ಮಂಗಳೂರು : ತುಳುನಾಡ ತುಡರ್ (ರಿ.) ಪ್ರಸ್ತುತಪಡಿಸುವ ‘ದೈವೊದ ಬೂಳ್ಯ’ ನಾಟಕದ ಪ್ರದರ್ಶನವು ರೋಮಾಂಚನಕಾರಿ ರಂಗತಂತ್ರದೊಂದಿಗೆ ದಿನಾಂಕ 02-09-2023ರ ಸಂಜೆ 5.30ಕ್ಕೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.
ತುಳುನಾಡಿನ ಬೀಡೊಂದರಲ್ಲಿ ಸುಮಾರು 400 ವರ್ಷಗಳಷ್ಟು ಹಿಂದೆ ಜರಗಿದ ಸತ್ಯಘಟನೆಯೊಂದರ ಪರತಿಮಂಗಣೆ ಪಾಡ್ದಣದ ಕಥಾನಕವನ್ನು ಆಧರಿಸಿದ ಬಿ.ಕೆ.ಗಂಗಾಧರ ಕಿರೋಡಿಯನ್ ನಿರ್ದೇಶನದಲ್ಲಿ ಸಿನೆಮಾ ರೂಪದಲ್ಲಿ ನೋಮೊದ ಬೂಳ್ಯ ಪ್ರದರ್ಶನವಾಗಿತ್ತು. ಇದೇ ಕೃತಿ ದೈವೊದ ಬೂಳ್ಯ ಎಂಬ ಹೆಸರಿನಲ್ಲಿ ಕೆಲವು ದೃಶ್ಯಗಳ ಬದಲಾವಣೆಯೊಂದಿಗೆ ಹೊಸ ರೀತಿಯ ರೋಮಾಂಚನಕಾರಿ ರಂಗತಂತ್ರದೊಂದಿಗೆ ಗಂಗಾಧರ ಕಿರೋಡಿಯನ್ ನಿರ್ದೇಶನ ಹಾಗೂ ನಯನಾ ಕೋಟ್ಯಾನ್ ಸಹನಿರ್ದೇಶನದಲ್ಲಿ ಮೂಡಿಬಂದಿದೆ. ಈ ನಾಟಕಕ್ಕೆ ವಿದ್ವಾಂಸ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹಾಗೂ ಶ್ರೀ ಬಿ.ಕೆ ಗಂಗಾಧರ ಕಿರೋಡಿಯಾನ್ ಗೀತೆ ರಚನೆ ಮಾಡಿದ್ದು, ಶ್ರೀ ಎ.ಕೆ ವಿಜಯ (ಕೋಕಿಲಾ) ಸಂಗೀತ ನೀಡಿರುವ ಈ ನಾಟಕಕ್ಕೆ ಶ್ರೀ ವಿದ್ದು ಉಚ್ಚಿಲ್ ಇವರ ಸಹಕಾರವಿದೆ.
Subscribe to Updates
Get the latest creative news from FooBar about art, design and business.
Previous Articleಪರಿಚಯ ಲೇಖನ | “ಕಲಾ ರತ್ನ” ಪೂರ್ಣಿಮಾ ಪ್ರಶಾಂತ್ ಶಾಸ್ತ್ರಿ
Next Article ‘ನರಾಧಮರ ನಡುವೆ’ ಕಾದಂಬರಿ ಲೋಕಾರ್ಪಣೆ | ಸೆಪ್ಟೆಂಬರ್ 9ರಂದು