ಬೆಂಗಳೂರು : ಬೆಂಗಳೂರಿನ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಯೋಜಿಸಿದ ರಾಜ್ಯಮಟ್ಟದ ಮಹಿಳಾ ಸಮಾವೇಶ ‘ಅಭಿಜಾತೆ-2024’ ದಿನಾಂಕ 06 ಮತ್ತು 07-01-2024ರಂದು ಬೆಂಗಳೂರಿನ ಶಂಕರಪುರಂನಲ್ಲಿರುವ ಶ್ರೀ ಶೃಂಗೇರಿ ಶಂಕರಮಠದ ಆವರಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕಲಾ ಸಾಧಕಿ ಭರತಾಂಜಲಿ ನೃತ್ಯ ಸಂಸ್ಥೆಯ ನೃತ್ಯ ಗುರು ವಿದುಷಿ ಪ್ರತಿಮಾ ಶ್ರೀಧರ್ ಅವರನ್ನು ‘ಧೀ ಶಕ್ತಿ’ ಪುರಸ್ಕಾರ ನೀಡಿ ಸಮ್ಮಾನಿಸಲಾಯಿತು. ಸಂಚಾಲಕಿ ಡಾ. ಶುಭ ಮಂಗಳಾ ಸುಧೀರ್ ಹಾಗೂ ಸಮ್ಮೇಳನ ಕಾರ್ಯಾಧ್ಯಕ್ಷೆ ಮೇದಿನಿ ಉದಯ ಗರುಡಾಚಾರ್ ಮೊದಲಾದವರು ಉಪಸ್ಥಿತರಿದ್ದರು.