ಉಡುಪಿ : ಕೋಟೇಶ್ವರದ ಎನ್.ಆರ್.ಎ.ಎಂ.ಎಚ್. ಪ್ರಕಾಶನ ಮತ್ತು ಸ್ಥಿತಿಗತಿ ತ್ರೈಮಾಸಿಕ ಪತ್ರಿಕೆಯ ಆಶ್ರಯದಲ್ಲಿ ಕನ್ನಡದ ಕಾದಂಬರಿಕಾರ, ಸಂಘಟಕ ಪಾಂಡೇಶ್ವರ ಸೂರ್ಯನಾರಾಯಣ ಚಡಗ ನೆನಪಿನಲ್ಲಿ ನೀಡಲಾಗುವ ‘ಚಡಗ ಕಾದಂಬರಿ ಪ್ರಶಸ್ತಿ’ಯ 17ನೇ ವರ್ಷದ ಪುರಸ್ಕಾರಕ್ಕೆ ಜ.ನಾ. ತೇಜಶ್ರೀ ಇವರ ‘ಜೀವರತಿ’ ಕಾದಂಬರಿ ಆಯ್ಕೆ ಮಾಡಿದೆ.
ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ರೂ. ಹತ್ತು ಸಾವಿರ ನಗದು ಬಹುಮಾನ ಒಳಗೊಂಡ ಪ್ರಶಸ್ತಿಯನ್ನು ಡಿಸೆಂಬರ್ ತಿಂಗಳಲ್ಲಿ ಕೋಟದಲ್ಲಿ ಆಯೋಜಿಸಲಾಗುವ ಸಮಾರಂಭದಲ್ಲಿ ನೀಡಲಾಗುವುದು ಎಂದು ಪ್ರಶಸ್ತಿ ಸಮಿತಿ ಅಧ್ಯಕ್ಷ ಡಾ. ಎನ್. ಭಾಸ್ಕರ ಆಚಾರ್ಯ ತಿಳಿಸಿದ್ದಾರೆ. ಸ್ಪರ್ಧೆಯ ಸಂಚಾಲಕ ಪ್ರೊ. ಉಪೇಂದ್ರ ಸೋಮಯಾಜಿ ಪ್ರಶಸ್ತಿ ತೀರ್ಪುಗಾರರಾಗಿದ್ದರು.

