Subscribe to Updates

    Get the latest creative news from FooBar about art, design and business.

    What's Hot

    ಪುಸ್ತಕ ವಿಮರ್ಶೆ | ‘ಮಾತು ಮದ್ದಳೆ’ ಅರ್ಥಗಾರಿಕೆಯ ವಿಶೇಷ ಜಿಜ್ಞಾಸೆ

    June 13, 2026

    ಶರಣ ಸಾಹಿತ್ಯ ಸಮ್ಮೇಳನಕ್ಕೆ ಕಾರ್ಯಕ್ರಮಗಳಿಗೆ ಆಹ್ವಾನ | ಕೊನೆಯ ದಿನಾಂಕ ಜೂನ್ 15

    June 13, 2026

    ಕಲಾಂಗಣದಲ್ಲಿ ರಾಜ್ಯ ಮಟ್ಟದ ಸಿಮೆಂಟ್‌ ಶಿಲ್ಪ ಶಿಬಿರ ಆರಂಭ

    June 13, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಉದ್ಘಾಟನೆಗೊಂಡ ‘ಕಾವಿ ಕೆಲಿಡೋಸ್ಕೋಪ್’ ಕಾವಿ ಭಿತ್ತಿಚಿತ್ರಗಳ ಕಲಾ ಪ್ರದರ್ಶನ
    Drawing

    ಉದ್ಘಾಟನೆಗೊಂಡ ‘ಕಾವಿ ಕೆಲಿಡೋಸ್ಕೋಪ್’ ಕಾವಿ ಭಿತ್ತಿಚಿತ್ರಗಳ ಕಲಾ ಪ್ರದರ್ಶನ

    November 12, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಕಾವಿ ಆರ್ಟ್ ಫೌಂಡೇಶನ್ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಸಂಯೋಜಿಸಿದ ಕಲಾವಿದ ಜನಾರ್ದನ ರಾವ್ ಹಾವಂಜೆಯವರ ಕಾವಿ ಕಲೆಯ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ‘ಕಾವಿ ಕೆಲಿಡೋಸ್ಕೋಪ್’ ಚಿತ್ರಕಲಾ ಪರಿಷತ್ತಿನ ಗ್ಯಾಲರಿಯಲ್ಲಿ ದಿನಾಂಕ 09 ನವೆಂಬರ್ 2024ರಂದು ಉದ್ಘಾಟನೆಗೊಂಡಿತು.

    ಈ ಕಲಾ ಪ್ರದರ್ಶನವನ್ನು ಉದ್ಘಾಟನೆಗೊಳಿಸಿದ ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾದ ಪ.ಸ. ಕುಮಾರ್‌ ಇವರು ಮಾತನಾಡಿ “ದೇಶೀಯ ಪಾರಂಪರಿಕ ಕಾವಿ ಕಲೆಯ ಹೂರಣವನ್ನು ಹಾವಂಜೆಯವರು ಈ ಪ್ರದರ್ಶನದಲ್ಲಿ ಕಲಾ ರಸಿಕರಿಗೆ ಉಣಬಡಿಸಿದ್ದಾರೆ. ಕರ್ನಾಟಕದ ಕರಾವಳಿಯ ಭಾಗದ ಈ ಅನೂಹ್ಯಕಲೆಯನ್ನು ಕನ್ನಡಿಗರಾದ ನಾವು ಉಳಿಸಿ ಬೆಳೆಸಬೇಕಾದುದು ನಮ್ಮ ಕರ್ತವ್ಯ. ಈ ಕಲೆಗೆ ಆದಷ್ಟು ಶೀಘ್ರದಲ್ಲಿ ಕರ್ನಾಟಕಕ್ಕೆ ಜಿ.ಐ. ಟ್ಯಾಗ್‌ ದೊರಕಲಿ. ಅಕಾಡೆಮಿಯಿಂದ ಈ ಕಲೆಯ ಬೆಳೆಸುವಿಕೆಗಾಗಿ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.” ಎಂಬುದಾಗಿ ತಿಳಿಸಿದರು.

    ಹಿರಿಯ ಕಲಾವಿದರಾದ ಗುರುದಾಸ್ ಶೆಣೈ “ಅಧ್ಯಯನಶೀಲ ಸಮಕಾಲೀನ ಕಲಾವಿದನೋರ್ವನ ಕೈಯಲ್ಲಿ ಪ್ರಾಂತೀಯ ಕಲೆಯೊಂದು ದೊರೆತಾಗ ಅದು ಹೊರಹೊಮ್ಮಿಸುವ ರೂಪಗಳಿಗೆ ಈ ಕಲಾಪ್ರದರ್ಶನವೇ ಸಾಕ್ಷಿ” ಎಂಬುದಾಗಿ ಅಭಿಪ್ರಾಯವಿತ್ತರು.

    ಅತಿಥಿಗಳಾದ ಲಹರಿ ಗ್ರೂಪ್‌ನ ರೂಪಾ ಹರಿಪ್ರಸಾದ್, ಹಲವು ಹಿರಿಯ ಕಲಾವಿದರು, ಆರ್ಕಿಟೆಕ್ಟ್ಸ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಲಾವಿದ ಡಾ. ಜನಾರ್ದನ ಹಾವಂಜೆ ಕಟ್ಟಡಗಳ ಮೇಲೆ ಕೆಮ್ಮಣ್ಣಿನ ಮೇಲೆ ಗೀರಿರಚಿಸಲಾಗುವ ಈ ಅಳಿವಿನಂಚಿನ ಪುರಾತನ ಕಲೆಯ ಬಗೆಗೆ ವಿವರಿಸಿ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಕರ್ನಾಟಕದ ಸಾಂಪ್ರದಾಯಿಕ ಹಾಗೂ ಜನಪದೀಯ ಲಕ್ಷಣಗಳುಳ್ಳ ಕಾವಿ ಕಲಾಪ್ರದರ್ಶನವು ದಿನಾಂಕ 17 ನವೆಂಬರ್ 2024ರವರೆಗೆ ಚಿತ್ರಕಲಾ ಪರಿಷತ್ತಿನ ಗ್ಯಾಲರಿಯಲ್ಲಿ ಕಲಾ ಸಹೃದಯರಿಗೆ ತೆರೆದಿರುತ್ತದೆ.

    Share. Facebook Twitter Pinterest LinkedIn Tumblr WhatsApp Email
    Previous Articleಧರ್ಮಸ್ಥಳದಲ್ಲಿ ನುಡಿನಮನ
    Next Article ಶೇಣಿಯಲ್ಲಿ ಕುಂಬಳೆ ಉಪಜಿಲ್ಲಾ ಶಾಲಾ ‘ಕಲೋತ್ಸವಂ’ಗೆ ಚಾಲನೆ
    roovari

    Add Comment Cancel Reply


    Related Posts

    ಚಿತ್ರಕಲಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ | ಜೂನ್ 30

    June 10, 2026

    ಚಿತ್ರ ಬುಡ್ಪಾಯೆರ್ ಜೋಕುಲು

    June 9, 2026

    ಕಲಾತಂಡ, ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 12

    June 9, 2026

    ಬಾಲ್ಯದಿಂದಲೇ ಅಭಿರುಚಿ ಬೆಳೆಸಿಕೊಳ್ಳಬೇಕು – ಡಾ. ಯಶವಂತ ಎನ್. ನಾಯಕ್

    May 13, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.