇ ತಂಡದಲ್ಲಿ ಭಾಗವಹಿಸಲು ಅವಕಾಶ, ಒಂದು ಸಂಘದಿಂದ ಒಂದು ತಂಡ ಮಾತ್ರ ಪಾಲ್ಗೊಳ್ಳಬೇಕು. ಪ್ರದರ್ಶನದ ಸಂದರ್ಭ ವೇದಿಕೆಯಲ್ಲಿ ಬಂಟೇತರ ಸಮಾಜದವರು ಭಾಗವಹಿಸಿದಲ್ಲಿ ಅಂತಹ ತಂಡವನ್ನು ಅನರ್ಹಗೊಳಿಸಲಾಗುವುದು.

    ಬಹುಮಾನ : ವಿಜೇತ ತಂಡಗಳಿಗೆ ಪ್ರಥಮ ರೂ. ಒಂದು ಲಕ್ಷ, ದ್ವಿತೀಯ ರೂ.ಎಪ್ಪತ್ತೈದು ಸಾವಿರ, ತೃತೀಯ ರೂ.ಐವತ್ತು ಸಾವಿರ ನಗದು ಬಹುಮಾನ ಪ್ರಶಸ್ತಿ, ಭಾಗವಹಿಸಿದ ಎಲ್ಲಾ ತಂಡಗಳಿಗೆ ತಲಾ ರೂಪಾಯಿ ಹತ್ತು ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು. ಸ್ಪರ್ಧೆ ಫಲಿತಾಂಶವು ಪ್ರಹಸನ, ಸಮೂಹ ನೃತ್ಯ, ವೈವಿಧ್ಯತೆ, ಉತ್ತಮ ಸಂದೇಶ, ಒಟ್ಟು ಪ್ರಸ್ತುತಿಯನ್ನು ಒಳಗೊಂಡಿರುತ್ತದೆ.

    Share. Facebook Twitter Pinterest LinkedIn Tumblr WhatsApp Email
    Previous Articleಜಾನಪದ ವಿಶ್ವ ಪ್ರತಿಷ್ಠಾನದ ವತಿಯಿಂದ ‘ದೀಪ’ ಪ್ರಶಸ್ತಿ | ಸೆಪ್ಟೆಂಬರ್ 5ರಂದು 
    Next Article ಉಡುಪಿಯ ಎಂ.ಜಿ.ಎಂ. ಕಾಲೇಜಿನ ರವೀಂದ್ರ ಮಂಟಪದಲ್ಲಿ ‘ಮಾತಾ’ 
    roovari

    Add Comment Cancel Reply


    Related Posts

    ಕದ್ರಿ ರಾಜಾಂಗಣದಲ್ಲಿ ‘ಶ್ರೀಕೃಷ್ಣ ವರ್ಣವೈಭವ’ ಚಿತ್ರಕಲಾ ಸ್ಪರ್ಧೆ | ಸೆಪ್ಟೆಂಬರ್ 04

    September 3, 2026

    ‘ಕಾದಂಬರಿ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಆಗಸ್ಟ್ 30

    August 28, 2026

    ಕಾರಂತರ ಜನ್ಮದಿನಾಚರಣೆ ಪ್ರಯುಕ್ತ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ | ಕೊನೆಯ ದಿನಾಂಕ ಸೆಪ್ಟೆಂಬರ್ 15

    August 28, 2026

    ಕದ್ರಿ ದೇವಸ್ಥಾನದ ರಾಜಾಂಗಣದಲ್ಲಿ ‘ಕೃಷ್ಣ ವರ್ಣ ವೈಭವ’ ಚಿತ್ರ ಸ್ಪರ್ಧೆ | ಸೆಪ್ಟೆಂಬರ್ 04

    August 27, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.