ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಅಖಿಲ ಭಾರತ ಮುಂಡಾಲ ಯುವ ವೇದಿಕೆ (ರಿ.) ಮಂಗಳೂರು ಇವರ ವತಿಯಿಂದ ಆಟಿದ ಗೇನ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ದಿನಾಂಕ 03 ಆಗಸ್ಟ್ 2025ರಂದು ಬೆಳಿಗ್ಗೆ 09-30 ಗಂಟೆಗೆ ಮಂಗಳೂರಿನ ಉರ್ವಸ್ಟೋರ್ ತುಳು ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ‘ಮಳೆಗಾಲದಲ್ಲಿ ತುಳುನಾಡು’ ಎಂಬ ವಿಷಯದ ಬಗ್ಗೆ ಮೂರು ವಿಭಾಗದಲ್ಲಿ ಈ ಸ್ಪರ್ಧೆ ನಡೆಯಲಿದ್ದು, ನೋಂದಾವಣೆ ಯನ್ನು ದಿನಾಂಕ 03 ಆಗಸ್ಟ್ 2025ರಂದು ಬೆಳಿಗ್ಗೆ 9-00 ಗಂಟೆಯವರೆಗೆ ಮಾತ್ರ ಮಾಡಲಾಗುವುದು.
ಸ್ಪರ್ಧೆಯ ನಿಯಮಗಳು :
• ಸ್ಪರ್ಧೆಗೆ ಭಾಗವಹಿಸುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಶಾಲಾ ಗುರುತಿನ ಚೀಟಿಯನ್ನು ಖಡ್ಡಾಯವಾಗಿ ತರತಕ್ಕದ್ದು.
• ಸ್ಪರ್ಧೆಯು ಆಗೋಸ್ಟ್ 03ರಂದು ಭಾನುವಾರ ಬೆಳಿಗ್ಗೆ 9-30 ಗಂಟೆಗೆ ಸರಿಯಾಗಿ ಆರಂಭಗೊಳ್ಳಲಿರುವುದು. ಸ್ಪರ್ಧಾಳುಗಳು 30 ನಿಮಿಷಕ್ಕಿಂತ ಮುಂಚಿತವಾಗಿಯೇ ಸ್ಪರ್ಧಾಸ್ಥಳದಲ್ಲಿ ಇರತಕ್ಕದ್ದು.
• A3 ಅಳತೆಯ ಡ್ರಾಯಿಂಗ್ ಶೀಟನ್ನು ಸಂಘಟಕರೇ ಒದಗಿಸುತ್ತಾರೆ. ಸ್ಪರ್ಧೆಗೆ ಬೇಕಾದ ಇತರ ಪರಿಕರಗಳನ್ನು ಸ್ಪರ್ಧಾಳುಗಳೇ ತರತಕ್ಕದ್ದು.
• ಸ್ಪರ್ಧೆಗೆ 2-00 ಗಂಟೆ ಕಾಲಾವಕಾಶವನ್ನು ನೀಡಲಾಗುವುದು. (9.30ರಿಂದ 11.30ರವರೆಗೆ ಮಾತ್ರ)
• ವಿಜೇತರಿಗೆ ಆಕರ್ಷಕ ಬಹುಮಾನವಿರುವುದು. (ಪ್ರಥಮ, ದ್ವಿತೀಯ, ತೃತೀಯ ಹಾಗೂ 2 ಸಮಾಧಾನಕರ ಬಹುಮಾನ ನೀಡಲಾಗುವುದು)
• ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣಪತ್ರ ನೀಡಲಾಗುವುದು.
• ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನದ ವಿತರಣೆಯನ್ನು ಸ್ಪರ್ಧೆಯ ನಂತರ ವಿಶೇಷ ಉಪನ್ಯಾಸ ಮತ್ತು ಸಭಾ ಕಾರ್ಯಕ್ರಮದ ಕೊನೆಯಲ್ಲಿ ನೀಡಲಾಗುವುದು.
• ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.