ಬೆಂಗಳೂರು : ಆಟಮಾಟ ಧಾರವಾಡ ಅಭಿನಯಿಸುವ ಎರಡು ನಾಟಕಗಳ ಪ್ರದರ್ಶನವನ್ನು ದಿನಾಂಕ 05 ಏಪ್ರಿಲ್ 2025ರಂದು ಬೆಂಗಳೂರಿನ ಜೆ.ಪಿ. ನಗರ ರಂಗ ಶಂಕರದಲ್ಲಿ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 3-30 ಗಂಟೆಗೆ ವಿಶ್ವರಾಜ ರಾಜಗುರು ಅಭಿನಯಿಸುವ ಪಂ. ಬಸವರಾಜ ರಾಜಗುರು ಬದುಕಿನ ವೃತ್ತಾಂತದ ಸಂಗೀತ ನಾಟಕ ‘ನಾ ರಾಜಗುರು’ ಮತ್ತು ಸಂಜೆ 7-30 ಗಂಟೆಗೆ ಮಹಾದೇವ ಹಡಪದ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಗುಡಿಯ ನೋಡಿರಣ್ಣ’ ನಾಟಕಗಳು ಪ್ರದರ್ಶನಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ 9663523904 ಸಂಖ್ಯೆಯನ್ನು ಸಂಪರ್ಕಿಸಿರಿ.