ಮೈಸೂರು : ಮೈಸೂರಿನ ಸಮತಾ ಅಧ್ಯಯನ ಕೇಂದ್ರ (ರಿ.) ಇದರ ವತಿಯಿಂದ ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕಾವ್ಯ ಮತ್ತು ಕಥಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ದಿನಾಂಕ 01 ಜೂನ್ 2025ರಂದು ಬೆಳಗ್ಗೆ 10-30 ಗಂಟೆಗೆ ಮೈಸೂರಿನ ರೋಟರಿ ಪಶ್ಚಿಮ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
‘ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ’ಯನ್ನು ಶಿವಮೊಗ್ಗದ ಹಿರಿಯ ಕವಯತ್ರಿ ಸವಿತಾ ನಾಗಭೂಷಣ ಇವರಿಗೆ ಪ್ರದಾನ ಮಾಡಲಾಗುವುದು. ‘ನೆನಪಿನಂಗಳದಲ್ಲಿ ವಿಜಯಾ ದಬ್ಬೆ’ ಎಂಬ ಕೃತಿಯನ್ನು ಖ್ಯಾತ ವಿಮರ್ಶಕರು ಮತ್ತು ಸಂಸ್ಕೃತಿ ಚಿಂತಕರಾದ ಡಾ. ಎಂ.ಎಸ್. ಆಶಾದೇವಿ ಇವರು ಲೋಕಾರ್ಪಣೆ ಮಾಡಲಿದ್ದು, ಸಮತಾ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ. ಸಬಿಹಾ ಭೂಮಿಗೌಡ ಇವರು ಅಧ್ಯಕ್ಷತೆ ವಹಿಸಲಿದ್ದಾರೆ.
ಕವನ ಸ್ಪರ್ಧೆ ವಿಜೇತರು : ಪ್ರಥಮ ಬಹುಮಾನ – ಆರ್. ಬಾಲಾಜಿ, ಕೆಜಿಎಫ್, ಆರ್.ವಿ. ಅಧ್ಯಾಪಕರ ಕಾಲೇಜು ಬೆಂಗಳೂರು ಕವನ : ‘ಎಂಟರ ಮನೆಯೊಳಗೆ ಕುಂಟೆ ಬಿಲ್ಲೆಯ ಆಟ’, ದ್ವಿತೀಯ ಬಹುಮಾನ (ಇಬ್ಬರಿಗೆ) – ಜೋತಿರ್ಲಕ್ಷ್ಮಿ ಕೇರಳ ಕೇಂದ್ರೀಯ ವಿ.ವಿ. ಕಾಸರಗೋಡು ಕವನ : ‘ಫಿಂಗರ್ ಪ್ರಿಂಟಿನಲ್ಲಿ ಅವಳ ವಿಶ್ವರೂಪ’ ಮತ್ತು ಜಯಶ್ರೀ ಇಡ್ಡಿದು, ಬಂಟ್ವಾಳ ದಕ್ಷಿಣ ಕನ್ನಡ ಕವನ : ‘ಬಾಡಿಗೆ ಕೋಣೆ’, ತೃತೀಯ ಬಹುಮಾನ – ರಶ್ಮಿ ಎಸ್. ನಾಯಕ್ ಚಿನ್ನಿಪುರದ ದೊಡ್ಡಿ, ಕೊಳ್ಳೇಗಾಲ ಕವನ : ‘ಹೆಣ್ತನ ಶಾಪವೇ’.
ತೀರ್ಪುಗಾರರ ಮೆಚ್ಚುಗೆ ಪಡೆದವರು 1. ಸೌಮ್ಯಶ್ರೀ ನಿಕ್ಕಮ್ ದಾವಣಗೆರೆ, 2. ವಿದ್ಯಾ ದೇವಾಡಿಗ ಬೆಂಗಳೂರು, 3. ಶ್ರೀ ವಿದ್ಯಾ ಕಲ್ಕುಣಿಕೆ, ಹುಣಸೂರು, 4. ಪಲ್ಲವಿ ಎಡೆಯೂರು ಬೆಂಗಳೂರು, 5. ಸಂತೋಷಕುಮಾರ್ ಬಿ.ಪಿ. ದಾವಣಗೆರೆ, 6. ನಂದಿನಿ ಯು. ಉರಗನಹಳ್ಳಿ, ಸೊರಬ, 7. ಮೇಘಾ ರಾಮದಾಸ್ ಗುಳಿಗೆಯನಹಳ್ಳಿ, ಶಿರಾ, 8. ಸಂಜನ ಸಿ. ಯಂಭತ್ನಾಳ ಬೆಳಗಾವಿ, 9. ಜ್ಯೋತಿ ಎಸ್. ಯಳಂದೂರು, 10. ಸಿದ್ದಾರೂಢ ಸಂ ಗುಗ್ಗರಿ ಬೆಳಗಾವಿ, 11. ಡಾ. ಭವ್ಯ ಅಶೋಕ್ ಸಂಪಗಾರ ಬೆಳಗಾವಿ, 12. ಡಾ. ಪರ್ವಿನ್ ಬೇಗಮ್ ಗಂಗಾವತಿ, 13. ಯಶಸ್ವಿನಿ ಎಂ.ಎನ್. ಪಡುವಾರಹಳ್ಳಿ, ಮೈಸೂರು.
ಸಣ್ಣ ಕಥೆ ವಿಜೇತರು : ಪ್ರಥಮ ಬಹುಮಾನ – ಪಲ್ಲವಿ ಎಡೆಯೂರು ಎಂ.ಸಿ. ಬಡಾವಣೆ. ವಿಜಯನಗರ, ಬೆಂಗಳೂರು. ಕಥೆ : ‘ಯುರೋಪ್ಲೊಮೆಟ್ರಿ’, ದ್ವಿತೀಯ ಬಹುಮಾನ ವಿನುತ ಕೆ.ಆರ್. ಮಾಗಡಿ-ರಾಮನಗರ ಮುಖ್ಯರಸ್ತೆ. ರಾಮನಗರ, ಕಥೆ : ‘ತಾಯಿ ಅಂದರೆ’, ತೃತೀಯ ಬಹುಮಾನ – ಡಾ. ಎಸ್. ಶಿಲ್ಪ ಸಹಪ್ರಾಧ್ಯಾಪಕರು. ಸ.ಪ್ರ.ದ. ಕಾಲೇಜು,ಮಾಲೂರು ಕಥೆ : ‘ಬಾಯಿ ಬಣ್ಣ’.
ತೀರ್ಪುಗಾರರ ಮೆಚ್ಚುಗೆ ಪಡೆದವರು : 1. ಅಕ್ಷತಾ ರಾಜ್ ಪೆರ್ಲ, ಕಾಸರಗೋಡು, 2. ಅಚಲ ಬಿ. ಹೆನ್ಸಿ ಬೆಂಗಳೂರು, 3. ರಂಜಿತ ವಿ. ಮಹಾಜನ್ ಬೆಳಗಾವಿ, 4. ತೇಜಶ್ರೀ ಎಂ. ಉಜಿರೆ, ದಕ್ಷಿಣ ಕನ್ನಡ, 5. ಫೌಜಿಯಾ ಸಲೀಂ ಗುರುಪುರ, ಮಂಗಳೂರು, 6. ಡಾ. ಭವ್ಯ ಅಶೋಕ್ ಸಂಪಗಾರ ಬೆಳಗಾವಿ, 7. ಸಿಂಧು ಎಂ. ಮೈಸೂರು, 8. ನಂದಿನಿ ಯು. ಉರಗನಹಳ್ಳಿ, ಸೊರಬ, 9. ಗುಣವತಿ ಕೆ.ಪಿ. ಹಳೆ ಕಿರಂಗೂರು, ಶ್ರೀರಂಗಪಟ್ಟಣ, 10. ಭೂಮಿಕ ಯು.ಕೆ. ತುತ್ತೂರು, ಶಿವಮೊಗ್ಗ.