ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ‘ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ.)’ ಇದರ ವತಿಯಿಂದ ದತ್ತಿ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಹುಮಾನ ಕಾರ್ಯಕ್ರಮವನ್ನು ದಿನಾಂಕ 16 ಮಾರ್ಚ್ 2025ರಂದು ಪೂರ್ವಾಹ್ನ 9-30 ಗಂಟೆಗೆ ಮಂಗಳೂರಿನ ಉರ್ವಸ್ಟೋರ್ ಅಶೋಕ ನಗರ ಕಚೇರಿ ಬಳಿಯಿರುವ ಸಾಹಿತ್ಯ ಸದನದಲ್ಲಿ ಹಮ್ಮಿಕೊಳ್ಳಲಾಗಿದೆ.
‘ನಾಗಂದಿಗೆಯೊಳಗಿನ ಸಿಹಿ-ಕಹಿ’ ಬಿ.ಎಂ. ರೋಹಿಣಿಯವರ ಕೃತಿಗಳ ಓದು ಮತ್ತು ಸಂವಾದ ಕಾರ್ಯಕ್ರಮದಲ್ಲಿ ಗೋವಿಂದದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಪಿ. ಕೃಷ್ಣಮೂರ್ತಿಯವರು ಸಮನ್ವಯಕಾರರಾಗಿ ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳು ಭಾಗವಹಿಸಲಿವೆ. ಅಪರಾಹ್ನ 2-30 ಗಂಟೆಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಾಡೋಜ ಡಾ. ಸಾರಾ ಅಬೂಬಕರ್ ದತ್ತಿ ನಿಧಿಯ ‘ಸಾರಾ ದತ್ತಿ ಪ್ರಶಸ್ತಿ’ಯನ್ನು ಡಾ. ಗೀತಾ ಶೆಣೈ, ಚಂದ್ರಭಾಗಿ ರೈ ದತ್ತಿ ನಿಧಿಯ ‘ಚಂದ್ರಭಾಗಿ ರೈ ದತ್ತಿ ಬಹುಮಾನ ವಿಜೇತರು’ ರಾಜಲಕ್ಷ್ಮೀ ಕೋಡಿಬೆಟ್ಟು ಹಾಗೂ ಡಾ. ಮಮತಾ ತಿಲಕ್ ರಾವ್ ಮುಂಬೈ ದತ್ತಿನಿಧಿಯ ‘ಅಮ್ಮ ಪ್ರಶಸ್ತಿ’ ಪುರಸ್ಕ್ರತರು ಲೇಖಕಿ ಬಿ.ಎಂ. ರೋಹಿಣಿ ಮತ್ತು ‘ಅನನ್ಯ ಸಾಧಕಿ’ ಪ್ರಶಸ್ತಿ ಪುರಸ್ಕ್ರತರು ಗ್ರಾಮ ಪಂಚಾಯತ್ ಸದಸ್ಯೆ ಶಮೀಮಾ ಇವರುಗಳಿಗೆ ಪ್ರದಾನ ಮಾಡಲಾಗುವುದು.