ಮಂಗಳೂರು : ಪೇಜಾವರ ವಿಶ್ವೇಶತೀರ್ಥ ಶ್ರೀಪಾದರ ಪುಣ್ಯತಿಥಿ ದಿನಾಂಕ 29 ಡಿಸೆಂಬರ್ 2025ರಂದು ನಡೆಯಲಿದ್ದು, ಆ ಪ್ರಯುಕ್ತ ಕಲ್ಕೂರ ಪ್ರತಿಷ್ಠಾನವು ವಿಶ್ವೇಶತೀರ್ಥ ಶ್ರೀಪಾದರ ಚಿತ್ರ ರಚನಾ ಸ್ಪರ್ಧೆ ಹಮ್ಮಿಕೊಂಡಿದೆ. ಅಂಚೆ ಕಾರ್ಡ್‌ನಲ್ಲಿ ಪೆನ್ಸಿಲ್ ಮೂಲಕ ಕಪ್ಪು ಬಿಳುಪು ಚಿತ್ರ ರಚನೆ, ಡ್ರಾಯಿಂಗ್ ಶೀಟ್‌ನಲ್ಲಿ ವರ್ಣಚಿತ್ರ ರಚನೆ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಎಸ್.ಎಸ್.ಎಲ್.ಸಿ.ವರೆಗಿನ ವಿದ್ಯಾರ್ಥಿಗಳು ಮತ್ತು ಮುಕ್ತ ವಿಭಾಗ ಎಂಬ ವಿಭಾಗ ಮಾಡಲಾಗಿದೆ.
ಆಸಕ್ತರು ತಾವು ರಚಿಸಿದ ಚಿತ್ರಗಳನ್ನು ಸ್ವವಿಳಾಸ, ಮೊಬೈಲ್ ಸಂಖ್ಯೆಯೊಂದಿಗೆ, ಜಾನ್ ಚಂದ್ರನ್ (ಸಂಚಾಲಕರು) ಪೇಜಾವರ ವಿಶ್ವೇಶ-ತೀರ್ಥರ ಚಿತ್ರ ರಚನಾ ಸ್ಪರ್ಧಾ ವಿಭಾಗ, ಕಲ್ಕೂರ ಪ್ರತಿಷ್ಠಾನ, ಶ್ರೀ ಕೃಷ್ಣ ಸಂಕೀರ್ಣ. ಮಹಾತ್ಮ ಗಾಂಧಿ ರಸ್ತೆ, ಕೊಡಿಯಾಲ್ ಬೈಲ್, ಮಂಗಳೂರು. ಈ ವಿಳಾಸಕ್ಕೆ ದಿನಾಂಕ 25 ಡಿಸೆಂಬರ್ 2025ರೊಳಗೆ ತಲುಪಿಸಬಹುದು ಎಂದು ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.
