ಬೆಂಗಳೂರು : ರಂಗ ತಂಡ ಸಂಚಲನ ಮೈಸೂರು (ರಿ.) ಮೈಸೂರು ಅಭಿನಯಿಸುವ ‘ಎರಡೆರಡ್ಲಾ ಐದು’ ಕನ್ನಡ ಹಾಸ್ಯ ನಾಟಕ ಪ್ರದರ್ಶನವನ್ನು ದಿನಾಂಕ 14 ಸೆಪ್ಟೆಂಬರ್ 2025ರಂದು ಮಧ್ಯಾಹ್ನ ಗಂಟೆ 3-30 ಹಾಗೂ ಸಂಜೆ 7-00ಕ್ಕೆ ಬೆಂಗಳೂರಿನ ಜೆಪಿ ನಗರದ ವ್ಯೋಮ ಆರ್ಟ್ ಥಿಯೇಟರ್ ಅಂಡ್ ಸ್ಟುಡಿಯೋನಲ್ಲಿ ಆಯೋಜಿಸಲಾಗಿದೆ.
ಈ ನಾಟಕವನ್ನು ಏಕೆ ನೋಡಬೇಕು ?
* ಮೋಸ ಮಾಡದೆ, ಲಂಚವನ್ನು ತೆಗೆದುಕೊಳ್ಳದೇ ಪ್ರಾಮಾಣಿಕತೆಯಿಂದ ದುಡಿದರೆ ಒಂದಲ್ಲ ಒಂದು ದಿನ ಅದರ ಫಲ ಸಿಕ್ಕೆ ಸಿಗುತ್ತದೆ.
* ಕಷ್ಟಗಳು ಬಂದಾಗ ಮಾತ್ರ ಸಂಬಂಧಗಳು ಗಟ್ಟಿಯಾಗಿ ಒಬ್ಬರಿಗೊಬ್ಬರು ಸಹಕಾರಿಯಾಗಿ ನಿಲ್ಲಲು ಸಾಧ್ಯವಾಗುತ್ತದೆ.
* ಶಾಂತಿ ಅನ್ನುವುದು ಹೊರಗಡೆ ಸಿಗುವ ವಸ್ತು ಅಲ್ಲ. ಅದು ಆಂತರಿಕ ಅನ್ನುವುದು ಈ ನಾಟಕದಲ್ಲಿ ಗೊತ್ತಾಗುತ್ತದೆ.
* ಪ್ರೇಮ ಪ್ರೀತಿ ಅನ್ನುವುದು ಕೇವಲ ಆಕರ್ಷಣೆಯಲ್ಲ. ಅದು ಆತ್ಮಕ್ಕೆ ಸಂಬಂಧಪಟ್ಟದ್ದು.
ಈ ನಾಟಕವನ್ನು ಹೇಗೆ ಕಟ್ಟಿದ್ದು, ಯಾರು ಕಟ್ಟಿದ್ದು?
* ಕೇವಲ 12 ದಿನಗಳಲ್ಲಿ ಈ ನಾಟಕವನ್ನು ಕಟ್ಟಿದ ಶ್ರೇಯಸ್ಸು, ಸಂಚಲನ ತಂಡದ ರೂವಾರಿ ದೀಪಕ್ ಮೈಸೂರು ಮತ್ತು ನಿರ್ದೇಶಕರಾದ ಆಸಿಫ್ ಕ್ಷತ್ರಿಯ ಮತ್ತು ಶ್ವೇತಾ ಶ್ರೀನಿವಾಸ್ ಅವರಿಗೆ ಸಲ್ಲುತ್ತದೆ.
* ಜೊತೆಗೆ ಎಲ್ಲ ನಟ ನಟಿ ಮತ್ತು ನೇಪಥ್ಯ ಕಲಾವಿದರ ಸಹಕಾರವೇ ಈ ನಾಟಕದ ಯಶಸ್ವಿಗೆ ತಳಪಾಯವಾಗಿದೆ. ಇದೊಂದು ಮಾರ್ಮಿಕವಾದ ಮತ್ತು ಹೃದಯ ಸ್ಪರ್ಶಿ ಸಾಂಸಾರಿಕ ಹಾಸ್ಯ ನಾಟಕ.