ಪುತ್ತೂರು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಹಾಗೂ ರೋಟರಿ ಕ್ಲಬ್ ಪುತ್ತೂರು ಯುವ ಇದರ ಜಂಟಿ ಆಶ್ರಯದಲ್ಲಿ ವಿಕಲಚೇತನರ ಸೇವಾ ಕೇಂದ್ರ ಪುತ್ತೂರು ತಾಲೂಕು ಪಂಚಾಯತ್ ಸಹಕಾರದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆಯ ಪ್ರಯುಕ್ತ ಪ್ರಪ್ರಥಮ ಬಾರಿಗೆ ವಿನೂತನ ಕಾರ್ಯಕ್ರಮ ‘ದಿವ್ಯಾಂಗಜನ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮವನ್ನು ದಿನಾಂಕ 03-12-2023 ಆದಿತ್ಯವಾರದಂದು ಪುತ್ತೂರಿನ ಬಿರುಮಲೆ ಬೆಟ್ಟದ ಪ್ರಜ್ಞಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ. ವಿಕಲಚೇತನರಲ್ಲಿರುವ ಸುಪ್ತ ಪ್ರತಿಭೆಯನ್ನು ಹಾಗೂ ಸಾಹಿತ್ಯ ಪ್ರತಿಭೆಯನ್ನು ಹೊರ ತರುವ ನಿಟ್ಟಿನಲ್ಲಿ ಹಾಗೂ ಸೂಕ್ತ ವೇದಿಕೆಯನ್ನು ನೀಡಿ ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಪ್ರಪ್ರಥಮ ವಿನೂತನ ಕಾರ್ಯಕ್ರಮ ಇದಾಗಿದೆ.
ಈ ಕಾರ್ಯಕ್ರಮದಲ್ಲಿ ಈ ಕೆಳಗಿನ ಗೋಷ್ಠಿಗಳಿಗೆ ಆಸಕ್ತಿಯುಳ್ಳ ಪುತ್ತೂರು ತಾಲೂಕಿನ ದಿವ್ಯಾಂಗ ಪ್ರತಿಭೆಗಳು ತಮ್ಮ ಹೆಸರನ್ನು ನೋಂದಾಯಿಸಬೇಕೆಂದು ವಿನಂತಿ. ಕವಿ ಗೋಷ್ಠಿ (ಸ್ವರಚಿತ ಕವನಗಳನ್ನು ವಾಚಿಸಲು ಅವಕಾಶ-12 ಸಾಲುಗಳ ಮಿತಿಯ ಒಳಗೆ ಇರುವ), ಕಥಾ ಗೋಷ್ಠಿ (ಸ್ವರಚಿತ ಕಿರು ಕಥೆಗಳನ್ನು ವಾಚಿಸಲು ಅವಕಾಶ 200-250 ಪದಗಳ ಒಳಗಿರುವ ಒಂದು ಕಿರು ಕಥೆ), ಕನ್ನಡ ಗೀತಗಾಯನ (ಕನ್ನಡ ಭಾವಗೀತೆ ಅಥವಾ ಕನ್ನಡ ಸಿನಿಮಾ ಗೀತೆಗಳನ್ನು ಹಾಡಲು ಅವಕಾಶ-ಕರೋಕೆ ಸಹಿತ ಅಥವಾ ರಹಿತ), ಪ್ರತಿಭಾ ಪ್ರದರ್ಶನ (ನೃತ್ಯ, ಮಿಮಿಕ್ರಿ, ಕೊಳಲು ವಾದನ, ತಬಲ ಅಥವಾ ಇತರ ಯಾವುದೇ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ, ಏಕವ್ಯಕ್ತಿ ಅಥವಾ ತಂಡ – 3 ನಿಮಿಷದ ಕಾಲಾವಕಾಶ) ಮತ್ತು ಮನೋರಂಜನಾ ಆಟೋಟ ಸ್ಪರ್ಧೆ (ಸಂಗೀತ ಕುರ್ಚಿ, ಟೊಪ್ಪಿ ಆಟ, ಚೆಂಡಿನಾಟ ಇತ್ಯಾದಿ ವಿಶೇಷ ಚೇತನರ ಸಾಮರ್ಥ್ಯದ ಆಟೋಟ ಸ್ಪರ್ಧೆ ಹಾಗೂ ಬಹುಮಾನ ವಿತರಣೆ ನಡೆಯಲಿದೆ)
ಆಸಕ್ತರು ದಿನಾಂಕ 29-11-2023ರ ಒಳಗಾಗಿ ತಮ್ಮ ಪುನರ್ವಸತಿ ಕಾರ್ಯಕರ್ತರಲ್ಲಿ ಹೆಸರು ನೋಂದಾಯಿಸಬೇಕಾಗಿ ವಿನಂತಿ. ಪುನರ್ವಸತಿ ಕಾರ್ಯಕರ್ತರು ಹೆಚ್ಚಿನ ಮಾಹಿತಿಗಾಗಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ 9844401295 ಅವರನ್ನು ಸಂಪರ್ಕಿಸಬಹುದು.