Subscribe to Updates

    Get the latest creative news from FooBar about art, design and business.

    What's Hot

    ‘ಅಮೃತ ಮಂಥನ’ ಪ್ರೊ. ಅಮೃತ ಸೋಮೇಶ್ವರ ನೆನಪಿನ ಕಾರ್ಯಕ್ರಮ | ಸೆಪ್ಟೆಂಬರ್ 27

    September 26, 2026

    ತುಳು ಸಾಹಿತ್ಯ ಅಕಾಡೆಮಿಯ ‘ಗೌರವ ಪ್ರಶಸ್ತಿ’ ಪ್ರಕಟ

    September 26, 2026

    ಮಂಗಳೂರಿನ ಅಂಬೇಡ್ಕರ್ ಭವನದಲ್ಲಿ ‘ಸ್ವರ ತರಂಗ್’ ಸಂಗೀತ ಕಾರ್ಯಕ್ರಮ | ಸೆಪ್ಟೆಂಬರ್ 27

    September 26, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಬಹುಮುಖ ಪ್ರತಿಭೆ ಕುಮಾರಿ ಅಕ್ಷ್ಯಾ ಶ್ರೀವತ್ಸನ್ ಸಂಗೀತದ ರಂಗಪ್ರವೇಶ | ಅಕ್ಟೋಬರ್ 02
    Music

    ಬಹುಮುಖ ಪ್ರತಿಭೆ ಕುಮಾರಿ ಅಕ್ಷ್ಯಾ ಶ್ರೀವತ್ಸನ್ ಸಂಗೀತದ ರಂಗಪ್ರವೇಶ | ಅಕ್ಟೋಬರ್ 02

    September 26, 2026No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಕರ್ನಾಟಕ ಶಾಸ್ತ್ರೀಯ ಸಂಗೀತ – ಭರತನಾಟ್ಯ ಮತ್ತು ವೀಣಾವಾದನದ ತ್ರಿವಳಿ ಕಲಾರಂಗಗಳಲ್ಲಿ ಶಾಸ್ತ್ರೀಯವಾಗಿ ಅಭ್ಯಾಸ ಮಾಡುತ್ತಿರುವ ಕು. ಅಕ್ಷ್ಯಾ ಶ್ರೀವತ್ಸನ್ ಭರವಸೆಯ ಬಹುಮುಖ ಪ್ರತಿಭೆ. ಶ್ರೀಮತಿ ಅನುಷಾ ಮತ್ತು ಶ್ರೀವತ್ಸನ್ ಅವರ ಹಿರಿಯ ಮಗಳಾದ ಅಕ್ಷ್ಯಾ, ಸಂಗೀತ ರಂಗದ ದಿಗ್ಗಜೆ ಕಲಾವಿದೆ, ಆಕಾಶವಾಣಿಯ ‘ಎ’ ಟಾಪ್ ಸಂಗೀತಗಾರ್ತಿಯಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದ ಗಾಯಕಿ. ಡಾ. ಪುಸ್ತಕಂ ರಮಾ ಅವರ ನುರಿತ ಬಾನಿಯಲ್ಲಿ ವಿಕಸನಗೊಳ್ಳುತ್ತಿರುವ ಗಾನ ಕುಸುಮ. ತನ್ನ ನಾಲ್ಕನೆಯ ವಯಸ್ಸಿಗೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಯಲಾರಂಭಿಸಿರುವ ಹದಿನೇಳು ವರ್ಷದ ಅಕ್ಷ್ಯಾ, ಕಳೆದ 13 ವರ್ಷಗಳಿಂದ ಸತತವಾಗಿ ಸಂಗೀತ ಕಲಿಕೆಯಲ್ಲಿ ಪರಿಶ್ರಮಿಸುತ್ತಿದ್ದು, ಓದಿನಲ್ಲಿ ಜಾಣೆಯಾಗಿದ್ದು, ತನ್ನ ಕಲಾತ್ಮಕ ಒಲವಿನ ಜೊತೆಗೆ, ನಾರಾಯಣ ಇ-ಟೆಕ್ನೋ ಶಾಲೆಯಲ್ಲಿ ಸಿ.ಬಿ.ಎಸ್‌.ಇ. 10ನೇ ತರಗತಿ ಮತ್ತು 12ನೇ ತರಗತಿಗಳ ಮಂಡಳಿ ಪರೀಕ್ಷೆಗಳೆರಡರಲ್ಲೂ ಪ್ರಥಮ ಶ್ರೇಣಿ ಗಳಿಸಿ, ಶಾಲೆಯ ಟಾಪರ್ ಎನಿಸಿಕೊಂಡಿದ್ದಾಳೆ.

    ಸತತ ಐದು ವರ್ಷಗಳಿಗೂ ಹೆಚ್ಚು ಕಾಲ ಶಾಲೆಯ ‘ಅತ್ಯುತ್ತಮ ಆಲ್-ರೌಂಡರ್’ ಪ್ರಶಸ್ತಿ ಪಡೆದಿರುವುದು ಅವಳ ವಿಶೇಷತೆ. ಇದೀಗ ಇವಳು ವೈದ್ಯಕೀಯ ವಿದ್ಯಾಭ್ಯಾಸ (ಎಂ.ಬಿ.ಬಿ.ಎಸ್.)ಕ್ಕೆ ಸೇರ್ಪಡೆಯಾಗಲಿದ್ದಾಳೆ. ಉತ್ತಮ ಗಾಯಕಿಯಾದ ಇವಳು, ನಾಡಿನಾದ್ಯಂತ ಅನೇಕ ಉತ್ತಮ ವೇದಿಕೆಗಳ ಸಂಗೀತ ಕಾರ್ಯಕ್ರಮಗಳಲ್ಲಿ ಹಾಡಿರುವ ಇವಳು ಅನೇಕ ಬಹುಮಾನಗಳನ್ನೂ ಗಳಿಸಿಕೊಂಡಿರುವ ಹೆಮ್ಮೆ ಅವಳದು. ಇತ್ತೀಚೆಗೆ ತಾನೇ ತನ್ನ ಭರತನಾಟ್ಯದ ರಂಗಪ್ರವೇಶ ನೆರವೇರಿಸಿಕೊಂಡಿರುವ ಅಕ್ಷ್ಯಾ ಇದೀಗ 02 ಅಕ್ಟೋಬರ್ 2026 ಶುಕ್ರವಾರ ಸಂಜೆ ಗಂಟೆ 5-30ಕ್ಕೆ ಮಲ್ಲೇಶ್ವರದ ‘ಸೇವಾಸದನ’ದಲ್ಲಿ ತನ್ನ ಸಂಗೀತದ ರಂಗಪ್ರವೇಶ (ಅರಂಗೇಟ್ರಂ) ಅನ್ನು ವಿದ್ಯುಕ್ತವಾಗಿ ನೆರವೇರಿಸಿಕೊಳ್ಳಲಿದ್ದಾಳೆ. ಅವಳ ಸುಮಧುರ ಗಾನವನ್ನು ಆಲಿಸಲು ಎಲ್ಲ ಸಂಗೀತ ಕಲಾಪ್ರೇಮಿಗಳಿಗೂ ಆದರದ ಸುಸ್ವಾಗತ.

    ಯುವ ಪ್ರತಿಭೆ ಕು. ಅಕ್ಷ್ಯಾ ಅಭಿಜಾತ ಕಲಾವಿದೆ. ನಾಲ್ಕು ವರ್ಷದ ಸಣ್ಣ ಬಾಲಕಿಯಾಗಿದ್ದಾಗಲೇ ಇವಳಲ್ಲಿ ಅಡಗಿದ್ದ ಸುಪ್ತ ಪ್ರತಿಭೆಯನ್ನು ಗುರುತಿಸಿ ಅವಳ ಹೆತ್ತವರು ಅವಳನ್ನು ಡಾ. ಪುಸ್ತಕಂ ರಮಾ ಅವರಲ್ಲಿ ಕರ್ನಾಟಕ ಸಂಗೀತವನ್ನು ಶಾಸ್ತ್ರೀಯವಾಗಿ ಕಲಿಯಲು ಸೇರ್ಪಡೆಗೊಳಿಸಿದರು. ಅಂದಿನಿಂದ ಇಂದಿನವರೆಗೂ ಕಳೆದ 13 ವರ್ಷಗಳಿಂದ ಅಕ್ಷ್ಯಾ ಸತತವಾಗಿ ರಮಾ ಮಾರ್ಗದರ್ಶನದಲ್ಲಿ ಸಂಗೀತದ ವಿವಿಧ ಆಯಾಮಗಳನ್ನು ಅಭ್ಯಾಸ ಮಾಡುತ್ತಿದ್ದು, ಅವಳ ಬಹುಮುಖಿ ಕಲಾ ಜೀವನವು ಗುರು-ಶಿಷ್ಯ ಸಂಬಂಧದ ಗಾಢ ಬಾಂಧವ್ಯ ಮತ್ತು ಹಲವಾರು ಗಮನಾರ್ಹ ಪ್ರದರ್ಶನಗಳಿಂದ, ಶ್ರುತಿ, ಲಯ ಮತ್ತು ಕೃತಿಗಳ ಭದ್ರ ಬುನಾದಿಯಲ್ಲಿ ರೂಪುಗೊಂಡಿದೆ. ಸಂಗೀತದ ಜೊತೆಗೆ ವೀಣಾ ವದನ ಮತ್ತು ಭರತನಾಟ್ಯ ಕಲಿಕೆಯಲ್ಲೂ ಆಸಕ್ತಿ ತೋರಿದ ಈ ಪ್ರತಿಭಾವಂತ ಬಾಲಕಿ, ಗುರು ಶ್ರೀಮತಿ ಗೀತಾ ರಮಾನಂದ್ ಅವರ ಬಳಿ ವೀಣೆ ಮತ್ತು ಗುರು ಮಿನಾಲ್ ಪ್ರಭು ಅವರ ಬಳಿ ಭರತನಾಟ್ಯವನ್ನು ಕಲಿಯುತ್ತಿರುವುದು ಇವಳ ಅಗ್ಗಳಿಕೆ. ಇವಳ ಬಹುಮುಖ ಪ್ರತಿಭೆ ಪ್ರಫುಲ್ಲವಾಗಿ ವಿಕಸಿತವಾಗುತ್ತಿದ್ದು ಯುವ ಶಾಸ್ತ್ರೀಯ ಕಲಾವಿದೆಯಾಗಿ ಹೊರಹೊಮ್ಮುತ್ತಿದ್ದಾಳೆ. ಈ ಮೂರು ಕಠಿಣ ಪ್ರಕಾರಗಳ ಏಕಕಾಲಿಕ ತರಬೇತಿಯು ಈಕೆಯ ಪರಿಶ್ರಮ ಮತ್ತು ಸಮರ್ಪಣಾ ಭಾವಗಳನ್ನು ಎತ್ತಿ ತೋರಿಸುತ್ತದೆ. ಕಳೆದ ವರ್ಷಗಳಲ್ಲಿ, ಅಕ್ಷ್ಯಾ, ಸಭಾಗಳು, ದೇವಾಲಯದ ಉತ್ಸವಗಳು ಮತ್ತು ವಿಶೇಷ ಕಛೇರಿಗಳಲ್ಲಿ ತನ್ನ ಪ್ರದರ್ಶನಗಳ ದಾಖಲೆಯನ್ನು ನಿರ್ಮಿಸಿದ್ದಾಳೆ. ‘ನಿರಂತರಂ’ ಕಛೇರಿ ಸರಣಿ ಮತ್ತು ಶ್ರೀ ರಾಮಾನುಜ ಆಚಾರ್ಯರ ಶತಮಾನೋತ್ಸವದ ಸಂದರ್ಭದಲ್ಲಿ ನಡೆದ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿರುವುದು ಈಕೆಯ ವೈಶಿಷ್ಟ್ಯ. ರಾಮ ಸೇವಾಮಂಡಳಿ, ಕಾಡುಮಲ್ಲೇಶ್ವರ ಶಿವ ದೇವಾಲಯದಂತಹ ವಿವಿಧ ದೇವಾಲಯಗಳಲ್ಲಿ, ‘ವಾಗಾಯಕ ವೈಭವಂ’ನಂತಹ ಆನ್‌ಲೈನ್ ಕಛೇರಿಗಳಲ್ಲಿ, ಯದುಗಿರಿ ಯತಿರಾಜ ಮಠದ ಕಾರ್ಯಕ್ರಮಗಳು, ಕನಕದಾಸ ಜಯಂತಿ, ಮಹಾ ಶಿವರಾತ್ರಿ ಮಹೋತ್ಸವಗಳು ಮುಂತಾದ ಪ್ರಮುಖ ವೇದಿಕೆಗಳಲ್ಲಿ ಏಕವ್ಯಕ್ತಿ ಪ್ರದರ್ಶನಗಳನ್ನು ನೀಡುತ್ತ, ತನ್ನ ಸಾಧನೆಯ ಪಥದಲ್ಲಿ ಮುನ್ನಡೆಯುತ್ತಿದ್ದಾಳೆ.

    ಶಾಲಾ ದಿನಗಳಲ್ಲಿಯೇ ಅಕ್ಷ್ಯಾ ಸತತವಾಗಿ ಸಾರ್ವಜನಿಕ ಪ್ರದರ್ಶನಗಳನ್ನು ನೀಡುತ್ತ ಬಂದಿದ್ದು, ವಿವಿಧ ಶಾಲೆ, ಶಾಲಾ ಅಂತರ್-ಸ್ಪರ್ಧೆಗಳಲ್ಲಿ ಅನೇಕ ಬಹುಮಾನಗಳನ್ನು ಪಡೆಯುತ್ತಾ ತನ್ನ ಕಲಾತ್ಮಕ ಹಾದಿಯನ್ನು ನಿಚ್ಚಳಗೊಳಿಸಿಕೊಂಡಿದ್ದಾಳೆ. ಕಳೆದ 11 ವರ್ಷಗಳಿಂದ ಭರತನಾಟ್ಯವನ್ನು ಕಲಿಯುತ್ತಿದ್ದು ಇತ್ತೀಚೆಗಷ್ಟೇ ಯಶಸ್ವಿಯಾಗಿ ತನ್ನ ರಂಗಪ್ರವೇಶ ನೆರವೇರಿಸಿಕೊಂಡು ಕಲಾಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾಳೆ. ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಶೇ.94ರಷ್ಟು ಅಂಕಗಳನ್ನು ಪಡೆದು ಜಯಶಾಲಿಯಾಗಿದ್ದಲ್ಲದೆ ಜೀ ಟಿವಿ ನೃತ್ಯ ಆಡಿಷನ್‌ಗಳಿಗೆ ಆಯ್ಕೆಯಾದದ್ದು ವಿಶೇಷ. ಜೊತೆಗೆ, ಪಂಚತಂತ್ರ, ಚಿನ್ನ ಕಲಾನಾದಂ, ಇಸ್ಕಾನ್‌ನ ಹೆರಿಟೆಜ್ ಫೆಸ್ಟ್, ನೃತ್ಯಾರ್ಪಣ, ನಿರಂತರಂ ಮತ್ತು ಅನನ್ಯ ಸಮರ್ಪಣದಲ್ಲಿ ಅನಾದಿ ಅನಂತ್ ಸೇರಿದಂತೆ ಹಲವಾರು ಹೆಸರಾಂತ ನೃತ್ಯನಿರ್ಮಾಣಗಳಲ್ಲಿ ಪ್ರದರ್ಶನ ನೀಡಿದ್ದಾಳೆ. ಇದರೊಡನೆ, ನಿಪುಣ ಕಾರ್ಯಕ್ರಮ ನಿರೂಪಕಿ ಮತ್ತು ಎಂಸೀ ಆಗಿದ್ದು, ಇಸ್ಕಾನ್ ನಡೆಸಿದ ರಾಷ್ಟ್ರೀಯ ಮಟ್ಟದ ವೈದಿಕ ಮಂತ್ರ ಜಪ ಸ್ಪರ್ಧೆಯಲ್ಲಿ 2ನೇ ಬಹುಮಾನವನ್ನು ಗೆದ್ದಿರುವ ಅತಿಶಯತೆ ಇವಳದು.

    ಓದಿನಲ್ಲೂ ಬುದ್ಧಿವಂತೆಯಾಗಿರುವ ಅಕ್ಷ್ಯಾ, ತನ್ನ ಶಾಲೆಯ ಶೈಕ್ಷಣಿಕ ಟಾಪರ್ ಜೊತೆಗೆ, ಸತತ ಐದು ವರ್ಷಗಳಿಗೂ ಹೆಚ್ಚುಕಾಲ ಶಾಲೆಯ ‘ಅತ್ಯುತ್ತಮ ಆಲ್-ರೌಂಡರ್’ ಪ್ರಶಸ್ತಿ ಗಳಿಸಿದ್ದಾಳೆ. ಮುಂದೆ ಅವಳು ಅನೇಕ ಪ್ರವೇಶ ಪರೀಕ್ಷೆಗಳಲ್ಲಿ ಶ್ರೇಷ್ಠ ಅಂಕಗಳಿಂದ ಜಯಶಾಲಿ ಆಗಿರುವುದು ನಿಜಕ್ಕೂ ಅಚ್ಚರಿಯ ಸಂಗತಿ. ಜೆಇಇ ಮೇನ್‌ನಲ್ಲಿ 96%, ಐಐಟಿ ಮದ್ರಾಸ್‌ನಲ್ಲಿ ಬಿಎಸ್ ಡೇಟಾ ಸೈನ್ಸ್ ಕಾರ್ಯಕ್ರಮದಲ್ಲಿ ಸೀಟು ಗಳಿಕೆ, ಕೆ.ಸಿ.ಇ.ಟಿ. ಮೂಲಕ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (ವಿಟಿಯು) ಅರ್ಹತಾ ಸೀಟು ಮತ್ತು ಕಾಮೆಡ್-ಕೆ ಮೂಲಕ ಎಂ.ಎಸ್. ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬಯೋಟೆಕ್ನಾಲಜಿ ಸೀಟು ಪಡೆಯುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಪ್ರದರ್ಶನವನ್ನು ಪ್ರದರ್ಶಿಸಿದ್ದಾಳೆ ಅಕ್ಷ್ಯಾ. ಆಹಾರ ವಿಜ್ಞಾನಗಳು, ನರ್ಸಿಂಗ್, ವೆಟರ್ನರಿ ಸೈನ್ಸಸ್ ಮತ್ತು ಸೆರಿಕಲ್ಚರ್‌ನಂತಹ ವಿಭಾಗಗಳಲ್ಲೂ ಅರ್ಹತೆ ಪಡೆದಿರುವುದೂ ಕೂಡ ಅವಳ ಅಗ್ಗಳಿಕೆ.

    ವೈದ್ಯಕೀಯ ವಿದ್ಯಾಭ್ಯಾಸದ ಅದಮ್ಯ ಒಲವು- ಉತ್ಸಾಹದ ಫಲ ಅಕ್ಷ್ಯಾ, ನೀಟ್ 2026ರಲ್ಲಿ ಟಾಪರ್ ಆಗಿದ್ದು, ಶೀಘ್ರದಲ್ಲೇ ಇವಳು ವೈದ್ಯಕೀಯ ಅಭ್ಯಾಸಕ್ಕೆ ಪದಾರ್ಪಣೆ ಮಾಡಲಿದ್ದಾಳೆ. ಈ ಬಹುಮುಖ ಪ್ರತಿಭಾವಂತೆ, ಭವಿಷ್ಯದಲ್ಲಿ ಉತ್ತಮ ವೈದ್ಯೆಯಾಗಿ ಸಮಾಜಕ್ಕೆ ಸೇವೆ ಸಲ್ಲಿಸುವ ಆಕಾಂಕ್ಷೆಯುಳ್ಳ ಕು. ಅಕ್ಷ್ಯಾಗೆ ಹಾರ್ದಿಕ ಅಭಿನಂದನೆಗಳು.

    *** ವೈ.ಕೆ. ಸಂಧ್ಯಾ ಶರ್ಮ

    ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.

    baikady Music roovari
    Share. Facebook Twitter Pinterest LinkedIn Tumblr WhatsApp Email
    Previous Articleಎಡನೀರಿನಲ್ಲಿ ‘ಬೆಟ್ಟದ ಬುಡದಲ್ಲಿರುವ ಬಂಡಿ’ ಕವನ ಸಂಕಲನ ಬಿಡುಗಡೆ ಮತ್ತು ಕಾವ್ಯ ಚಿಂತನ
    Next Article ಪ್ರೇಕ್ಷಕರನ್ನು ಸೆರೆ ಹಿಡಿದಿಡುವಲ್ಲಿ ಯಶಸ್ವಿಯಾದ ವಿದುಷಿ ವರ್ಷಾ ಕಾಕತ್ಕರ್ ರವರ ರಂಗಪ್ರವೇಶ
    roovari

    Add Comment Cancel Reply


    Related Posts

    ‘ಅಮೃತ ಮಂಥನ’ ಪ್ರೊ. ಅಮೃತ ಸೋಮೇಶ್ವರ ನೆನಪಿನ ಕಾರ್ಯಕ್ರಮ | ಸೆಪ್ಟೆಂಬರ್ 27

    September 26, 2026

    ತುಳು ಸಾಹಿತ್ಯ ಅಕಾಡೆಮಿಯ ‘ಗೌರವ ಪ್ರಶಸ್ತಿ’ ಪ್ರಕಟ

    September 26, 2026

    ಮಂಗಳೂರಿನ ಅಂಬೇಡ್ಕರ್ ಭವನದಲ್ಲಿ ‘ಸ್ವರ ತರಂಗ್’ ಸಂಗೀತ ಕಾರ್ಯಕ್ರಮ | ಸೆಪ್ಟೆಂಬರ್ 27

    September 26, 2026

    ಪ್ರೇಕ್ಷಕರನ್ನು ಸೆರೆ ಹಿಡಿದಿಡುವಲ್ಲಿ ಯಶಸ್ವಿಯಾದ ವಿದುಷಿ ವರ್ಷಾ ಕಾಕತ್ಕರ್ ರವರ ರಂಗಪ್ರವೇಶ

    September 26, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.