Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ರಂಗ ತರಬೇತಿ ಸರಣಿ ಶಿಬಿರ – ಪೆಬ್ರವರಿ18 ಮತ್ತು 19 (ಪ್ರತಿ ತಿಂಗಳೂ 2 ದಿನ)
    Drama

    ರಂಗ ತರಬೇತಿ ಸರಣಿ ಶಿಬಿರ – ಪೆಬ್ರವರಿ18 ಮತ್ತು 19 (ಪ್ರತಿ ತಿಂಗಳೂ 2 ದಿನ)

    February 8, 2023Updated:August 19, 2023No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪ್ರತಿ ತಿಂಗಳೂ 2 ದಿನಗಳ ರಂಗ ತರಬೇತಿ ಸರಣಿ ಶಿಬಿರ – ಪೆಬ್ರವರಿ18 ಮತ್ತು 19ರಂದು ರಾಜ್ಯದ ಹೆಸರಾಂತ ನಟ,ನೀನಾಸಂ ಪದವೀಧರ ಶ್ರೀ ವಿನೀತ್ ಕುಮಾರ ನಿರ್ದೇಶನದಲ್ಲಿ……

    08 ಫೆಬ್ರವರಿ 2023: “ರಂಗಭೂಮಿ ಕ್ಷೇತ್ರಕ್ಕೆ ಇನ್ನಷ್ಟು ಹೊಸಬರು ಬರುವಂತಾಗಬೇಕು. ಹಾಗೆಯೇ ಕಲೆಯಲ್ಲಿ ಆಸಕ್ತಿ ಇದ್ದು, ಉತ್ತಮ ಕಲಾವಿದರಾಗಲು ಇಚ್ಚಿಸುವವರು, ಮುಂದೆ ಕಲೆಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುವಂತಾಗಲು ಬೆಳಕಿನ ಹಾಗೂ ಸಾಧ್ಯತೆಯ ರಹದಾರಿ ಈ ಶಿಬಿರಗಳು ಆಗಬೇಕು. ಒಟ್ಟು ರಂಗಭೂಮಿ ಬೆಳೆಯಬೇಕು ಎಂಬ ಮಹತ್ವದ ಸಂಕಲ್ಪದೊಂದಿಗೆ ರಂಗಭೂಮಿ (ರಿ.) ಉಡುಪಿ 2021ರ ಅಕ್ಟೋಬರ್ ನಿಂದ ಪ್ರತೀ ತಿಂಗಳು ಎರಡು ದಿನಗಳ ರಂಗತರಬೇತಿ ಕಾರ್ಯಾಗಾರವನ್ನು ನಡೆಸುತ್ತಿರುವುದು ತಮಗೆ ಈಗಾಗಲೇ ತಿಳಿದ ವಿಚಾರವೇ.”

    ಈ ತರಬೇತಿ ಸರಣಿಯ ಕಾರ್ಯಾಗಾರವು ‌ ಶ್ರೀ ಮಂಡ್ಯ ರಮೇಶ್ ಹಾಗೂ ಶ್ರೀ ಮಂಜುನಾಥ ಎಲ್. ಬಡಿಗೇರ್ ಮತ್ತು ಶ್ರೀ ಹುಲುಗಪ್ಪ ಕಟ್ಟಿಮನಿ, ಶ್ರೀ ಉಮೇಶ್ ಸಾಲಿಯಾನ್, ಶ್ರೀ ಪ್ರಶಾಂತ್ ಉದ್ಯಾವರ , ಶ್ರೀ ಭುವನ್ ಮಣಿಪಾಲ, ಶ್ರೀ ಚೇತನ್ ನೀನಾಸಂ ತುಮಕೂರು, ಶ್ರೀ ಜೊಸೆಪ್ ಜಾನ್ , ಶ್ರೀ ಮೇಘ ಸಮೀರ’ ಶ್ರೀಗಣೇಶ ಮಂದಾರ್ತಿ ಶ್ರೀಮತಿ ದಾಕ್ಷಾಯಿನಿ ಭಟ್ ಶ್ರೀ ಯಶ್ ಶೆಟ್ಟಿ ಶ್ರೀ ಚಂದನ ಆಚಾರ ಇವರುಗಳಿಂದ ಅತ್ಯಂತ ಯಶಸ್ವಿಯಾಗಿ ನಡೆದು, ಒಟ್ಟು ಈ ಸಂಕಲ್ಪವನ್ನು ಸಾರ್ಥಕವಾಗಿಸಿದೆ.

    2022ರ ಜನವರಿ ತಿಂಗಳಲ್ಲಿ ವಾರಾಂತ್ಯದ ಲಾಕ್ ಡೌನ್ ಇದ್ದಾಗ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ರಂಗಕಲಿಕೆಯನ್ನು ನಿಲ್ಲಿಸದೆ ಶ್ರೀ ಮಂಜುನಾಥ ಬಡಿಗೇರ ಇವರ ನಿರ್ದೇಶನದಲ್ಲಿ ಹೊಸ ನಾಟಕ ” ವಿಶಾಂಕೇ” ಯನ್ನು ಸಿದ್ದಪಡಿಸಿತ್ತು.

    ಇದೀಗ ಈ ರಂಗ ತರಬೇತಿ ಸರಣಿ ಕಾರ್ಯಾಗಾರದ 11 ನೇ ಶಿಬಿರವು ರಾಜ್ಯದ ಮತ್ತೋರ್ವ ಹೆಸರಾಂತ ಚಲನಚಿತ್ರ ನಟ ರಂಗಕರ್ಮಿ, ಯುವರಂಗ ನಿದೇ೯ಶಕ, ರಾಜ್ಯದ ಅತ್ಯುತ್ತಮ ನಿರ್ದೇಶಕರುಗಳಲ್ಲಿ ಓರ್ವ ಎಂದು ಗುರುತಿಸಿ ಕೊಂಡಿರುವ, ಶ್ರೀ ವಿನೀತ್ ಕುಮಾರ್ ನೀನಾಸಂ ಇವರು ನಡೆಸಿಕೊಡಲಿದ್ದಾರೆ.

    ನೀವು ಯಾರ ಮನದಿಂದಲೂ ಮಾಸಿ ಹೋಗದ ಕಲಾವಿದರಾಗ ಬಯಸಿದ್ದು, ಅಂತಹ ಯಶಸ್ಸಿಗೆ ನಿಮ್ಮೊಳಗೆ ಒಂದು ರಹದಾರಿಯನ್ನು ಕಂಡು ಕೊಳ್ಳಲು ಬಯಸಿದ್ದರೆ, ತಡಮಾಡದೆ ಸರಣಿ ಶಿಬಿರಕ್ಕೆ ತಮ್ಮ ಹೆಸರನ್ನು ನೋಂದಾಯಿಸಿ. ಹಾಗೂ ಬೇರೆ ಆಸಕ್ತರಿಗೂ ತಿಳಿಸಿ.

    ಸೀಮಿತ ಸಂಖ್ಯೆಯ ಶಿಬಿರಾರ್ಥಿಗಳಿಗೆ ಅವಕಾಶದ ಕಾರಣ – ನೀವಿನ್ನೂ ನೋಂದಾಯಿಸಿರದಿದ್ದರೆ, ಆದಷ್ಟು ಬೇಗ ನೋಂದಾಯಿಸಿ ಕೊಳ್ಳಿ.

    ಶಿಬಿರದಲ್ಲಿ ಭಾಗವಹಿಸಲು ಇಚ್ಚಿಸುವವರರು ಅಧ್ಯಾಪಕರಾದ ಶ್ರೀ ವಿವೇಕಾನಂದ – 9449367595 ಇವರಿಗೆ ಊಟೋಪಚಾರದ ಬಾಬ್ತು ₹300/- Google pay ಮಾಡಿ ಹಾಗೂ ಅವರಿಗೆ ನಿಮ್ಮ ಹೆಸರು, ವಿಳಾಸ ಮತ್ತು Google pay ಮಾಡಿರುವುದರ ಮಾಹಿತಿಯನ್ನು (screen shot) ಆದಷ್ಟು ಬೇಗ ಕಳುಹಿಸಿ ನೋಂದಾಯಿಸಿ ಕೊಳ್ಳಿ.

    ಶಿಬಿರಾರ್ಥಿಗಳಿಗೆ ಕೆಲವು ಸೂಚನೆಗಳು.

    ಶಿಬಿರದ ಒಟ್ಟು ಯಶಸ್ಸು, ಶಿಬಿರಾರ್ಥಿಗಳ ಸಕ್ರಿಯ ತೊಡಗಿಸಿ ಕೊಳ್ಳುವಿಕೆಯಲ್ಲಿ ಅಡಗಿದೆ. ರಂಗ ಶಿಸ್ತುವೇ ರಂಗ ಶಿಕ್ಷಣದ ಮೊದಲ ಪಾಠ.
    1. ಶಿಬಿರವು ಈಗಾಗಲೇ ಸಂಸ್ಥೆಯು ಪ್ರಕಟಿಸಿರುವಂತೆ ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ 2023ರ ಪೆಬ್ರವರಿ18ಮತ್ತು19ಶನಿವಾರ-ಭಾನುವಾರ ಬೆಳಿಗ್ಗೆ 9ರಿಂದ ಸಂಜೆ 7ರ ತನಕ ನಡೆಯಲಿದೆ. (ಶಿಬಿರದ ನಿರ್ದೇಶಕರು ಬಯಸಿದಲ್ಲಿ ಸಮಯದಲ್ಲಿ ಬದಲಾವಣೆ ಆಗಬಹುದು)
    2. ಫೆಬ್ರವರಿ 18 ರ೦ದು ಶಿಬಿರದ ಪ್ರಥಮ ದಿನ ಬೆಳಿಗ್ಗೆ 8.30ಕ್ಕೆ ‌ಹಾಜರಿದ್ದು, ನಿಮ್ಮ ಹೆಸರನ್ನು ಮರು ನೋಂದಾಯಿಸಿ.
    3. ಪ್ರಥಮ ದಿನ ಬರುವಾಗ ಹೊಸದಾಗಿ ಸೇರ್ಪಡೆಯಾಗುವವರು ಎರಡು ಪೋಟೋ ( passport size) ಹಾಗೂ ಆಧಾರ್ ಕಾರ್ಡ್ ಪ್ರತಿ ತನ್ನಿ. ಒಂದು ನೋಟ್ ಬುಕ್ ಹಾಗು ಪೆನ್ ನಿಮ್ಮ ಜೊತೆ ಇರಲಿ.
    4. ದೈ‌ಹಿಕ ಚಲನೆ/ ವ್ಯಾಯಾಮಕ್ಕೆ ಸಹಕಾರಿ ತೊಡುಗೆ ಇರಲಿ. ಬೇರೆಯವರಿಗೆ ಮುಜುಗರವಾಗದಂತೆಯೂ ಇರಲಿ. ಮುಖ ಒರೆಸಿಕೊಳ್ಳಲು ಚಿಕ್ಕ ಟವೆಲ್ ಇದ್ದರೆ ಸಹಕಾರಿ.
    5. ಕಾರ್ಯಾಗಾರದ ಎರಡೂ ದಿನಗಳಲ್ಲಿ ಸಂಪೂರ್ಣ ಭಾಗವಹಿಸುವಿಕೆ ಕಡ್ಡಾಯ. ಅಂತವರಿಗೆ ಶಿಬಿರದ ಕೊನೆಯಲ್ಲಿ ಭಾಗವಹಿಸುವಿಕೆಗೆ ಪ್ರಮಾಣ ಪತ್ರ ನೀಡಲಾಗುವುದು.
    6. ಶಿಬಿರ ಉಚಿತವಾಗಿರುತ್ತದೆ. ಕೇವಲ ಊಟೋಪಚಾರದ ಬಾಬ್ತು ಪ್ರತ್ಯೇಕ.
    7. ಬೆಳಿಗ್ಗಿನ ಉಪಹಾರ, ಮಧ್ಯಾಹ್ನ ಊಟ ಸಂಜೆ ಲಘು ಉಪಹಾರ, ನೀಡಲಾಗುವುದು.
    8. ರಾತ್ರಿ ವಸತಿ ವ್ಯವಸ್ಥೆ ಇರುವುದಿಲ್ಲ. ದೂರದ ಶಿಬಿರಾರ್ಥಿಗಳಿಗೆ ವಸತಿ ಬೇಕಾದರೆ, ಮೊದಲೇ ತಿಳಿಸಿದಲ್ಲಿ ವ್ಯವಸ್ಥೆ ಮಾಡಲಾಗುವುದು. ಆದರೆ ಅದರ ವೆಚ್ಚವನ್ನು ಅವರೇ ಬರಿಸಬೇಕು.
    9. ಶಿಬಿರಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಬೇಕಾದಲ್ಲಿ.

    ಪ್ರದೀಪ್ ಚಂದ್ರ ಕುತ್ಪಾಡಿ – 9448952847,
    ಶ್ರೀಪಾದ ಹೆಗಡೆ – 9845111449,
    ವಿವೇಕಾನಂದ – 9449367595
    ಪೂರ್ಣಿಮಾ ಸುರೇಶ್ – 9731812468
    ಆನಂದ ಮೇಲಂಟ – 9886181209
    ಇವರನ್ನು ಸಂಪರ್ಕಿಸಬಹುದು.

    ಕಲಾತಾಯಿಯ ಮಡಿಲಲ್ಲಿ ಒಂದಷ್ಟು ಕುಸುಮಗಳು ಅರಳಲು ಪ್ರಯತ್ನಿಸುವ ಈ ಸರಣಿ ಕಾರ್ಯಕ್ರಮವನ್ನು – ಎಲ್ಲರೂ ಒಂದಾಗಿ ಯಶಸ್ವಿಯಾಗಿಸೋಣ.

    • ರಂಗಭೂಮಿ (ರಿ.) ಉಡುಪಿ

    Share. Facebook Twitter Pinterest LinkedIn Tumblr WhatsApp Email
    Previous Articleಉಜಿರೆಯಲ್ಲಿ ದಕ್ಷಿಣ ಕನ್ನಡ ಕರ್ನಾಟಕ ಸಾಹಿತ್ಯ ಪರಿಷತ್ತಿನ 25ನೇ ಕನ್ನಡ ಸಾಹಿತ್ಯ ಸಮ್ಮೇಳನ
    Next Article Sandesha Awards 2023
    roovari

    Add Comment Cancel Reply


    Related Posts

    ‘ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ’ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭ | ಮೇ 11

    May 8, 2025

    ನಾಟಕ ವಿಮರ್ಶೆ | ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ – ‘ಶರ್ಮಿಷ್ಠೆ’

    May 7, 2025

    ಸಮಾರೋಪಗೊಂಡ ರಜಾರಂಗು ‘ಚಂದಕ್ಕಿ ಬಾರೆ ಕಥೆ ಹೇಳೆ’ ಬೇಸಿಗೆ ಶಿಬಿರ

    May 5, 2025

    ಮೈಸೂರು ಮತ್ತು ಬೆಂಗಳೂರಿನಲ್ಲಿ ‘ಎದೆಗೆ ಬಿದ್ದ ಅಕ್ಷರ’ ನಾಟಕ ಪ್ರದರ್ಶನ | ಮೇ 04

    May 3, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.