ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಸೇವೆ ಆಟದ ಸಂಧರ್ಭದಲ್ಲಿ ಮೇಳದಲ್ಲಿ ದೀರ್ಘಕಾಲ ಸೇವೆ ಸಲ್ಲಿಸುವುದರ ಮೂಲಕ ಮೇಳದ ಕೀರ್ತಿಗೆ ಭಾಜನರಾಗಿ ಇತ್ತೀಚಿಗಷ್ಟೇ ಕಲಾ ಮಾತೆಯ ಮಡಿಲನ್ನು ಸೇರಿದ ಹಿರಿಯ ಕಲಾವಿದರಾದ ಕುಂಬ್ಳೆ ಶ್ರೀಧರ್ ರಾವ್ ಹಾಗೂ ಗಂಗಾಧರ ಪುತ್ತೂರು ಇವರಿಗೆ ನುಡಿನಮನ ಸಲ್ಲಿಸುವ ಕಾರ್ಯಕ್ರಮ ದಿನಾಂಕ 08 ನವೆಂಬರ್ 2024 ರಂದು ಧರ್ಮಸ್ಥಳದಲ್ಲಿ ಜರುಗಿತು. ಇದೇ ಸಂದರ್ಭದಲ್ಲಿ ಮೇಳದಲ್ಲಿ ನಾಲ್ಕು ದಶಕಗಳ ಕಾಲ ಶ್ರೀ ಮಹಾಗಣಪತಿ ದೇವರ ಅರ್ಚಕರಾಗಿದ್ದ ಬೆಳ್ಳಿಬೆಟ್ಟು ಬಾಲಕೃಷ್ಣ ಭಟ್ ಹಾಗೂ ತೆಂಕುತಿಟ್ಟಿನ ಹಿರಿಯ ಹಾಸ್ಯಗಾರ ಬಂಟ್ವಾಳ ಜಯರಾಮ ಆಚಾರ್ಯರಿಗೂ ನುಡಿನಮನ ಸಲ್ಲಿಸಲಾಯಿತು.
ಮೇಳದ ಪ್ರಧಾನ ಭಾಗವತರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯ ಹಾಗೂ ಹಿರಿಯ ಕಲಾವಿದ ವಸಂತ ಗೌಡ ಕಾಯರ್ತಡ್ಕ ಗತಿಸಿದ ಮಹನೀಯರೀಗೆ ನುಡಿನಮನದ ಮೂಲಕ ಸ್ಮರಣಾಂಜಲಿ ಸಲ್ಲಿಸಿದರು. ಮೇಳದ ಸಹ ಪ್ರಬಂಧಕ ಪುಷ್ಪರಾಜ್ ಶೆಟ್ಟಿ, ಕಲಾವಿದರಾದ ಕರುಣಾಕರ ಶೆಟ್ಟಿಗಾರ್, ಚಂದ್ರಶೇಖರ ಸರಪಾಡಿ, ಶಂಭಯ್ಯ ಕಂಜರ್ಪಣೆ, ಚಂದ್ರಶೇಖರ ಧರ್ಮಸ್ಥಳ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕೀರ್ತಿಶೇಷರ ಭಾವಚಿತ್ರಗಳಿಗೆ ಪುಷ್ಪಾಂಜಲಿ ಅರ್ಪಿಸುವುದರ ಮೂಲಕ ಗೌರವ ಸಲ್ಲಿಸಲಾಯಿತು.
ಮೇಳದ ಯಜಮಾನರ ಸಮಕ್ಷಮ ನಡೆದ ಈ ಕಾರ್ಯಕ್ರಮವನ್ನು ಮೇಳದ ಮೇನೇಜರ್ ಗಿರೀಶ್ ಹೆಗ್ಡೆ ನಿರೂಪಿಸಿದರು.
Subscribe to Updates
Get the latest creative news from FooBar about art, design and business.