ಕಾಸರಗೋಡು : ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ, ಕೇಂದ್ರ ಸಮಿತಿಯ ಸಹಕಾರದಲ್ಲಿ ಬೇಕಲ ರಾಮ ನಾಯಕ ಸ್ಮರಣಾಂಜಲಿಯ ಅಂಗವಾಗಿ ವಸಂತ ಚುಟುಕು ಕವಿಗೋಷ್ಠಿಯು ದಿನಾಂಕ 27 ಏಪ್ರಿಲ್ 2025ರ ಭಾನುವಾರದಂದು ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದ ಬಯಲು ರಂಗ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹಿರಿಯ ಸಾಹಿತಿ ಕೆ. ನರಸಿಂಹ ಭಟ್ ಏತಡ್ಕ ಮಾತನಾಡಿ “ಚುಟುಕುಗಳು ಅಂತ್ಯ ಪ್ರಾಸವಿರುವ ನಾಲ್ಕು ಸಾಲಿನ ಕವನ. ಹನಿಗವನಕ್ಕೂ ಚುಟುಕಿಗೂ ವ್ಯತ್ಯಾಸ ಇದೆ. ಚುಟುಕುಗಳು ಸಂದೇಶವನ್ನು ಕೊಡುವ ಹಾಗಿರಬೇಕು. ಸಮಯೋಚಿತ ಚುಟುಕುಗಳು ಆಸಕ್ತರಿಂದ ಹೆಚ್ಚು ಮೆಚ್ಚುಗೆಯನ್ನು ಪಡೆಯುತ್ತವೆ. ಯಾವುದೇ ವಿಷಯವನ್ನಾದರೂ ಚುಟುಕನ್ನಾಗಿಸುವ ಸಾಮರ್ಥ್ಯ ಚುಟುಕು ಕವಿಗಿರಬೇಕು. ಇದು ಅಭ್ಯಾಸದಿಂದ ಸಿದ್ಧಿಸುತ್ತದೆ” ಎಂದರು.
ಚುಟುಕು ಕವಿಗೋಷ್ಠಿಯಲ್ಲಿ ವಿಜಯರಾಜ ಪುಣಿಂಚಿತ್ತಾಯ ಬೆಳ್ಳೂರು, ನಾರಾಯಣ ನಾಯ್ಕ ಕುದುಕೋಳಿ, ಶಾರದಾ ಮೊಳೆಯಾರ್ ಎಡನೀರು, ಹರ್ಷಿತಾ ಶಾಂತಿಮೂಲೆ, ಶಶಿಕಲಾ ಟೀಚರ್ ಕುಂಬಳೆ, ರೇಖಾ ರೋಶನ್ ಕಾಸರಗೋಡು, ಚಿತ್ರಕಲಾ ದೇವರಾಜ್ ಆಚಾರ್ಯ ಸೂರಂಬೈಲು, ದೇವರಾಜ್ ಆಚಾರ್ಯ ಸೂರಂಬೈಲು,ಗಿರೀಶ ಪಿ ಎಂ ಚಿತ್ತಾರಿ. ಹರೀಶ ಜಿ ಕುಳಬೈಲು, ಬೊಟ್ಟೋಳಂಡ ನಿವ್ಯ ದೇವಯ್ಯ, ವೈಶಾಲಿನಿ ಟಿ., ಪೆರಿಯಂಡ ಯಶೋದಾ, ಪ್ರೇಮಾ ತೊಕ್ಕೊಟ್ಟು ಮೊದಲಾದ ಚುಟುಕು ಕವಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ, ಡಾ. ವಾಮನ್ ರಾವ್ ಬೇಕಲ್, ಸಂಧ್ಯಾರಾಣಿ ಟೀಚರ್, ವಿರಾಜ್ ಅಡೂರು, ವಿಶಾಲಾಕ್ಷ ಪುತ್ರಕಳ, ವಸಂತ ಕೆರೆಮನೆ, ರಾಜೇಶ್ ಕೋಟೆಕಣಿ, ರುಬೀನಾ ಎಂ. ಎ., ಬೊಳ್ಳಜಿರ ಜಿ. ಅಯ್ಯಪ್ಪ, ಸೋಮು ಎಚ್. ಹಿಪ್ಪರಗಿ, ಡಾ. ಕೊಳಚಪ್ಪೆ ಗೋವಿಂದ ಭಟ್, ಪತ್ರಕರ್ತ ಪುರುಷೋತ್ತಮ ಭಟ್ ಪುದುಕೋಳಿ, ಕನ್ನಡ ಭವನ ಉಪಾಧ್ಯಕ್ಷ ಪ್ರಕಾಶ್ ಚಂದ್ರ ಕಾಸರಗೋಡು ಇದ್ದರು. ಈ ಸಂದರ್ಭದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕೆ. ನರಸಿಂಹ ಭಟ್ಟರನ್ನು ಗೌರವಿಸಲಾಯಿತು.
Subscribe to Updates
Get the latest creative news from FooBar about art, design and business.
Previous Articleನಾಡೋಜ ಬೆಳಗಲ್ಲು ವೀರಣ್ಣ ರಾಷ್ಟ್ರೀಯ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭ
Next Article ಸುರತ್ಕಲ್ ಇಲ್ಲಿನ ವಿರಾಟ್ ಸಭಾಂಗಣದಲ್ಲಿ ‘ಸಾಹಿತ್ಯ ಸಂಭ್ರಮ’