ಮಂಗಳೂರು : ಮಹಾಲಸ ಕಾಲೇಜ್ ಆಫ್ ವಿಷುವಲ್ ಆರ್ಟ್ ಆಯೋಜಿಸಿದ ‘ಮಂಡಲ ಮತ್ತು ಕೊಲಾಜ್ ಆರ್ಟ್’ ಚಿತ್ರಕಲಾ ಪ್ರದರ್ಶನದ ಉದ್ಘಾಟನಾ ಸಮಾರಂಭವು ದಿನಾಂಕ 27 ಡಿಸೆಂಬರ್ 2024ರ ಶುಕ್ರವಾರದಂದು ಕಾಲೇಜಿನಲ್ಲಿ ನಡೆಯಿತು.
ಸರಳವಾಗಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ದ.ಕ. ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ಮಹಾಲಸ ಶಿಕ್ಷಣ ಸಮಿತಿ ನಿರ್ದೇಶಕ ಬಾಬು ರಾವ್, ಕಾಲೇಜಿನ ಸ್ಥಾಪಕ ತಾರಾನಾಥ ಪೈ, ಹಿರಿಯ ಚಿತ್ರಕಲಾವಿದ ಗಣೇಶ್ ಸೋಮಯಾಜಿ, ಪ್ರದರ್ಶನದ ನಿರ್ದೇಶಕ ಸೈಯದ್ ಆಸಿಫ್ ಅಲಿ ಹಾಗೂ ಕಾಲೇಜಿನ ಪ್ರಾಂಶುಪಾಲ ಮೋಹನ್ ಕುಮಾರ್ ಉಪಸ್ಥಿತರಿದ್ದರು.
ಪ್ರದರ್ಶನದಲ್ಲಿ ನಿರುಪಯುಕ್ತ ಪೇಪರ್, ಮ್ಯಾಗಝಿನ್ ಚೂರುಗಳಿಂದ ಮೂಡಿ ಬಂದ ಪ್ರಧಾನಿ ನರೇಂದ್ರ ಮೋದಿ, ಅಬ್ದುಲ್ ಕಲಾಂ, ಎಸ್. ಪಿ. ಬಾಲಸುಬ್ರಹ್ಮಣ್ಯಂ, ಹಂಪಿ ಕಲ್ಲಿನರಥ, ವಿವಿಧ ಪ್ರಾಣಿಗಳು ಸಹಿತ ಸುಮಾರು 35ಕ್ಕೂ ಹೆಚ್ಚಿನ ಕಲಾಕೃತಿಗಳು ಆಕರ್ಷಿಸುತ್ತಿವೆ. ಅದೇ ರೀತಿ, ಸಾಂಪ್ರದಾಯಿಕ ಮಂಡಲ ಕಲೆಯ ಸುಮಾರು 50ರಷ್ಟು ಚಿತ್ರಕಲೆಗಳು ಇಲ್ಲಿದೆ. ಲ್ಯಾಂಡ್‌ಸ್ಕೇಪ್, ಪ್ರಾಣಿಗಳು, ಹೂವುಗಳು ಸಹಿತ ಡಾಟ್ ಪೈಂಟಿಂಗ್ ನೋಡುಗರನ್ನು ಸೆಳೆಯುವಂತೆ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳೇ ಈ ಚಿತ್ರಕಲೆಯನ್ನು ರಚಿಸಿದ್ದಾರೆ.