ಕೋಟ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಕೋಟತಟ್ಟು ವತಿಯಿಂದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಕೊಡಮಾಡುವ ನಾಲ್ಕನೇ ವರ್ಷದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಡಾ. ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರಕ್ಕೆ ಆಯ್ಕೆಯಾದವರ ಪಟ್ಟಿ ಪ್ರಕಟಗೊಂಡಿದೆ.
ವೀಣಾ ಆರ್. ಭಟ್ ವರಂಗ ಹೆಬ್ರಿ,ಪದ್ಮಿನಿ ಪೈ. ಬಿ ಕಾಸನಗುಂದು ಕೋಟ, ಸವಿತಾ ಮಾಧವ ಶಾಸ್ತ್ರಿ ಗುಂಡ್ಮಿ, ಶಾಂತಾ ವಾಸುದೇವ ಪೂಜಾರಿ ಮದ್ದುಗುಡ್ಡೆ, ಲಲಿತಾ ನಾಯಕ್ ಮದ್ದೂರು, ಅಶ್ವಿನಿ ಆರ್. ಕೊಂಚಾಡಿ ಮಂಗಳೂರು, ಮೂಕಾಂಬಿಕಾ ಮಯ್ಯ ಹರ್ತಟ್ಟು ಕೋಟ, ಗೀತಾ ಲಕ್ಷ್ಮೀಶ ಶೆಟ್ಟಿ ಮಂಗಳೂರು, ಪುಷ್ಪಾ ಪ್ರಸಾದ್ ಕಡಿಯಾಳಿ, ಸರಿತಾ ಕುತ್ಪಾಡಿ, ಶೋಭಾ ದಿನೇಶ್ ಉದ್ಯಾವರ, ಪ್ರಜ್ಞಾ ಜಿ. ಹಂದಟ್ಟು, ಬಿಂದು ನವೀನ್ ಕೋಟೇಶ್ವರ, ಶಾರದಾ ಅಂಪಾರು, ಶಯದೇವಿಸುತೆ ಮರವಂತೆ(ಜ್ಯೋತಿ ಜೀವನ್ ಸ್ವರೂಪ್) ಆಯ್ಕೆಯಾಗಿದ್ದಾರೆ.
ಡಾ. ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರವನ್ನು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ 08 ಮಾರ್ಚ್ 2025ರಂದು ಸಂಜೆ 4.30ಕ್ಕೆ ಪ್ರದಾನ ಮಾಡಲಾಗುವುದೆಂದು ಡಾ. ಶಿವರಾಮ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ. ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ಸತೀಶ ಕುಂದರ್, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ರವೀಂದ್ರ ರಾವ್, ಪಂಚಾಯತ್ ಕಾರ್ಯದರ್ಶಿಯವರಾದ ಸುಮತಿ ಅಂಚನ್ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Previous Articleಹಿರಿಯ ಕಲಾವಿದೆ ಶ್ರೀಮತಿ ಹಾಲಾಡಿ ಲಕ್ಷ್ಮೀದೇವಿ ವಾಸುದೇವ ಕಾಮತ್ ನಿಧನ
Next Article ಸಂಗೀತ ಸ್ವರ ಶಿರೋಮಣಿ ಗಂಗೂಬಾಯಿ ಹಾನಗಲ್