ಕಾರ್ಕಳ : ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ‘ಕ್ರಿಯೇಟಿವ್ ನಿನಾದ ಸಂಚಿಕೆ-6’ ಬಿಡುಗಡೆ ಕಾರ್ಯಕ್ರಮವು ದಿನಾಂಕ 16-03-2024 ರಂದು ನಡೆಯಿತು.
ಸಂಚಿಕೆ-6ನ್ನು ಬಿಡುಗಡೆಗೊಳಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ಘಟಕದ ಅಧ್ಯಕ್ಷರಾದ ಕೊಂಡಳ್ಳಿ ಪ್ರಭಾಕರ ಶೆಟ್ಟಿ “ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರ ಬೆಳೆಯಬೇಕಾದರೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯದ ಅಧ್ಯಯನ ನಡೆಸಬೇಕು. ಹಿರಿಯರ ಜೀವನ ದರ್ಶನವನ್ನು ಅನುಸರಿಸಬೇಕು. ಆಗ ಬದುಕಿನ ಹೊಸತನಗಳು ತೆರೆದುಕೊಳ್ಳುತ್ತವೆ. ಜೀವನವನ್ನು ಧೈರ್ಯದಿಂದ ಎದುರಿಸುವ ದೃಢತೆ ನಮ್ಮಲ್ಲಿ ಉಂಟಾಗುತ್ತದೆ. ಶಿಕ್ಷಣವಂತ ಸಮಾಜವು ದೇಶದ ಉನ್ನತಿಗೆ ಕಾರಣೀಕರ್ತವಾಗುತ್ತದೆ. ಯುವ ಸಮುದಾಯ ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು.” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ನೈಋತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಶ್ರೀ ಎಸ್. ಭೋಜೆಗೌಡ ಮಾತನಾಡಿ “ಸಮಾಜಕ್ಕೆ ಮಾರ್ಗದರ್ಶನ ನೀಡುವ ಶಿಕ್ಷಣದ ಪಠ್ಯಕ್ರಮ ರಚನೆಯಾಗಿ ಮೌಲ್ಯಗಳನ್ನು ಅಳವಡಿಸುವಂತಾಗಲಿ.” ಎಂದು ಆಶಿಸಿದರು.
ಕಾರ್ಯಕ್ರಮಾದಲ್ಲಿ ಕ. ಸಾ. ಪ. ದ ವಿವಿಧ ಪದಾಧಿಕಾರಿಗಳು, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್. , ಅಮೃತ್ ರೈ, ಗಣಪತಿ ಭಟ್ ಕೆ. ಎಸ್., ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ರಾಮಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು
Subscribe to Updates
Get the latest creative news from FooBar about art, design and business.