ಸುಳ್ಯ : ಚಂದನ ಸಾಹಿತ್ಯ ವೇದಿಕೆ ಸುಡ್ಯ ಇದರ 20ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತಿ ಎಚ್ ಭೀಮರಾವ್ ವಾಷ್ಠರ್ ಅವರ ನೇತೃತ್ವದಲ್ಲಿ ‘ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಭ್ರಮ 2025’ ಕಾರ್ಯಕ್ರಮವು ದಿನಾಂಕ 23 ಮಾರ್ಚ್ 2025ರಂದು ಸುಳ್ಯದ ದೇದಮ್ಮ ಕಾಂಪ್ಲೆಕ್ಸ್ ಇಲ್ಲಿ ನಡೆಯಿತು.
ಸಮಾರಂಭದಲ್ಲಿ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಯುವ ಸಾಹಿತಿ ಪ್ರಿಯಾ ಸುಳ್ಯ ಇವರನ್ನು 2025ನೇ ಸಾಲಿನ ‘ಚಂದನ ಸಾಹಿತ್ಯ ರತ್ನ ಪ್ರಶಸ್ತಿ’ ನೀಡಿ ಗೌರವಾನ್ವಿತ ಅತಿಥಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಚಿಗುರೆಲೆ’ ಸಾಹಿತ್ಯ ಬಳಗದ ಸದಸ್ಯರಾಗಿರುವ ಇವರು ಸಾಹಿತ್ಯ, ಸಾಂಸ್ಕೃತಿಕ ಮತ್ತು ಸಮಾಜಮುಖಿ ಸೇವೆಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.
ಸಮಾರಂಭದಲ್ಲಿ ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಎಚ್. ಭೀಮರಾವ್ ವಾಷ್ಠ ರ್ ಸುಳ್ಯ, ಹಿರಿಯ ಸಾಹಿತಿ ಶ್ರೀ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ, ಹಿರಿಯ ಸಾಹಿತಿಗಳಾದ ನಾರಾಯಣ ಕುಕ್ಕುವಳ್ಳಿ, ಶ್ರೀ ಮೋಹನ್ ನಂಗಾರು, ಶ್ರೀ ಚನ್ನಕೇಶವ ಜಾಲ್ಸೂರು, ಶ್ರೀ ಪಿ. ವೆಂಕಟೇಶ್ ಬಾಗವಾಡ ಹಾಗೂ ನವೀನ್ ಚಾತುಬಾಯಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.