ಕಳಸ : ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕ ಮತ್ತು ಕರ್ಣಾಟಕ ಲೇಖಕಿಯರ ಸಂಘ ಕಳಸ ಇದರ ವತಿಯಿಂದ ನಾಗಮಣಿ ಪೂರ್ಣಚಂದ್ರ ಇವರ ಆಶ್ರಯದಲ್ಲಿ ‘ಮನೆಯಂಗಳದಲ್ಲಿ ಮಹಿಳೆಯರ ದಸರಾ ಸಂಭ್ರಮ’ವನ್ನು ದಿನಾಂಕ 02 ಅಕ್ಟೋಬರ್ 2025ರಂದು ಕಳಸದ ಹಂದಿಗೋಡು ಮನೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಇತ್ತೀಚೆಗೆ ನಮ್ಮನ್ನು ಅಗಲಿದ ಹಿರಿಯ ಸಾಹಿತಿ ಶ್ರೀ ಎಸ್.ಎಲ್. ಭೈರಪ್ಪ ಇವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು, ಶ್ರೀಮತಿ ಮಮ್ತಾಜ್ ಬೇಗಂ ಇವರು ಶ್ರೀಯುತರ ಸಾಧನೆಗಳ ಕುರಿತು ಮಾತನಾಡಿದರು ಹಾಗೂ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನದ ಪ್ರಯುಕ್ತ ಈ ಹಿರಿಯ ಚೇತನಗಳಿಗೆ ಗೌರವ ಪೂರ್ವಕ ಪ್ರಣಾಮಗಳನ್ನು ಸಲ್ಲಿಸಲಾಯಿತು.
ನಂತರ ಲೇಖಕಿಯರ ಸಂಘದ ವತಿಯಿಂದ ಚುಟುಕು ಕವಿಗೋಷ್ಠಿ ಮತ್ತು ಮಹಿಳಾ ಘಟಕದ ವತಿಯಿಂದ ‘ಕನ್ನಡ ಪದ ಥಟ್ಟಂತ ಹೇಳಿ’ ಸ್ಫರ್ಧೆ ನಡೆಸಲಾಯಿತು. ಚಿ. ವಿಜೇತ್ ಚಂದ್ರ ಇವರಿಂದ ದಸರಾ ಮತ್ತು ಕನ್ನಡ ನಾಡು ನುಡಿ ಕುರಿತ ರಸಪ್ರಶ್ನೆ ನಡೆಯಿತು. ಅಂತ್ಯದಲ್ಲಿ ದಸರಾ ಸಂಭ್ರಮ ನೃತ್ಯ ಆಯೋಜಿಸಲಾಗಿತ್ತು. ಕ.ಸಾ.ಪ. ಮಹಿಳಾ ಘಟಕದ ಅಧ್ಯಕ್ಷೆ ಡಾ. ಜಾನಕಿ ಸುಂದರೇಶ್, ಲೇಖಕಿಯರ ಸಂಘದ ಅಧ್ಯಕ್ಷೆ ಗೀತಾ ಮಕ್ಕಿಮನೆ, ಜಿಲ್ಲಾ ಸಂಚಾಲಕಿ ಮಮ್ತಾಜ್ ಬೇಗಂ, ಅತಿಥೇಯರಾದ ರಾಮಚಂದ್ರ ಹೆಬ್ಬಾರ್ ಕುಟುಂಬ, ಪೂರ್ಣಚಂದ್ರ, ನಾಗಮಣಿ, ಕಾರ್ಯದರ್ಶಿ ಸಂಧ್ಯಾ ಗಿರಿಶ್ರೀ ಮತ್ತಿತರರು ಉಪಸ್ಥಿತರಿದ್ದರು.