ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರ ವತಿಯಿಂದ ನಡೆಯುವ ‘ತಿಂಗಳ ನಾಟಕ ಸಂಭ್ರಮ’ದ ಪ್ರಯುಕ್ತ ನಾಟಕ ಪ್ರದರ್ಶನವನ್ನು ದಿನಾಂಕ 20 ಸೆಪ್ಟೆಂಬರ್ 2025ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಮುಚ್ಚಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ರಂಗ ಸಂಘಟಕರಾದ ವಿ.ಎಂ. ನಾಗೇಶ್ ಇವರು ತಿಂಗಳ ಅತಿಥಿಯಾಗಿ ಭಾಗವಹಿಸಲಿದ್ದು, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಡಾ. ಕೆ.ವಿ. ನಾಗರಾಜಮೂರ್ತಿಯವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಂಬಯಿಯ ಕನ್ನಡ ಕಲಾ ಕೇಂದ್ರ ಪ್ರಸ್ತುತ ಪಡಿಸುವ ‘ಚೌಕಟ್ಟಿನಾಚೆಯ ಚಿತ್ರ’ ತೃತೀಯ ಲಿಂಗಿಗಳ ಕುರಿತ ವಿಭಿನ್ನ ರೀತಿಯ ನಾಟಕ ಸಾ. ದಯಾ ಇವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.