ಜಮಖಂಡಿ: ಚಿತ್ರಕಲಾವಿದ ವಿಜಯ ಗಂಗಪ್ಪ ಸಿಂಧೂರ ಇವರು 28 ಸೆಪ್ಟೆಂಬರ್ 2024ರ ಶನಿವಾರದಂದು ತಮ್ಮ 84ನೇ ವಯಸ್ಸಿನಲ್ಲಿ ನಿಧನರಾದರು.
7 ಜೂನ್ 1940 ರಂದು ಬನಹಟ್ಟಿಯಲ್ಲಿ ಜನಿಸಿದ ವಿಜಯ ಸಿಂಧೂರ ಅವರು ಶಾಲಾ ಶಿಕ್ಷಣವನ್ನು ಜಮಖಂಡಿಯಲ್ಲಿ ಪೂರ್ಣಗೊಳಿಸಿದರು. ಕಾಲೇಜು ಶಿಕ್ಷಣವನ್ನು ಮುಂಬೈನ ಜೆ. ಡಿ. ಆರ್ಟ್ ಮತ್ತು ಜೆ. ಜೆ. ಕಲಾಶಾಲೆಯಲ್ಲಿ ಪಡೆದ ಇವರು ಭಿತ್ತಿಚಿತ್ರ ರಚನೆಯ ಬಗ್ಗೆ ಅಧ್ಯಯನ ಮಾಡಿದರು. 1965ರಲ್ಲಿ ಕರ್ನಾಟಕ ಲಲಿತ ಕಲಾ ಅಕಾಡೆಮಿ ಮತ್ತು ಮದರಾಸಿನ ಕೇಂದ್ರ ಲಲಿತಕಲಾ ಅಕಾಡೆಮಿಯ ವಿಭಾಗೀಯ ಕೇಂದ್ರದ ಸದಸ್ಯರಾಗಿ ಸೇವೆ ಸಲ್ಲಿಸಿದರು.
ಬೆಂಗಳೂರಿನ ‘ಮ್ಯಾಕ್ಸ್ ಮುಲ್ಲರ್’ ಕಲಾ ಗ್ಯಾಲರಿ, ಮುಂಬೈನ ‘ತಾಜ್’ ಕಲಾ ಗ್ಯಾಲರಿ, ‘ಜಹಾಂಗೀರ’ ಕಲಾ ಗ್ಯಾಲರಿ, ನವದೆಹಲಿಯ ‘ಧರುಣಿ’ ಕಲಾ ಗ್ಯಾಲರಿಗಳಲ್ಲಿ ಮಾತ್ರವಲ್ಲದೆ ದೇಶ-ವಿದೇಶದ ಕಲಾ ಗ್ಯಾಲರಿಗಳಲ್ಲಿ ಅವರ ಕಲಾಕೃತಿಗಳು ಪ್ರದರ್ಶನಗೊಂಡಿವೆ. ‘ವಿಶ್ವಕನ್ನಡ ಸಮ್ಮೇಳನ’, ‘ಸಾರ್ಕ್ ಸಮ್ಮೇಳನ’, ‘ರಾಷ್ಟ್ರೀಯ ಕಲಾ ಉತ್ಸವ’ ಸೇರಿದಂತೆ ಪ್ರಮುಖ ಕಾರ್ಯಕ್ರಮಗಳಲ್ಲೂ ಅವರ ಕಲಾಕೃತಿಗಳು ಪ್ರದರ್ಶನಗೊಂಡಿವೆ.
‘ವೆಂಕಟಪ್ಪ ಪ್ರಶಸ್ತಿ’, ‘ರಾಷ್ಟ್ರೀಯ ಲಲಿತ ಅಕಾಡೆಮಿ’ ಪ್ರಶಸ್ತಿ , ‘ಕನ್ನಡ ರಾಜ್ಯೋತ್ಸವ’ ಪ್ರಶಸ್ತಿ, ‘ಪಟೇಲ್ ಟ್ರೋಫಿ’, ‘ಆರ್ಟ್ ಸೊಸೈಟಿ ಆಫ್ ಇಂಡಿಯಾ’ ಪ್ರಶಸ್ತಿ , ‘ರಾಜ್ಯ ಲಲಿತಕಲಾ ಅಕಾಡೆಮಿ’ ಪ್ರಶಸ್ತಿ ಹಾಗೂ ‘ಹಾಲಭಾವಿ ಕುಂಚಕಲಾ ತಪಸ್ವಿ’ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಬಂದಿರುವುದು ಇವರ ಕಲಾ ಸೇವೆಗೆ ಸಂದ ಗೌರವ
ಶ್ರೀಯುತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿ ಅಪಾರ ಕಲಾಭಿಮಾನಿ ಹಾಗೂ ಕಲಾರಾಸಿಕರನ್ನು ಅಗಲಿದ್ದಾರೆ.
Subscribe to Updates
Get the latest creative news from FooBar about art, design and business.
Previous Article30ನೇ ವರ್ಷದ ಆಳ್ವಾಸ್ ವಿರಾಸತ್–2024 | ದಶಂಬರ್ 10
Related Posts
Comments are closed.