ತೀರ್ಥಹಳ್ಳಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ ಇವರ ನೇತೃತ್ವದಲ್ಲಿ ತೀರ್ಥಹಳ್ಳಿ ತಾಲೂಕಿನಲ್ಲಿ 2024ರ ನವೆಂಬರ್ ತಿಂಗಳಿನಲ್ಲಿ ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯನ್ನು ರಚಿಸಲಾಗಿದ್ದು, ಶ್ರೀಮತಿ ರೇಣುಕಾ ಹೆಗಡೆ – ಅಧ್ಯಕ್ಷರು ಮತ್ತು ಶ್ರೀಮತಿ ಲೀಲಾವತಿ ಎಸ್. – ಕಾರ್ಯದರ್ಶಿಗಳು ಇವರ ಮುಂದಾಳತ್ವದಲ್ಲಿ ಸುಮಾರು 50 ಸದಸ್ಯರನ್ನು ಒಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಈ ಸಂಘಟನೆಯ ಅಡಿಯಲ್ಲಿ ಹಲವಾರು ಸಾಹಿತ್ಯಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಈ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯಡಿಯಲ್ಲಿ ಈವರೆಗೆ ಎರಡು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ತೀರ್ಥಹಳ್ಳಿ ತಾಲೂಕಿನಲ್ಲಿ ಆಯೋಜಿಸಿ ಮಕ್ಕಳಲ್ಲಿ ಹುದುಗಿರುವ ಕಾವ್ಯ ರಚನೆ, ಕಥೆ ಹೇಳುವ ಸಾಮರ್ಥ್ಯ ಹಾಗೂ ಪ್ರಬಂಧ ರಚನೆ ಮತ್ತು ಮಂಡನೆಗೆ ಸಂಬಂಧಿಸಿದಂತೆ ಗೋಷ್ಠಿಗಳನ್ನು ಆಯೋಜಿಸಿ, ತಾಲೂಕು ಮಟ್ಟದ ಸಮ್ಮೇಳನಗಳನ್ನು ಅದ್ದೂರಿಯಾಗಿ ನಡೆಸಿ ಇಲ್ಲಿ ಆಯ್ಕೆಯಾದ ಮಕ್ಕಳನ್ನು ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನಕ್ಕೆ ಕಳುಹಿಸಲಾಗಿದೆ.
ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಕಳೆದ ಬಾರಿ ನಮ್ಮ ತಾಲೂಕಿನ ನಾಲ್ಕು ಮಕ್ಕಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು, ಈ ಬಾರಿ ದಿನಾಂಕ 13 ಜನವರಿ 2025ರಂದು ಶಿವಮೊಗ್ಗದ ರಾಮಕೃಷ್ಣ ಆಶ್ರಮ ಶಾಲೆಯ ಅನುಪಿನ ಕಟ್ಟೆ ಇಲ್ಲಿ ನಡೆದ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಒಟ್ಟು ಎಂಟು ಮಕ್ಕಳು ಕವನ ಗೋಷ್ಠಿ, ಕಥಾಗೋಷ್ಠಿ ಮತ್ತು ಪ್ರಬಂಧ ಗೋಷ್ಠಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ನಮ್ಮ ತಾಲೂಕಿನ ಸಾಹಿತ್ಯ ಕ್ಷೇತ್ರಕ್ಕೆ ಸಂದ ಗೌರವವಾಗಿದೆ. ಈ ಬಾರಿ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನವು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಠದಲ್ಲಿ ನಡೆಯಲಿದ್ದು, ಅದರಲ್ಲಿ ಭಾಗವಹಿಸುವ ನಮ್ಮ ತಾಲೂಕಿನ ಮಕ್ಕಳ ವಿವರ ಈ ಕೆಳಗಿನಂತಿದೆ. ಈ ಎಲ್ಲ ಮಕ್ಕಳಿಗೂ ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಪರವಾಗಿ ಶುಭ ಹಾರೈಕೆಗಳು.
ಸೃಷ್ಟಿ ಎಂ.ಎನ್. ಹೆಡ್ಡೂರು
ಅಮೂಲ್ಯ ವಾಗ್ದೇವಿ
ಜನ್ಯ ಡಿ.ಎಂ.
ವಂಶಿಕ ಪ್ರಭು ಹೊಡಲ
ಅನಿತಾ, ಕುವೆಂಪು ಮಾದರಿ ಹಿರಿಯ ಪ್ರಾಥಮಿಕ ಶಾಲೆ ತೀರ್ಥಹಳ್ಳಿ
ಆತ್ಮೀ ಎಂ. ಪೈ, ಸ.ಹಿ.ಪ್ರಾ. ಶಾಲೆ ಬೆಜ್ಜವಳ್ಳಿ
ಶ್ರೇಯ ಟಿ.ಡಿ., ಸ.ಹಿ.ಪ್ರಾ. ಶಾಲೆ ಹಾರೋಗೊಳಿಗೆ
ಕುಮಾರಿ ಸಾನಿಕ ಕೆ.ವಿ. ರಾಷ್ಟ್ರೀಯ ಪ್ರೌಢಶಾಲೆ ಕೋಣಂದೂರು