ಕುಂದಾಪುರ: ಕುಂದಾಪುರದ ವಿಜಯಲಕ್ಷ್ಮೀ ಟ್ರೇಡರ್ಸ್ ಮಾಲಕಿ, ಗುರುಪ್ರಸಾದ ಮಹಿಳಾ ಮಂಡಳಿ ಅಧ್ಯಕ್ಷೆ, ಹಿರಿಯ ಕಲಾವಿದೆ ಶ್ರೀಮತಿ ಹಾಲಾಡಿ ಲಕ್ಷ್ಮೀದೇವಿ ವಾಸುದೇವ ಕಾಮತ್ ದಿನಾಂಕ 02 ಮಾರ್ಚ್ 2025ರ ಆದಿತ್ಯವಾರದಂದು ನಿಧನರಾದರು. ಇವರಿಗೆ 76 ವರ್ಷ ವಯಸ್ಸಾಗಿತ್ತು.
ತಮ್ಮ ವ್ಯವಹಾರ ಜ್ಞಾನ, ಕ್ರಿಯಾಶೀಲತೆ, ಸಂಘಟನಾ ಶಕ್ತಿ, ಕಲೆ, ಸಾಹಿತ್ಯ, ಸಂಗೀತ, ಜನಪದ ಸಂಸ್ಕಂತಿ ಬಗ್ಗೆ ಆಸಕ್ತಿಯಿಂದ ಸದಾ ಕ್ರಿಯಾಶೀಲರಾಗಿರುತ್ತಿದ್ದ ಹಾಲಾಡಿ ಲಕ್ಷ್ಮೀದೇವಿ ಕಾಮತ್ ತಮ್ಮ ಕೃತಿಗಳಾದ ‘ಜೀವನ ಚಕ್ರ’, ‘ವೇದ ಸಾರ’, ‘ಜೋ… ಜೋ’…. ಹಾಗೂ ‘ಜಾನಪದ ಜೋಗುಳ ಗೀತೆ’ ಕೃತಿಗಳಿಂದಲೂ ಜನಪ್ರಿಯರಾದವರು. ಕೊಂಕಣಿ ಶಿಶುಗೀತೆಗಳ ಧ್ವನಿ ಪೆಟ್ಟಿಗೆ ಪ್ರಣಾಳಿಕೆ ತಂದವರು. ತಾಲೂಕಿನ ಅನೇಕ ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷತೆಯೂ ಸೇರಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದವರು.
‘ಕೊಂಕಣಿ ಕಲಾ ಸಮಾಜದ’ದ ಅಧ್ಯಕ್ಷರಾಗಿ ಹಲವು ಸಮ್ಮೇಳನ ನಡೆಸಿದ್ದ ಇವರು ಕೊಂಕಣಿ ಮಕ್ಕಳ ಸಂಘದ ಮೂಲಕ ಮಕ್ಕಳಿಗೆ ರಂಗ ಕಲೆ, ಯಕ್ಷಗಾನ, ಸಂಗೀತ ತರಬೇತಿ ವ್ಯವಸ್ಥೆ ಮಾಡುತ್ತಿದ್ದರು. ಮಂಗಳೂರಿನ ಚೆಂಬರ್ ಆಫ್ ಕಾಮರ್ಸ್, ಕೆ. ಎಸ್. ಎಸ್. ಐ. ಸಿ. ಸದಸ್ಯರಾಗಿದ್ದ ಇವರು ಮಂಗಳೂರಿನ ಬಿಜೈನಲ್ಲಿ ‘ಜಿಂಗಲ್ ಬೆಲ್ಸ್’ ನರ್ಸರಿ ಶಾಲೆಯನ್ನು ಸಂಚಾಲಕಿಯಾಗಿ ನಡೆಸಿದವರು. ಸ್ವತ: ಹಾಡುಗಾರರಾಗಿ ಆಕಾಶವಾಣಿ ಹಾಗೂ ದೂರದರ್ಶನಗಳಲ್ಲೂ ಕಾರ್ಯಕ್ರಮ ನೀಡಿದ್ದಾರೆ. ಹಲವು ನಾಟಕಗಳನ್ನು ರಚಿಸಿ, ನಿರ್ದೇಶಿಸಿ ಅಭಿನಯಿಸಿರುವ ಇವರು ಕನ್ನಡ, ಕೊಂಕಣಿ ಸಾಹಿತ್ಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ.
Subscribe to Updates
Get the latest creative news from FooBar about art, design and business.
Next Article ಡಾ. ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರ ಪಟ್ಟಿ ಪ್ರಕಟ