ಮೂಡಬಿದ್ರೆ : ಮೂಡಬಿದ್ರೆಯ ಆಳ್ವಾಸ್ ವಿದ್ಯಾಗಿರಿಯಲ್ಲಿ ದಿನಾಂಕ 16 ನವೆಂಬರ್ 2024 ರಾತ್ರಿ 8-00 ಗಂಟೆಗೆ ಮುಗೇರ ಸಮುದಾಯದ ಹಿರಿಮೆಯನ್ನು ಸಾರುವ ಪುಣ್ಯ ಐತಿಹಾಸಿಕ ತುಳು ಪ್ರಸಂಗ ‘ಎಡ್ಮೂರ ಮುಗೇರ ಸತ್ಯೊಲು’ ಯಕ್ಷಗಾನ ಕ್ಷೇತ್ರದ ಹೊಸ ದಾಖಲೆಯ ಪ್ರದರ್ಶನದ ಕನಸಿನೊಂದಿಗೆ ಭರ್ಜರಿ ಸಿದ್ದತೆಯಲ್ಲಿ ಅದ್ದೂರಿ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ತೆಂಕುತಿಟ್ಟಿನ 50ಕ್ಕೂ ಮಿಕ್ಕಿ ಸುಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ, 7 ಮಂದಿ ಸುಪ್ರಸಿದ್ದ ಭಾಗವತರುಗಳ ದ್ವಂದ್ವ ಭಾಗವತಿಕೆಯಲ್ಲಿ 5 ಪ್ರಸಿದ್ಧ ಹಾಸ್ಯಗಾರರ ವೈಭವದಲ್ಲಿ ನಡೆಯಲಿದೆ.
ನೀವೆಲ್ಲರೂ ಕಂಡು ಸ್ಲಾಗಿಸಿದಂತಹ ‘ಕುಲದೖವೋ ಬ್ರಹ್ಮ’ ಮತ್ತು ‘ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ’ ಎಂಬ ಪ್ರಸಂಗದ ದಾಖಲೆಯ ಪ್ರದರ್ಶನದ ಬಳಿಕ ಮತ್ತದೇ ಹುಮ್ಮಸ್ಸಿನೊಂದಿಗೆ ಯಕ್ಷರಂಗ ಕಂಡ ಚತುರ ಸಂಘಟಕನೆಂದೇ ಕರೆಸಿಕೊಂಡ ಪ್ರಸಂಗಕರ್ತ ಶ್ರೀ ನಿತಿನ್ ಕುಮಾರ್ ತೆಂಕಕಾರಂದೂರು ರಚಿಸಿ, ನಿರ್ದೇಶಿಸಿ, ಸಂಯೋಜಿಸಲಿದ್ದು, ಸಂಪೂರ್ಣ ಮನೋರಂಜನೆಯ ಭರವಸೆಯೊಂದಿಗೆ ನಡೆಯುವ ಈ ಅದ್ದೂರಿ ಯಕ್ಷಗಾನ ನೂತನ ಪ್ರಸಂಗ ಬಿಡುಗಡೆ ಹಾಗೂ ಪ್ರಥಮ ಪ್ರದರ್ಶನ ಯಕ್ಷಗಾನ ಬಯಲಾಟ ಸಮಾರಂಭಕ್ಕೆ ನೀವುಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಅತೀ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಯಶಸ್ಸಿನಲ್ಲಿ ನೀವೂ ಭಾಗಿಯಾಗಿ ಸಹಕರಿಸುವಿರಿ ಎಂದು ಆಶಿಸುತ್ತೇವೆ.