ಮಂಗಳೂರು : ಅರೆಹೊಳೆ ಪ್ರತಿಷ್ಠಾನ ಹಾಗೂ ನಂದಗೋಕುಲ, ಇವರು ಕಲಾಭಿ (ರಿ.), ಅಸ್ತಿತ್ವ (ರಿ.), ರೂವಾರಿ.com ಹಾಗೂ ಆಯನ ನಾಟಕದ ಮನೆ ಇವರ ಸಹಯೋಗದೊಂದಿಗೆ ಆಯೋಜಿಸುತ್ತಿರುವ 10ನೇ ವರ್ಷದ ‘ಅರೆಹೊಳೆ ನಾಟಕೋತ್ಸವ’ವು ದಿನಾಂಕ 27 ಮಾರ್ಚ್ 2025 ರಿಂದ 31 ಮಾರ್ಚ್ 2025ರವರೆಗೆ ನಡೆಯಲಿದ್ದು, ಈ ಸಂದರ್ಭ ಸಾರ್ವಜನಿಕರಿಗೆ ‘ನಾಟಕ ವಿಮರ್ಶಾ ಸ್ಪರ್ಧೆ’ಯನ್ನು ಆಯೋಜಿಸಲಾಗಿದೆ.
ವಿಜೇತರಿಗೆ ಪ್ರಥಮ ಬಹುಮಾನ ರೂಪಾಯಿ 2500, ದ್ವಿತೀಯ ಬಹುಮಾನ ರೂಪಾಯಿ 1500, ತೃತೀಯ ಬಹುಮಾನ ರೂಪಾಯಿ 1000, ಹಾಗೂ ಎರಡು ಸಮಾಧಾನಕರ ಬಹುಮಾನವಾಗಿ ರೂಪಾಯಿ 500ನ್ನು ನೀಡಲಾಗುವುದು.
ನಿಯಮಗಳು :
ಸ್ಪರ್ಧೆಗೆ ವಯೋಮಿತಿ ಇಲ್ಲ, ವಿಮರ್ಶೆಯನ್ನು ಕನ್ನಡದಲ್ಲಿಯೇ ಬರೆಯಬೇಕು ಮತ್ತು 1200 ಪದಗಳ ಮಿತಿಯಲ್ಲಿರಬೇಕು, ಐದೂ ನಾಟಕಗಳನ್ನು ನೋಡಿ ವಿಮರ್ಶೆ ಬರೆಯಬೇಕು, ಮೊದಲ ದಿನ ಹೆಸರು ನೋಂದಾಯಿಸಿರಬೇಕು, ವಿಮರ್ಶೆಗಳನ್ನು 3 ಏಪ್ರಿಲ್ 2025ರ ಒಳಗಾಗಿ ಮೇಲ್ ಮೂಲಕ ಅಥವಾ what’s app ಮೂಲಕ ಕಳುಹಿಸಬೇಕು. ಬಹುಮಾನಿತ ವಿಮರ್ಶೆಗಳನ್ನು ರೂವಾರಿ.com ನಲ್ಲಿ ಪ್ರಕಟಿಸಲಾಗುವುದು. ಬಹುಮಾನಗಳ ವಿತರಣೆಯ ದಿನಾಂಕವನ್ನು ಮುಂದೆ ಪ್ರಕಟಿಸಲಾಗುವುದು. ಐದೂ ದಿನಗಳ ನಾಟಕಗಳಲ್ಲಿ ಪ್ರತಿ ದಿನ ತಮ್ಮ ಉಪಸ್ಥಿತಿ ಖಚಿತಪಡಿಸಬೇಕು.
Email: [email protected] , what’s app – 9886507605
ನಾಟಕವು ಪ್ರತಿದಿನ ಸಂಜೆ 6.45ಕ್ಕೆ ಪ್ರಾರಂಭವಾಗಲಿದ್ದು, ಪ್ರವೇಶವು ಉಚಿತವಾಗಿರಲಿದೆ.