ಮಂಗಳೂರು: ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಮಂಗಳೂರಿನ ಉರ್ವಾಸ್ಟೋರ್‌ನಲ್ಲಿರುವ ತುಳು ಭವನದಲ್ಲಿ ದ.ಕ.ಜಿಲ್ಲಾ ಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳ ಚಿತ್ರಕಲಾ ಸ್ಪರ್ಧೆ ದಿನಾಂಕ 13 ನವೆಂಬರ್ 2024ರಂದು ನಡೆಯಲಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕೊಂಕಣಿ ಅಕಾಡೆಮಿ, ಬ್ಯಾರಿ ಅಕಾಡೆಮಿ, ಅರೆ ಭಾಷೆ ಅಕಾಡೆಮಿ, ಕೊಡವ ಅಕಾಡೆಮಿ, ಯಕ್ಷಗಾನ ಅಕಾಡೆಮಿ ಆಶ್ರಯದಲ್ಲಿ ಮಂಗಳೂರಿನಲ್ಲಿ ಬಹುಸಂಸ್ಕೃತಿ ಉತ್ಸವ ನಡೆಯಲಿದೆ. ಈ ಪ್ರಯುಕ್ತ ಸ್ಪರ್ಧೆ ಆಯೋಜಿಸಲಾಗಿದೆ. ‘ಕರಾವಳಿ ಕರ್ನಾಟಕದ ಬಹುಸಂಸ್ಕೃತಿಯ ಪರಂಪರೆ’ ಎಂಬ ವಿಷಯದ ಬಗ್ಗೆ ಚಿತ್ರ ರಚನಾ ಸ್ಪರ್ಧೆ ಬೆಳಿಗ್ಗೆ ಘಂಟೆ 11.00 ರಿಂದ ನಡೆಯಲಿದೆ. ಯಾವುದೇ ರೀತಿಯ ಮಾಧ್ಯಮದಲ್ಲಿಯೂ ಚಿತ್ರ ರಚನೆ ಮಾಡಬಹುದು. ಸ್ಪರ್ಧೆ ಆರಂಭಗೊಳ್ಳುವ ಮುನ್ನ ಸ್ಥಳದಲ್ಲಿ ಹೆಸರು ನೋಂದಣಿ ನಡೆಯಲಿದ್ದು, ಶಾಲಾ ಮುಖ್ಯಸ್ಥರ ದೃಢೀಕರಣದೊಂದಿಗೆ ವಿದ್ಯಾರ್ಥಿಗಳು ಭಾಗವಹಿಸಬಹುದು.
ಚಿತ್ರ ಬರೆಯುವ ಪರಿಕರಗಳನ್ನು ವಿದ್ಯಾರ್ಥಿಗಳೇ ತರಬೇಕು, ಡ್ರಾಯಿಂಗ್ ಶೀಟ್ ಸ್ಥಳದಲ್ಲಿ ನೀಡಲಾಗುವುದು. ವಿಜೇತರಿಗೆ ಮಂಗಳೂರಿನಲ್ಲಿ ನಡೆಯುವ ಬಹುಸಂಸ್ಕೃತಿ ಉತ್ಸವದ ದಿನ ಬಹುಮಾನ ಪ್ರಧಾನ ಮಾಡಲಾಗುವುದು.
Subscribe to Updates
Get the latest creative news from FooBar about art, design and business.
ಮಂಗಳೂರಿನ ತುಳು ಭವನದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ | ನವೆಂಬರ್ 13
No Comments1 Min Read
Previous Articleಜೈನ ಸಾಹಿತಿ ವಿಜಯ ಜಿ. ಜೈನ್ ನಿಧನ
Next Article ಲೋಕಾರ್ಪಣೆಗೊಂಡ ‘ಕನಕ-ಪುರಂದರ’ ಕೃತಿ
Related Posts
Comments are closed.