ಬೆಂಗಳೂರು : ಸಂಸ್ಕೃತಿ ಸೌರಭ ಟ್ರಸ್ಟ್ (ರಿ.) ಇದರ ವತಿಯಿಂದ ವಾದ್ಯಗೋಷ್ಠಿ ವೈಭವದ ಆ ದಿನಗಳು ‘ಚಿರನೂತನ ಗೀತ ಗಾಯನ’ವನ್ನು ದಿನಾಂಕ 23 ಫೆಬ್ರವರಿ 2025ರಂದು ಸಂಜೆ 4-00 ಗಂಟೆಗೆ ಬೆಂಗಳೂರು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ವಾದ್ಯಗೋಷ್ಠಿ ರಂಗದಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಕಲಾವಿದರು ಹಾಗೂ ಕಲಾಪೋಷಕರಿಗೆ ಅಭಿನಂದನಾ ಸಮಾರಂಭ ಇದಾಗಿದೆ.
ಬೆಂಗಳೂರು ನಗರ ಕ.ರ.ವೇ. ಅಧ್ಯಕ್ಷರಾದ ಶಿವಾನಂದ ಶೆಟ್ಟಿಯವರು ಈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಚಲನಚಿತ್ರ ಸಂಗೀತ ನಿರ್ದೇಶಕರು, ನಿರ್ಮಾಪಕರು ಹಾಗೂ ಗಾಯಕರಾದ ಟಾಪ್ ಸ್ಟಾರ್ ರೇಣುಕುಮಾರ್ ಇವರು ಉದ್ಘಾಟಿಸಲಿದ್ದಾರೆ. ಬಿ.ಜೆ.ಪಿ. ಮಹಾಲಕ್ಷ್ಮೀ ಲೇಔಟ್ ಮಂಡಲದ ಅಧ್ಯಕ್ಷರಾದ ಹೆಚ್.ಎಸ್. ರಾಘವೇಂದ್ರ ಶೆಟ್ಟಿಯವರು ಕಲಾವಿದರು ಹಾಗೂ ಕಲಾಪೋಷಕರನ್ನು ಅಭಿನಂದಿಸಲಿದ್ದು, ಸಂಸ್ಕೃತಿ ಸೌರಭ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷರಾದ ಡಾ. ರಾ.ಬಿ. ನಾಗರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.