ಸಾಲಿಗ್ರಾಮ : ಸಂಗೀತ ಅವಿನಾಶಿ ಪ್ರತಿಷ್ಠಾನ ಮತ್ತು ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರ ಸಮರ್ಪಿಸುವ ‘ಅವಿನಾಶ್ ಹೆಬ್ಬಾರ್ ದಶಮ ಸಂಸ್ಮರಣೆ’ ಕಾರ್ಯಕ್ರಮವನ್ನು ದಿನಾಂಕ 14 ಸೆಪ್ಟೆಂಬರ್ 2025ರಂದು ಮುಂಜಾನೆ 10-00 ಗಂಟೆಗೆ ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದ ಸದಾನಂದ ರಂಗ ಮಂಟಪದಲ್ಲಿ ಆಯೋಜಿಸಲಾಗಿದೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಗಾಯನ, ಸಂತೂರ್ ವಾದನ ಮತ್ತು ಕೊಳಲು ವಾದನ ಪ್ರಸ್ತುತಗೊಳ್ಳಲಿದೆ.
ಮುಂಜಾನೆ 10-00 ಗಂಟೆಗೆ ಚೈತನ್ಯ ಭಟ್ಟ ಇವರಿಂದ ಸಂತೂರ್ ವಾದನ, ಶ್ರೀಧರ ಹೆಗಡೆ ಕಲಭಾಗ ಮತ್ತು ವಿನಾಯಕ ಹೆಗಡೆ ಮುತಮರಡು ಇವರಿಂದ ಗಾಯನ, ನಾಗರಾಜ ಹೆಗಡೆ ಶಿರನಾಳ ಇವರಿಂದ ಕೊಳಲು ವಾದನಕ್ಕೆ ಗುರುರಾಜ ಹೆಗಡೆ ಮತ್ತು ಅಕ್ಷಯ ಭಟ್ಟ ತಬಲಾ ಹಾಗೂ ಶಂಭು ಭಟ್ಟ ಕೋಟ ಮತ್ತು ಶಶಿಕಿರಣ ಮಣಿಪಾಲ ಇವರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.