Subscribe to Updates

    Get the latest creative news from FooBar about art, design and business.

    What's Hot

    ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್‌ನ ಪ್ರಥಮ ವಾರ್ಷಿಕೋತ್ಸವ ಸಮಾರಂಭ

    February 26, 2026

    ಉಷಾ ಕೆ.ವಿ. ಇವರ ‘ವೇದಾಂತ’ ಹಾಗೂ ‘ಸ್ಪಂದನ’ ಕೃತಿಗಳ ಲೋಕಾರ್ಪಣಾ ಸಮಾರಂಭ

    February 26, 2026

    ಸುಮನಸಾ ಕೊಡವೂರು ನಾಟಕೋತ್ಸವ ರಂಗಹಬ್ಬ-14ರ ಎರಡನೇ ದಿನದ ಕಾರ್ಯಕ್ರಮ

    February 26, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ‘ಸುಮನಸಾ ಕೊಡವೂರು’ ಸಂಸ್ಥೆಯ ರಂಗಹಬ್ಬದಲ್ಲಿ ‘ಸಮುದಾಯ ಬೆಂಗಳೂರು’ ಕಲಾವಿದರಿಂದ ನಾಟಕ ಪ್ರದರ್ಶನ
    Drama

    ‘ಸುಮನಸಾ ಕೊಡವೂರು’ ಸಂಸ್ಥೆಯ ರಂಗಹಬ್ಬದಲ್ಲಿ ‘ಸಮುದಾಯ ಬೆಂಗಳೂರು’ ಕಲಾವಿದರಿಂದ ನಾಟಕ ಪ್ರದರ್ಶನ

    March 2, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇಲ್ಲಿನ ಭುಜಂಗ ಪಾರ್ಕ್ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ 12ನೇ ವರ್ಷದ ರಂಗಹಬ್ಬದ 6ನೇ ದಿನದ ಕಾರ್ಯಕ್ರಮವು ದಿನಾಂಕ 01-03-2024ರಂದು ನಡೆಯಿತು.

    ಈ ಕಾರ್ಯಕ್ರಮದಲ್ಲಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಇವರು ಮಾತನಾಡುತ್ತಾ “ಸುಮನಸಾ ಸಂಘಟನೆಯ ಶಿಸ್ತು, ಸಾಮಾಜಿಕ ಕಳಕಳಿ ಎಲ್ಲರಿಗೂ ಮಾದರಿ. ಯುವ ಜನರು ಇಂಥ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಕಡಿಮೆಯಾಗಿದೆ. ಇಂಥ ಸಂದರ್ಭದಲ್ಲಿ 60ಕ್ಕೂ ಅಧಿಕ ಯುವ ಜನರನ್ನು ಒಂದೆಡೆ ಸೇರಿಸಿಕೊಂಡು ಅವರ ಪ್ರತಿಭೆಗಳನ್ನು ಅನಾವರಣಗೊಳಿಸಲು ಅವಕಾಶ ನೀಡುತ್ತಾ, ಸಮಾಜದಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಗೌರವಿಸುತ್ತಾ ಬಂದಿರುವುದು ಮಹತ್ವದ ಕೆಲಸ. ಶಿಕ್ಷಣದ ಬಗ್ಗೆ, ರಂಗಶಿಕ್ಷಣದ ಬಗ್ಗೆ, ಸಮಾಜದ ಬಗ್ಗೆ ಚಿಂತನೆಯನ್ನು ಇಟ್ಟುಕೊಂಡು ಕೆಲಸ ಮಾಡುತ್ತಿರುವ ಸುಮನಸಾ ಸಂಘಟನೆಯು ರಾಜ್ಯ ಮತ್ತು ದೇಶದ ವಿವಿಧ ಕಡೆಗಳಿಂದ ರಂಗತಂಡಗಳನ್ನು ಕರೆಸಿ ಅಲ್ಲಿನ ಸಾಂಸ್ಕೃತಿಕ ಜಗತ್ತನ್ನು ಇಲ್ಲಿನ ಜನರಿಗೆ ಪರಿಚಯಿಸುತ್ತಾ ಬಂದಿದೆ. ಪುಟ್ಟ ಮಕ್ಕಳಲ್ಲಿ ರಂಗಶಿಸ್ತು ಮೂಡಿಸುವ ಕೆಲಸ ಇಲ್ಲಿ ನಡೆಯುತ್ತಿದೆ. ಎಲ್ಲ ರಂಗ ಸಂಘಟನೆಗಳಿಗೆ ಇದು ಮಾದರಿ” ಎಂದು ಶ್ಲಾಘಿಸಿದರು.

    ಕಲಾವಿದ ಮಧುಕರ ಸನೀಲ್‌ ಉದ್ಯಾವರ ಅವರಿಗೆ ರಂಗಸಾಧಕ ಸನ್ಮಾನ ನೀಡಿ ಗೌರವಿಸಲಾಯಿತು. ಮಲ್ಪೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಗೋಪಾಲ ಸಿ. ಬಂಗೇರ, ಉಡುಪಿ ನಗರಸಭೆ ವಿಪಕ್ಷ ನಾಯಕ ರಮೇಶ್ ಕಾಂಚನ್, ಮುದ್ರಣ ಮಾಲೀಕರ ಸಂಘದ ಕಾಪು ವಲಯ ಅಧ್ಯಕ್ಷ ಸುಧೀರ್ ಡಿ. ಬಂಗೇರ, ಕೀಳಂಜೆ ಬಿ.ವಿ. ಹೆಗ್ಡೆ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸಖಾರಾಮ್‌ ಶೆಟ್ಟಿ, ಕೊಡವೂರು ಉದ್ಯಮಿ ರಾಮಚಂದ್ರ ಕರ್ಕೇರ, ಕರಾವಳಿ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಉಮೇಶ್‌ ಶೆಟ್ಟಿ, ಮಲ್ಪೆ ಉದ್ಯಮಿ ಪ್ರಕಾಶ್ ಬಂಗೇರ, ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ., ದಿವಾಕರ್ ಕಟೀಲ್‌, ಅಶೋಕ್ ಅಮ್ಮುಂಜೆ ಉಪಸ್ಥಿತರಿದ್ದರು. ಯೋಗೀಶ್‌ ಕೊಳಲಗಿರಿ ಸ್ವಾಗತಿಸಿ,ಶ್ರೀವತ್ಸ ರಾವ್‌ ವಂದಿಸಿ, ಅಕ್ಷತ್‌ ಅಮೀನ್ ಕಾರ್ಯಕ್ರಮ ನಿರೂಪಿಸಿದರು. ‘ಸಮುದಾಯ ಬೆಂಗಳೂರು’ ಕಲಾವಿದರಿಂದ ‘ಕರಿಯ ದೇವರ ಹುಡುಕಿ’ ನಾಟಕ ಪ್ರದರ್ಶನಗೊಂಡಿತು.

    Share. Facebook Twitter Pinterest LinkedIn Tumblr WhatsApp Email
    Previous Articleಶಿವಮೊಗ್ಗದಲ್ಲಿ ‘ಅನುರಕ್ತೆ’ ಏಕವ್ಯಕ್ತಿ ರಂಗ ಪ್ರಯೋಗ | ಮಾರ್ಚ್ 8
    Next Article 2023-24ನೇ ಸಾಲಿನ ‘ಗಡಿನಾಡ ಚೇತನ ರಾಜ್ಯ ಪ್ರಶಸ್ತಿ’ ಪ್ರಕಟ
    roovari

    Add Comment Cancel Reply


    Related Posts

    ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್‌ನ ಪ್ರಥಮ ವಾರ್ಷಿಕೋತ್ಸವ ಸಮಾರಂಭ

    February 26, 2026

    ಸುಮನಸಾ ಕೊಡವೂರು ನಾಟಕೋತ್ಸವ ರಂಗಹಬ್ಬ-14ರ ಎರಡನೇ ದಿನದ ಕಾರ್ಯಕ್ರಮ

    February 26, 2026

    ಉಡುಪಿಯಲ್ಲಿ ಉದ್ಘಾಟನೆಗೊಂಡ ಸುಮನಸಾ ಕೊಡವೂರು ನಾಟಕೋತ್ಸವ ‘ರಂಗಹಬ್ಬ-14’

    February 26, 2026

    ನಂದಿನಿ ನದಿಯ ಕುದ್ರುವಿನಲ್ಲಿ ಮೂಲ್ಕಿ ತಾಲೂಕು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನ | ಮಾರ್ಚ್ 01

    February 25, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.